ಭಾರತದಲ್ಲಿ POCO C71 ಲಾಂಚ್; 5,200mAh ಬ್ಯಾಟರಿ.. 32MP ಕ್ಯಾಮೆರಾ; ಅತೀ ಅಗ್ಗದ ಬೆಲೆ.. ಸೇಲ್ ಯಾವಾಗ?
ಪೊಕೊ ಪ್ರಿಯರ ಕಾಯುವಿಕೆ ಮುಗಿಯಿತು. ಕಂಪನಿಯು ಇಂದು ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 10,000 ರೂ.ಗಿಂತ ಕಡಿಮೆ ಇದೆ. ಹೌದು, ಬಹುನಿರೀಕ್ಷಿತ ಪೊಕೊ C71 (POCO C71) ಸ್ಮಾರ್ಟ್‌ಫೋನ್ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದನ್ನು ಪೊಕೊ C61 (POCO C61) ಫೋನಿನ ಉತ್ತರಾಧಿಕಾರಿ ಲಾಂಚ್ ಮಾಡಲಾಗಿದೆ. ಇದು ಡ್ಯುಯಲ್ ಟೋನ್ ಫಿನಿಶ್‌ನೊಂದಿಗೆ ಆಕರ್ಷಕ ವಿನ್ಯಾಸ ಹೊಂದಿದೆ. ಬನ್ನಿ, ಈ ಹೊಸ ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎನ್ನುವುದನ್ನು ತಿಳಿಯೋಣ.
ಪೊಕೊ C71 ಮೊಬೈಲ್ ಮೂರು ಬಣ್ಣಗಳಲ್ಲಿ ಲಾಂಚ್ ಆಗಿದೆ. ನೀವು ಡೆಸರ್ಟ್ ಗೋಲ್ಡ್, ಕೂಲ್ ಬ್ಲೂ ಮತ್ತು ಪವರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಮೊಬೈಲ್ ಯುನಿಸಾಕ್ T7250 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದು 6.88 ಇಂಚಿನ ಎಸ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ IP52 ರೇಟಿಂಗ್, 5,200mAh ಬ್ಯಾಟರಿ, 15W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ ಮತ್ತು ಮಾರಾಟದ ವಿವರ ತಿಳಿಯಲು ಮುಂದೆ ಓದಿ.

ಪೊಕೊ C71 ಫೋನಿನ ವೈಶಿಷ್ಟ್ಯಗಳು
ಪೊಕೊ C71 ಫೋನಿನ ಡಿಸ್ಪ್ಲೇ
ಪೊಕೊ C71 ಸ್ಮಾರ್ಟ್‌ಫೋನ್ 6.88 ಇಂಚಿನ ಎಸ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1640×720 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 120Hz ರಿಫ್ರೆಶ್ ದರ, ವಾಟರ್‌ಡ್ರಾಪ್ ನಾಚ್, 240Hz ಟಚ್ ಸ್ಯಾಂಪ್ಲಿಂಗ್ ದರ, 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು ವೆಟ್ ಹ್ಯಾಂಡ್ ಟಚ್ ಸಪೋರ್ಟ್ ಹೊಂದಿದೆ. ಪೊಕೊ C61 (POCO C61) ಫೋನಿಗೆ ಹೋಲಿಸಿದರೆ (6.71 ಇಂಚಿನ 90Hz) ಉತ್ತಮ ಡಿಸ್ಪ್ಲೇ ಹೊಂದಿದೆ.
ಪೊಕೊ C71 ಫೋನಿನ ಪ್ರೊಸೆಸರ್
ಪೊಕೊ C71 ಮೊಬೈಲ್ ಯುನಿಸಾಕ್ T7250 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. AnTuTu ನಲ್ಲಿ 308,000 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದೆ. ಇದು ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಪೊಕೊ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು ಎರಡು ವರ್ಷಗಳ ಆಂಡ್ರಾಯ್ಡ್ ಅಪ್‌ಗ್ರೇಡ್‌ಗಳು ಮತ್ತು ನಾಲ್ಕು ವರ್ಷಗಳ ಸಾಫ್ಟ್‌ವೇರ್ ನವೀಕರಣಗಳೊಂದಿಗೆ ಬರುತ್ತದೆ.
ಪೊಕೊ C71 ಫೋನಿನ ಸ್ಟೋರೇಜ್
ಪೊಕೊ C71 ಫೋನ್ 4GB RAM ಮತ್ತು 6GB RAM ಹೊಂದಿದೆ. ಜೊತೆಗೆ ವರ್ಚುವಲ್ RAM ನೊಂದಿಗೆ ಬರುತ್ತದೆ. ಇದಕ್ಕೆ ಪೂರಕವಾಗಿ 64GB ಮತ್ತು 128GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.
ಪೊಕೊ C71 ಫೋನಿನ ಕ್ಯಾಮೆರಾ ಸೆಟಪ್
ಪೊಕೊ C71 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾ ಸಹ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ.

ಪೊಕೊ C71 ಫೋನಿನ ಬ್ಯಾಟರಿ ಬ್ಯಾಕಪ್
ಪೊಕೊ C71 ಸ್ಮಾರ್ಟ್‌ಫೋನ್ 5,200mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದು ಈ ಅಗ್ಗದ ಬಜೆಟ್ ವಿಭಾಗದಲ್ಲಿನ ಈವರೆಗಿನ ದೊಡ್ಡ ಬ್ಯಾಟರಿ ಆಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಪೊಕೊ C61 ಮೊಬೈಲ್ 5,000mAh ಬ್ಯಾಟರಿ ಮತ್ತು 10W ಚಾರ್ಜಿಂಗ್ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಪೊಕೊ C71 ಮೊಬೈಲ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಜೊತೆಗೆ 3.5 ಎಂಎಂ ಆಡಿಯೊ ಜ್ಯಾಕ್, ಡ್ಯುಯಲ್ ಬ್ಯಾಂಡ್ ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ಪೊಕೊ ಬೆಲೆ ಮತ್ತು ಲಭ್ಯತೆ
ಪೊಕೊ C71 ಮೊಬೈಲ್ ಭಾರತದಲ್ಲಿ 6,499 ರೂ.ಗಳ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದು ಫೋನಿನ ಮೂಲ ಮಾದರಿ 4GB RAM + 64GB ಸ್ಟೋರೇಜ್ ಬೆಲೆಯಾಗಿದೆ. ಇನ್ನು 6GB RAM + 128GB ಸ್ಟೋರೇಜ್ ರೂಪಾಂತರವನ್ನು 7,499 ರೂ.ಗೆ ಪರಿಚಯಿಸಲಾಗಿದೆ. ಈ ಹೊಸ ಪೊಕೊ ಸ್ಮಾರ್ಟ್‌ಫೋನ್ ಏಪ್ರಿಲ್ 8 ರಂದು ಮಧ್ಯಾಹ್ನ 12 ಗಂಟೆಗೆ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.


Click it and Unblock the Notifications








