Home
ಮೊಬೈಲ್

ಭಾರತಕ್ಕೆ ಡಿ.9 ರಂದು Poco C85 5G ಎಂಟ್ರಿ ಖಚಿತ: ಫೀಚರ್ಸ್ ಬಹಿರಂಗ!

Xiaomi ಉಪ-ಬ್ರಾಂಡ್ Poco ತನ್ನ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ Poco C85 5G ಅನ್ನು ಭಾರತದಲ್ಲಿ ಶೀಘ್ರದಲ್ಲೇ ಪರಿಚಯಿಸಲು ಸಿದ್ಧವಾಗಿದೆ. ಡಿಸೆಂಬರ್ ಎರಡನೇ ವಾರದಲ್ಲೇ ಈ ಫೋನ್‌ನ್ನು ಲಾಂಚ್ ಮಾಡುವುದಾಗಿ ಕಂಪನಿಯು ಅಧಿಕೃತವಾಗಿ ಘೋಷಿಸಿದ್ದು, 6,000mAh ದೊಡ್ಡ ಬ್ಯಾಟರಿ ಹಾಗೂ 50MP AI ಮುಖ್ಯ ಕ್ಯಾಮೆರಾ ಸೇರಿದಂತೆ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ಖಚಿತಪಡಿಸಿದೆ. ಹೊಸ ಬಜೆಟ್ ಸೆಗ್ಮೆಂಟ್‌ನಲ್ಲಿ Poco ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗಿದೆ.

Poco C85 5G: ಭಾರತದಲ್ಲಿ ಬಿಡುಗಡೆ ದಿನಾಂಕ
Poco ಕಂಪೆನಿ ಒದಗಿಸಿರುವ ಅಧಿಕೃತ ಮಾಹಿತಿಯಂತೆ, ಡಿಸೆಂಬರ್ 9 ರಂದು ಮಧ್ಯಾಹ್ನ 12 ಗಂಟೆಗೆ Poco C85 5G ಫೋನ್ ಭಾರತದಲ್ಲಿ ಬಿಡುಗಡೆ ಆಗಲಿದೆ. ಬಿಡುಗಡೆಗೆ ಮೊದಲು ಬಿಡುಗಡೆ ಮಾಡಿದ ಟೀಸರ್‌ನಲ್ಲಿ ಫೋನ್‌ನ ವಿನ್ಯಾಸ ಬಹಳಷ್ಟು ಬಹಿರಂಗಗೊಂಡಿದ್ದು, ಹಿಂಭಾಗದ ಪ್ಯಾನೆಲ್‌ನಲ್ಲಿ ಲಂಬವಾಗಿ ಇರಿಸಲಾದ POCO ಬ್ರ್ಯಾಂಡಿಂಗ್ ಮತ್ತು ಮೇಲೆ ಮೂಲೆಯಲ್ಲಿ ಚದರ ಕ್ಯಾಮೆರಾ ಮಾಡ್ಯೂಲ್ ಕಾಣುತ್ತದೆ. ಜೊತೆಗೆ ಫೋನ್‌ನ ಕೆಲವು ಪ್ರಮುಖ ಫೀಚರ್‌ಗಳನ್ನೂ ಸಹ Poco ಹಂಚಿಕೊಂಡಿದೆ.

ಭಾರತಕ್ಕೆ ಡಿ.9 ರಂದು Poco C85 5G ಎಂಟ್ರಿ ಖಚಿತ: ಫೀಚರ್ಸ್ ಬಹಿರಂಗ!

ಟೀಸರ್ ಪ್ರಕಾರ, Poco C85 5G ಫೋನ್‌ನಲ್ಲಿ 6,000mAh ದೊಡ್ಡ ಬ್ಯಾಟರಿ ಸಿಗಲಿದ್ದು, 33W ಫಾಸ್ಟ್ ಚಾರ್ಜಿಂಗ್ ಜೊತೆಗೆ 10W ರಿವರ್ಸ್ ವೈರ್‌ಡ್ ಚಾರ್ಜಿಂಗ್ ಸಪೋರ್ಟ್ ನೀಡಲಾಗುತ್ತದೆ. ಈಗಾಗಲೇ Poco C85 5G ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರುವುದನ್ನು ದೃಢಪಡಿಸಲಾಗಿದೆ. ಇದರಲ್ಲಿ ಮುಖ್ಯವಾಗಿ 50MP AI ಪ್ರೈಮರಿ ಸೆನ್ಸರ್ ಅನ್ನು ಬಳಸಲಾಗುತ್ತಿದೆ. ಇನ್ನು ಫೋನ್ ಭಾರತದಲ್ಲಿ ಕನಿಷ್ಠ 'ಪರ್ಪಲ್' ಬಣ್ಣದಲ್ಲಿ ಲಭ್ಯವಾಗಲಿದ್ದು, ಇನ್ನಷ್ಟು ಬಣ್ಣ ಆಯ್ಕೆಗಳು ಲಾಂಚ್ ವೇಳೆ ಪರಿಚಯಗೊಳ್ಳಬಹುದು.

Poco C85 5G: ನಿರೀಕ್ಷಿತ ವೈಶಿಷ್ಟ್ಯಗಳು
ಇತ್ತೀಚಿನ ಲೀಕ್ ಪ್ರಕಾರ, Poco C85 5G ಗೂಗಲ್ ಪ್ಲೇ ಕನ್ಸೋಲ್‌ನಲ್ಲಿ 2508CPC2BI ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದೆ. ಇದರಲ್ಲಿ MediaTek Dimensity 6100+ 5G ಚಿಪ್‌ಸೆಟ್ ಬಳಸಲಾಗುತ್ತದೆ ಎಂದು ವರದಿ ಹೇಳುತ್ತದೆ. ಈ ಚಿಪ್‌ಸೆಟ್‌ವು 2 Arm Cortex-A76 ಕೋರ್‌ಗಳು ಮತ್ತು 6 Arm Cortex-A55 ಕೋರ್‌ಗಳೊಂದಿಗೆ 2.20GHz ಗರಿಷ್ಠ ಸ್ಪೀಡ್ ನೀಡುವ ಸಾಧ್ಯತೆ ಇದೆ. ಪ್ಲೇ ಲಿಸ್ಟಿಂಗ್ ಪ್ರಕಾರ, ಈ ಫೋನಿನಲ್ಲಿ 4GB RAM ಹಾಗೂ ಆಂಡ್ರಾಯ್ಡ್ 16 ಸಾಫ್ಟ್‌ವೇರ್ ಇರಬಹುದು ಎಂದು ಹೇಳಲಾಗಿದೆ.

ಜೊತೆಗೆ, Poco C85 5G ಫೋನ್ 720×1,600 ಪಿಕ್ಸೆಲ್ ರೆಸಲ್ಯೂಶನ್‌ನ HD+ ಡಿಸ್‌ಪ್ಲೇ ಮತ್ತು ವಾಟರ್‌ಡ್ರಾಪ್ ಸೆಲ್ಫಿ ನಾಚ್ ಹೊಂದಿರುವ ಸಾಧ್ಯತೆ ಇದೆ. ಆದರೆ, ಈ ಎಲ್ಲಾ ವೈಶಿಷ್ಟ್ಯಗಳು ಇರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಫೋನ್‌ನ ನಿಖರ ಬೆಲೆ ಹಾಗೂ ಸಂಪೂರ್ಣ ಸ್ಪೆಕ್ಸ್‌ಗಳು ಡಿಸೆಂಬರ್ 9ರಂದು ಅಧಿಕೃತವಾಗಿ ಪ್ರಕಟವಾಗಲಿವೆ. ಆದರೆ, ಬೃಹತ್ ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು AI ಕ್ಯಾಮೆರಾ ಫೀಚರ್‌ಗಳೊಂದಿಗೆ ಈ ಫೋನ್ ಬಜೆಟ್ 5G ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಆಯ್ಕೆಯಾಗಬಹುದು.

ಬಜೆಟ್ ಬೆಲೆಯಲ್ಲಿ ಇಂದು Redmi 15C 5G ಬಿಡುಗಡೆ!
Xiaomiಯ ಮತ್ತೊಂದು ಉಪಬ್ರ್ಯಾಂಡ್ Redmi ದೇಶದಲ್ಲಿ ಇಂದು(3, ಬುಧವಾರ) Redmi 15C 5G ಎಂಬ ಬಜೆಟ್ ಫೋನ್ ಬಿಡುಗಡೆ ಮಾಡಿದೆ. ದೇಶದಲ್ಲಿ Redmi 14C ಯಶಸ್ಸಿನ ನಂತರ, ಇದರ ಮುಂದಿನ ಪೀಳಿಗೆ ಸಾಧನವಾಗಿ Redmi 15C 5G ಫೋನ್ ಅನ್ನು ಪರಿಚಯಿಸಲಾಗಿದ್ದು, ಇದರಲ್ಲಿಯೂ ಸಹ ಬೃಹತ್ 6000mAh ಬ್ಯಾಟರಿ, ನಯವಾದ ವಿನ್ಯಾಸ ಮತ್ತು 50MP AI ಡ್ಯುಯಲ್ ಕ್ಯಾಮೆರಾ ವೈಶಿಷ್ಟ್ಯಗಳಿವೆ ಮತ್ತು ಬೆಲೆ ಕೂಡ 13 ಸಾವಿರಕ್ಕಿಂತ ಕಡಿಮೆ ಇದೆ. ಹಾಗಾದರೆ, ಹೊಸ Redmi 15C 5G ಫೋನ್ ಹೇಗಿದೆ? ಮತ್ತು ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
Poco is all set to launch its new budget 5G smartphone, the Poco C85 5G, in India soon. The company has officially announced that it will launch the phone in the second week of December and has confirmed that it will have a number of attractive features, including a large 6,000mAh battery and a 50MP AI main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+