Home
ಮೊಬೈಲ್

poco: ಪೊಕೊದಿಂದ ಶೀಘ್ರದಲ್ಲೇ ಭಾರತದಲ್ಲಿ ಅತ್ಯಂತ ಅಗ್ಗದ ಬೆಲೆಯ 5G ಫೋನ್‌

ಪೊಕೊ ಫೋನ್‌ಗಳಿಗೆ (Poco phone) ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಅದರಂತೆ ಭಾರತದಲ್ಲಿ ಹೆಚ್ಚು ಸೇಲ್‌ ಆಗುವ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ದೊಡ್ಡ ಅಲೆಯನ್ನು ಉಂಟು ಮಾಡಲು ಪೊಕೊ ಮುಂದಾಗಿದ್ದು, ಈ ವಿಭಾಗದಲ್ಲಿ 5G ಫೋನ್‌ ಅನ್ನು ಲಾಂಚ್‌ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಹೌದು, ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳು (5G smartphone) ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇಲ್ಲ. ಇದನ್ನೇ ಆಧಾರವಾಗಿರಿಸಿಕೊಂಡು ಕೆಲವು ಕಂಪೆನಿಗಳು ಈಗಾಗಲೇ ಅಗ್ಗದ ಬೆಲೆಯಲ್ಲಿ ಈ ಫೋನ್‌ಗಳನ್ನು ತಯಾರು ಮಾಡಲು ಮುಂದಾಗಿವೆ. ಅದರಂತೆ ಈಗ ಪೊಕೊ ಸಹ ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ 5G ಸ್ಮಾರ್ಟ್‌ಫೋನ್‌ ಅನಾವರಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಬನ್ನಿ ಪೊಕೊ ಭಾರತದಲ್ಲಿ ಲಾಂಚ್ ಮಾಡಲಿರುವ ಫೋನ್‌ ಮಾದರಿ ಯಾವುದು? ಇದಕ್ಕಾಗಿ ಭಾರತದಲ್ಲಿ ಯಾರ ಜೊತೆಗಾದರೂ ಸಹಯೋಗ ಪಡೆದಿದೆಯಾ ಅನ್ನೋದನ್ನು ತಿಳಿಯೋಣ.

ಪೊಕೊದಿಂದ ಶೀಘ್ರದಲ್ಲೇ ಭಾರತದಲ್ಲಿ ಅತ್ಯಂತ ಅಗ್ಗದ ಬೆಲೆಯ 5G ಫೋನ್‌

ಪೊಕೊದಿಂದ ಭಾರತದಲ್ಲಿ ಅಗ್ಗದ ಬೆಲೆಯ 5G ಸ್ಮಾರ್ಟ್‌ಫೋನ್‌: ಪೊಕೊದ ಭಾರತೀಯ ವಿಭಾಗದ ಮುಖ್ಯಸ್ಥರಾದ ಹಿಮಾಂಶು ಟಂಡನ್ ಅವರು ಈ ಸಂಬಂಧ ಮಾಹಿತಿಯೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅವರು ಇತ್ತೀಚೆಗೆ ಪೊಕೊ ಹಾಗೂ ಏರ್‌ಟೆಲ್‌ ಪಾಲುದಾರಿಕೆಯನ್ನು ದೃಢೀಕರಿಸಿದ ಪೋಸ್ಟ್‌ ಅನ್ನು ಅನ್ನು ಶೇರ್‌ ಮಾಡಿಕೊಂಡಿದ್ದು, ಇದು ಶೀಘ್ರದಲ್ಲೇ ಬರಲಿದೆ ಎಂದಷ್ಟೇ ಬರೆದಿದ್ದಾರೆ.

ಈ ಪೋಸ್ಟ್‌ಗೆ ಎಕ್ಸ್‌ ಬಳಕೆದಾರರು ಹೊಸ ಪೊಕೊ ನಿಯೋ ಸರಣಿಯೋ ಅಥವಾ F6 ಸರಣಿಯೋ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಂಡನ್, ಇದು ಅಸ್ತಿತ್ವದಲ್ಲಿರುವ ಮಾದರಿಯ ಏರ್‌ಟೆಲ್ (Airtel) ಆವೃತ್ತಿಯಲ್ಲ. ಬದಲಾಗಿ ಭಾರತದಲ್ಲಿ ಬಿಡುಗಡೆ ಆಗಲಿರುವ ಅತ್ಯಂತ ಕೈಗೆಟುಕುವ 5G ಫೋನ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ಇನ್ನೇನು ಕೆಲವೇ ವಾರಗಳಲ್ಲಿ ಪೊಕೊದ ಅಗ್ಗದ ಬೆಲೆಯ 5G ಫೋನ್‌ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಪೊಕೊ ಈ ಹಿಂದೆ ಏರ್‌ಟೆಲ್ ಪಾಲುದಾರಿಕೆಯಲ್ಲಿ ಪೊಕೊ C51 (Poco C51) ಮಾದರಿಯನ್ನು ಮರುಪ್ರಾರಂಭಿಸಿತ್ತು. ಈ ಸಹಯೋಗವು ಆ ಮಾದರಿಯನ್ನು ಖರೀದಿಸುವವರಿಗೆ ವಿಶೇಷ ಕೈಗೆಟುಕುವ ಪ್ಲ್ಯಾನ್‌ಗಳನ್ನು ಪರಿಚಯಿಸಿತ್ತು. ಆದರೆ, ಈಗ ಏರ್‌ಟೆಲ್‌ ಪ್ಲ್ಯಾನ್‌ ಹೊರತುಪಡಿಸಿ ಫೋನ್‌ನಲ್ಲೇ ವಿಶೇಷ ಪ್ರಯೋಜನ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಆದರೆ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್‌ ಯಾವುದು ಅನ್ನೋದು ಮಾತ್ರ ಇನ್ನೂ ಯಾರಿಗೂ ತಿಳಿದಿಲ್ಲ.

ಪೊಕೊದಿಂದ ಶೀಘ್ರದಲ್ಲೇ ಭಾರತದಲ್ಲಿ ಅತ್ಯಂತ ಅಗ್ಗದ ಬೆಲೆಯ 5G ಫೋನ್‌

ಈ ನಡುವೆ ಪೊಕೊ ಈ ತಿಂಗಳ ಕೊನೆಯಲ್ಲಿ ಪೊಕೊ X6 ನಿಯೋ (Poco X6 Neo) ಅನ್ನು ಪ್ರಾರಂಭಿಸಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್ ಪೊಕೊ X6 ಮತ್ತು ಪೊಕೊ X6 ಪ್ರೊ (Poco X6 and Poco X6 Pro) ವಿಭಾಗಕ್ಕೆ ಸೇರುತ್ತದೆ. ಇದನ್ನು ಕೆಲವೇ ದಿನಗಳ ಹಿಂದೆ ಚೀನಾದಲ್ಲಿ ಲಾಂಚ್‌ ಮಾಡಲಾಗಿದೆ. ಈ ಕಾರಣಕ್ಕೆ ಭಾರತದಲ್ಲಿ ಲಾಂಚ್‌ ಆಗಲಿರುವ ಫೋನ್‌ ಚೀನಾದಲ್ಲಿ ಬಿಡುಗಡೆಯಾದ ರೆಡ್ಮಿ ನೋಟ್ 13R ಪ್ರೊನ (Redmi Note 13R Pro) ಮರುಬ್ರಾಂಡ್ ಎಂದೂ ಸಹ ಊಹಿಸಲಾಗಿದೆ.

ಪೊಕೊದಿಂದ ಶೀಘ್ರದಲ್ಲೇ ಭಾರತದಲ್ಲಿ ಅತ್ಯಂತ ಅಗ್ಗದ ಬೆಲೆಯ 5G ಫೋನ್‌

ಫೋನ್‌ನ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿದ್ದು, ಅದರಂತೆ ಸೆಲ್ಫಿ ಶೂಟರ್‌ಗಾಗಿ ಈ ಫೋನ್‌ ಪಂಚ್ ಹೋಲ್ ಕಟೌಟ್, ಬಾಕ್ಸ್ ಚಾಸಿಸ್ ಮತ್ತು ರಿಯರ್‌ನಲ್ಲಿ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆನ್ಸರ್‌ ಆಯ್ಕೆ ಪಡೆಯಲಿದೆ ಎನ್ನಲಾಗಿದ್ದು, ಭಾರತದಲ್ಲಿ ಈ ಸ್ಮಾರ್ಟ್‌ಫೋನ್ 16,000 ರೂ.ಗಳ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಈ ಫೋನ್‌ನ ಲೀಕ್‌ ಫೀಚರ್ಸ್‌ ಬಗ್ಗೆ ಹೇಳುವುದಾದರೆ ಇದು 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.

Best Mobiles in India

English summary
Poco is said to be unveiling a 5G smartphone in India with a selection of exclusive features. It has collaborated with Airtel in this regard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+