Poco: ಸದ್ದಿಲ್ಲದೇ ಜಬರ್ದಸ್ತ್ ಫೋನ್ ಲಾಂಚ್: SONY ಕ್ಯಾಮೆರಾ.. 90W ಚಾರ್ಜಿಂಗ್.. ಯಾವ ಮಾಡೆಲ್?
Poco F6 Deadpool Limited Edition Launch: ಪೊಕೊ (Poco) ಕಂಪನಿಯು ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿದೆ. ಭಾರತದಲ್ಲಿ ತನ್ನ ಮೊದಲ ವಿಶೇಷ ಆವೃತ್ತಿಯ ಸ್ಮಾರ್ಟ್ ಮೊಬೈಲ್ ಅನ್ನು ಸದ್ದಿಲ್ಲದೇ ಬಿಡುಗಡೆ ಮಾಡಿದೆ. ಮಾರ್ವೆಲ್ ಚಲನಚಿತ್ರ ಡೆಡ್‌ಪೂಲ್ ಮತ್ತು ವೊಲ್ವೆರಿನ್ ಸಹಯೋಗದೊಂದಿಗೆ ಕಂಪನಿಯು ಈ ಹೊಸ ಆವೃತ್ತಿಯನ್ನು ಪ್ರಾರಂಭಿಸಿದೆ. ಈ ಹೊಸ ಸ್ಮಾರ್ಟ್‌ಫೋನ್ 12GB RAM ಮತ್ತು 50MP ಕ್ಯಾಮೆರಾದೊಂದಿಗೆ ಬರುತ್ತದೆ. ಇದರ ಬೆಲೆ, ಲಾಂಚ್ ಆಫರ್, ಮಾರಾಟದ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
Poco F6ನ ಡೆಡ್‌ಪೂಲ್ ಲಿಮಿಟೆಡ್ ಫೋನ್‌ನ ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು Poco F6 ನಂತೆಯೇ ಇರುತ್ತವೆ. ಇದು 6.67-ಇಂಚಿನ 120Hz 1.5K AMOLED ಡಿಸ್ಲ್ಪೇ, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 20 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ. Snapdragon 8s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.

ಹೊಸ Poco ಫೋನಿನ ಬೆಲೆ ಮತ್ತು ಲಭ್ಯತೆ
Poco ಈ ಸ್ಮಾರ್ಟ್‌ಫೋನ್ ಅನ್ನು ಕೇವಲ ಒಂದೇ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ. ಕಂಪನಿಯು ಈ ವಿಶೇಷ ಆವೃತ್ತಿಯ ಬೆಲೆಯನ್ನು 29,999 ರೂ.ಗೆ ನಿಗದಿಪಡಿಸಿದೆ. ಈ ಫೋನ್ ಆಗಸ್ಟ್ 7 ರಿಂದ Flipkart ಮೂಲಕ ಮಾರಾಟಕ್ಕೆ ಲಭ್ಯವಿರುತ್ತದೆ. (Poco F6 Deadpool Limited Edition Flipkart Sale Date).
ಫೋನ್‌ನ ಹಿಂಭಾಗದ ಫಲಕವು ಕೆಂಪು ಬಣ್ಣದಿಂದ ಕೂಡಿದೆ. ಇದನ್ನು ಡೆಡ್‌ಪೂಲ್‌ನ ಸೂಟ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಫೋನ್‌ನ ಹಿಂಭಾಗದಲ್ಲಿ ನೀವು ಡೆಡ್‌ಪೂಲ್ ಮತ್ತು ವೊಲ್ವೆರಿನ್‌ನ 3D ಚಿತ್ರವನ್ನು ಸಹ ಕಾಣಬಹುದು. ಮತ್ತು ಇದರ ಕ್ಯಾಮೆರಾ ಲೈಟ್‌ನಲ್ಲಿ ಡೆಡ್‌ಪೂಲ್ ಲೋಗೋ ಕೂಡ ಇದೆ. ಕ್ಯಾಮೆರಾ ಮಾಡ್ಯೂಲ್‌ನ ಕೆಳಭಾಗದಲ್ಲಿ ಸಣ್ಣ ಡೆಡ್‌ಪೂಲ್ ಬ್ರ್ಯಾಂಡಿಂಗ್ ಇದೆ.
ಈ ಸುದ್ದಿ ಓದಿದ್ದೀರಾ?: ಅಖಾಡಕ್ಕೆ Poco ಎಂಟ್ರಿ..! ಶೀಘ್ರದಲ್ಲೇ ಮತ್ತೊಂದು ಬಜೆಟ್ ಫೋನ್ ಬಿಡುಗಡೆ: ಎದುರಾಳಿಗಳಿಗೆ ನಡುಕ ಗ್ಯಾರಂಟಿ!
ಹೊಸ Poco ಫೋನಿನ ಫೀಚರ್ಸ್
ಡಿಸ್‌ಪ್ಲೇ: ಈ ಫೋನ್‌ನ ಡಿಸ್‌ಪ್ಲೇ ಬಗ್ಗೆ ಹೇಳುವುದಾದರೆ, ಇದು 6.67 ಇಂಚಿನ (2712 x 1220 ಪಿಕ್ಸೆಲ್‌ಗಳು) 1.5K AMOLED ಡಿಸ್ಲ್ಪೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 480Hz ಟಚ್ ಸ್ಯಾಂಪ್ಲಿಂಗ್ ದರ, 2400 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್, HDR10+, ಡಾಲ್ಬಿ ವಿಷನ್, 1920Hz, DWM ಡೈಯಿಂಗ್ ಜಿಮಿಮಿ ಗಾಜಿನ ವಿಕ್ಟಸ್ ರಕ್ಷಣೆ ಹೊಂದಿದೆ.
ಪ್ರೊಸೆಸರ್: ಫೋನಿನ ಪ್ರೊಸೆಸರ್ ಬಗ್ಗೆ ನೋಡುವುದಾದರೆ, ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s Gen 3 4nm ಚಿಪ್‌ಸೆಟ್ ಅನ್ನು POCO F6 ಡೆಡ್‌ಪೂಲ್ ಆವೃತ್ತಿಯಲ್ಲಿ ಕಾಣಬಹುದು. ಜೊತೆಗೆ Adreno 735 GPU ಒಳಗೊಂಡಿದೆ. 12GB LPPDDR5x RAM, 256GB UFS 4.0 ಸ್ಟೋರೇಜ್ ಇದೆ.
ಕ್ಯಾಮೆರಾ: ಇದು 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. f/1.59 ಅಪರ್ಚರ್, OIS, LED ಫ್ಲ್ಯಾಷ್ ಮತ್ತು ಸೆಲ್ಫಿಗಳಿಗಾಗಿ 20MP ಸೆಲ್ಫಿ ಶೂಟರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.
ಬ್ಯಾಟರಿ: ಈ ಫೋನ್ 160.5×74.4×7.8mm ಅಳತೆ ಮತ್ತು 179 ಗ್ರಾಂ ತೂಕವಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP64) ಆಗಿದೆ.
ಇತರೆ ಫೀಚರ್ಸ್: ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ, ಇನ್‌ಫ್ರಾರೆಡ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, Wi-Fi 6 802.11 be, Bluetooth 5.4, USB ಟೈಪ್-ಸಿ ಆಡಿಯೋ, ಹೈ-ರೆಸ್ ಆಡಿಯೋ, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ನಂತಹ ಸೌಲಭ್ಯ ಒಳಗೊಂಡಿದೆ.


Click it and Unblock the Notifications








