ಅತ್ಯಂತ ಅಗ್ಗದ POCO 5G ಫೋನ್ ಬಿಡುಗಡೆ; ಬೆಲೆ ಎಷ್ಟು? ವಿಶೇಷತೆಗಳೇನು ಗೊತ್ತಾ?
ಪೊಕೊ ತನ್ನ ಗ್ರಾಹಕರಿಗೆ ಸರ್ಪ್ರೇಸ್ ಗಿಫ್ಟ್ ನೀಡಿದೆ. ಸದ್ದಿಲ್ಲದೆ ಅಗ್ಗದ ಬೆಲೆಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಹೌದು, ಕಂಪನಿಯು ಕಳೆದ ವಾರ ಪೊಕೊ M7 5G (POCO M7 5G) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು POCO M6 ಫೋನಿನ ಉತ್ತರಾಧಿಕಾರಿಯಾಗಿದೆ. ವಿಶೇಷವೆಂದರೆ, POCO M7 Pro ಗಿಂತ ಕೈಗೆಟುಕುವ ಮೊಬೈಲ್ ಆಗಿದೆ. ಇದೀಗ, ಕಂಪನಿಯು ಪೊಕೊ M7 5G ಏರ್‌ಟೆಲ್ ವಿಶೇಷ ಆವೃತ್ತಿಯನ್ನು (POCO M7 5G Airtel Edition) ಪರಿಚಯಿಸಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಪೊಕೊ ಕಳೆದ ವರ್ಷ ಮಾರ್ಚ್‌ನಲ್ಲಿ ಅಗ್ಗದ 5G ಫೋನ್‌ಗಳನ್ನು ಮಾರುಕಟ್ಟೆಗೆ ತರಲು ಏರ್‌ಟೆಲ್‌ನೊಂದಿಗೆ (Airtel) ಒಪ್ಪಂದ (ಪಾಲುದಾರಿಕೆ) ಮಾಡಿಕೊಂಡಿತ್ತು. ಇದರ ಅಡಿಯಲ್ಲಿ, ಪೊಕೊ ಜುಲೈನಲ್ಲಿ POCO C61 ಏರ್‌ಟೆಲ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿತ್ತು. ಇದೀಗ ಪೊಕೊ M7 5G ಏರ್‌ಟೆಲ್ ವಿಶೇಷ ಆವೃತ್ತಿಯನ್ನು ತಂದಿದೆ. ಈ ಫೋನನ್ನು ಏರ್‌ಟೆಲ್ ನೆಟ್‌ವರ್ಕ್‌ಗೆ ಮಾತ್ರ ಬಳಸಬಹುದು. ಇದು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.

ಪೊಕೊ M7 5G ಏರ್‌ಟೆಲ್ ಆವೃತ್ತಿಯ ಬೆಲೆ ಮತ್ತು ಲಭ್ಯತೆ
ಪೊಕೊ M7 5G ಏರ್‌ಟೆಲ್ ಆವೃತ್ತಿಯನ್ನು ಕೇವಲ 9,249 ರೂ.ಗೆ ಬಿಡುಗಡೆ ಮಾಡಲಾಗಿದೆ. ಇದು ಎಲ್ಲಾ ಆಫರ್ ಒಳಗೊಂಡಿದೆ. ಈ ಮೊಬೈಲ್ ಇದೇ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಪ್ರಾರಂಭಿಸಲಿದೆ. ಇದು ಮೂರು ಬಣ್ಣಗಳಲ್ಲಿ ಬರುತ್ತದೆ. ನೀವು ಮಿಂಟ್ ಗ್ರೀನ್, ಸ್ಯಾಟಿನ್ ಬ್ಲಾಕ್ ಮತ್ತು ಓಷನ್ ಬ್ಲೂ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಪೊಕೊ M7 ಸ್ಟ್ಯಾಂಡರ್ಡ್ ಆವೃತ್ತಿಯ ಮೂಲ ರೂಪಾಂತರವನ್ನು 10,499 ರೂ.ಗೆ ಬಿಡುಗಡೆ ಮಾಡಲಾಗಿದೆ. ಇನ್ನೂ 8GB + 128GB ಸ್ಟೋರೇಜ್ ರೂಪಾಂತರದ ಬೆಲೆ 11,499 ಆಗಿದೆ.
ಪೊಕೊ M7 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಪೊಕೊ M7 5G ಸ್ಮಾರ್ಟ್‌ಫೋನ್ 6.88 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ, 1,640 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 600 nits ಹೈ-ಬ್ರೈಟ್‌ನೆಸ್ ಮೋಡ್‌ನೊಂದಿಗೆ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಪೊಕೊ M7 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಶಿಯೋಮಿ ಹೈಪರ್ ಓಎಸ್ ಜೊತೆಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ ಜಿಪಿಯು ಹೊಂದಿದೆ.

ಕ್ಯಾಮೆರಾ ಸೆಟಪ್
ಪೊಕೊ M7 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಪೊಕೊ M7 5G ಫೋನ್ 5160mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸುತ್ತದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.4, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








