Home
ಮೊಬೈಲ್

ಪೊಕೊ M3 ಮತ್ತು ರಿಯಲ್‌ಮಿ 7i: ಬಜೆಟ್‌ ದರದಲ್ಲಿ ಖರೀದಿಗೆ ಯಾವುದು ಬೆಸ್ಟ್‌?

ಜನಪ್ರಿಯ ಪೊಕೊ ಮೊಬೈಲ್ ಕಂಪನಿಯು ಇತ್ತೀಚಿಗಷ್ಟೆ ಹೊಸದಾಗಿ ಪೊಕೊ M3 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದದೆ. ಈ ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ ಹಾಗೂ ಪ್ರೈಸ್‌ಟ್ಯಾಗ್‌ನಿಂದ ಗ್ರಾಹಕರ ಗಮನ ಸೆಳೆದಿದೆ. ಮುಖ್ಯವಾಗಿ ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ರಚನೆ ಪಡೆದಿರುವುದು ಹಾಗೂ 6,000mAh ಸಾಮರ್ಥ್ಯದ ಬ್ಯಾಟರಿ ಫೀಚರ್‌ನಿಂದ ಹೈಲೈಟ್‌ ಆಗಿ ಕಾಣಿಸಿಕೊಂಡಿದೆ. ಹೆಚ್ಚು ಕಡಿಮೆ ಅದೇ ಪ್ರೈಸ್‌ಟ್ಯಾಗ್‌ನ ರೇಂಜ್‌ನಲ್ಲಿ ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಸಹ ಗ್ರಾಹಕರನ್ನು ಆಕರ್ಷಿಸಿದೆ. ಆದರೆ ಇವೆರಡರಲ್ಲಿ ಯಾವುದು ಬೆಸ್ಟ್‌?.

ಪೊಕೊ

ಹೌದು, ರಿಯಲ್‌ ಮಿ ಸಂಸ್ಥೆಯ ನೂತನ ಪೊಕೊ M3 ಮತ್ತು ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಬಜೆಟ್‌ ದರದಲ್ಲಿ ಬೆಸ್ಟ್‌ ಅನಿಸುವಂತಹ ಫೀಚರ್ಸ್‌ಗಳನ್ನು ಪಡೆದಿವೆ. ಈ ಎರಡು ಫೋನ್‌ಗಳ ಬೆಲೆಯಲ್ಲಿ ಹೆಚ್ಚಿನ ಭಿನ್ನತೆ ಕಾಣಿಸದಿದ್ದರೂ, ಫೀಚರ್ಸ್‌ಗಳ ದೃಷ್ಠಿಯಿಂದ ಕೆಲವು ಭಿನ್ನತೆಗಳು ಇವೆ. ಹಾಗೆಯೇ ಕೆಲವು ಫೀಚರ್ಸ್‌ಗಳು ಸಾಮ್ಯತೆ ಹೊಂದಿವೆ. ಹಾಗಾದರೇ ಇವೆರಡರಲ್ಲಿ ಖರೀದಿಗೆ ಯಾವುದು ಉತ್ತಮ? ಇವೆರಡು ಫೋನ್‌ಗಳ ಸಂಪೂರ್ಣ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ್ ಹೇಗಿದೆ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ್ ಹೇಗಿದೆ

ಪೊಕೊ M3 ಸ್ಮಾರ್ಟ್‌ಫೋನ್ 1,080x2,340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 19.5:9 ರಚನೆಯ ಅನುಪಾತವನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಅದೇ ರೀತಿ ರಿಯಲ್‌ಮಿ 7i ಸ್ಮಾರ್ಟ್‌ಫೋನ್ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ಸ್ಕ್ರೀನ್ ರೀಫ್ರೇಶ್ ರೇಟ್ 90Hz ಆಗಿದೆ. ಇದರೊಂದಿಗೆ ಡಿಸ್‌ಪ್ಲೇಯು ಉತ್ತಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ.

ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ

ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ

ಪೊಕೊ M3 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ MIUI 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಅದೇ ರೀತಿ ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದೆ.

ಕ್ಯಾಮೆರಾ ಸೆನ್ಸಾರ್ ರಚನೆ

ಕ್ಯಾಮೆರಾ ಸೆನ್ಸಾರ್ ರಚನೆ

ಪೊಕೊ M3 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅದೇ ರೀತಿ ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಪಡೆದಿದ್ದು, ಉಳಿದಂತೆ ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನಲ್ಲಿ ಇವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಪೊಕೊ M3 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್, GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-ಸಿ, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. ಹಾಗೆಯೇ ರಿಯಲ್‌ಮಿ 7i ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಮೈಕ್ರೋ-USB ಪೋರ್ಟ್, ಬ್ಲೂಟೂತ್ v5.0 ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಪೊಕೊ M3 ಬೆಲೆ 6GB RAM+ 64GB ಶೇಖರಣಾ ರೂಪಾಂತರಕ್ಕೆ 10,999 ರೂ. ಹಾಗೂ 6GB RAM + 128GB ಶೇಖರಣಾ ಮಾದರಿಯ ಬೆಲೆ 11,999 ರೂ. ಆಗಿದೆ. ಇನ್ನು ರಿಯಲ್‌ಮಿ 7i ಸ್ಮಾರ್ಟ್‌ಫೋನ್ 4GB + 64GB ವೇರಿಯಂಟ್ ಬೆಲೆಯು 11,999 ರೂ. ಆಗಿದೆ. 4GB + 128GB ವೇರಿಯಂಟ್ ಬೆಲೆಯು 12,999ರೂ. ಆಗಿದೆ.

ಕೊನೆಯ ಮಾತು

ಕೊನೆಯ ಮಾತು

ಪೊಕೊ M3 ಸ್ಮಾರ್ಟ್‌ಫೋನ್ ಮತ್ತು ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಈ ಎರಡು ಫೋನ್‌ಗಳು ಬಜೆಟ್‌ ದರದಲ್ಲಿ ಗ್ರಾಹಕರನ್ನು ಸೆಳೆದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕ್ಯಾಮೆರಾ, ಪ್ರೊಸೆಸರ್‌ ಹಾಗೂ ಬ್ಯಾಟರಿ ಫೀಚರ್‌ಗಳಿಂದ ಈ ಫೋನ್‌ಗಳು ಭಿನ್ನತೆ ಹೊಂದಿವೆ. ಕ್ವಾಡ್‌ ಕ್ಯಾಮೆರಾ ಅಗತ್ಯ ಅನಿಸುವ ಗ್ರಾಹಕರಿಗೆ ರಿಯಲ್‌ ಮಿ 7i ಫೋನ್ ಗಮನ ಸೆಳೆಯಲಿದೆ. ಹಾಗೆಯೇ ಇತ್ತೀಚಿಗಿನ ಟ್ರೆಂಡಿಂಗ್ ಫೋನ್‌ ನೋಡುವವರಿಗೆ ಪೊಕೊ M3 ಫೋನ್ ಇಷ್ಟ ಅನಿಸಲಿದೆ.

Best Mobiles in India

English summary
Poco M3 VS Realme 7i Comparison: Which One Is Better To Buy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+