ಪೊಕೊ X2 ಫಸ್ಟ್ ಲುಕ್: ಮೀಡ್‌ರೇಂಜ್ ಬೆಲೆಗೆ ಪೈಸಾ ವಸೂಲ್ ಸ್ಮಾರ್ಟ್‌ಫೋನ್!
ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಪೊಕೊ ಎಕ್ಸ್2 ಸ್ಮಾರ್ಟ್‌ಫೋನ್ ಈಗಾಗಲೆ ಗ್ರಾಹಕರನ್ನು ಆಕರ್ಷಿಸಿದೆ. ಪೊಕೊ ಎಫ್1 ಫೋನಿನ ಮುಂದುವರಿದ ಭಾಗವಾಗಿರುವ ಈ ಫೋನ್ ದೈತ್ಯ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. 64ಎಂಪಿ ಕ್ಯಾಮೆರಾ ಸೆನ್ಸಾರ್, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಈ ಫೋನ್ ಇದೇ ಫೆಬ್ರವರಿ 11 ರಂದು ಫಸ್ಟ್ ಸೇಲ್ ಕಂಡಿದ್ದು, ಮಾರುಕಟ್ಟೆಯಲ್ಲಿ ಮತ್ತಷ್ಟು ಸೌಂಡ್ ಹೊರಹಾಕಿದೆ.

ಹೌದು, ಪೊಕೊ ಎಕ್ಸ್2 ಸ್ಮಾರ್ಟ್‌ಫೋನಿನ ಮೀಡ್‌ರೇಂಜ್ ಪ್ರೈಸ್‌ಟ್ಯಾಗ್ ಹೊಂದಿದ್ದು, ಮಾರುಕಟ್ಟೆಯಲ್ಲಿ ರಿಯಲ್ ಮಿ ಎಕ್ಸ್2 ಸ್ಮಾರ್ಟ್‌ಫೋನಿಗೆ ನೇರ ಫೈಟರ್ ಆಗಿ ಗುರುತಿಸಿಕೊಂಡಿದೆ. ಇನ್ನು ಈ ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 6GB RAM+64GB, 6GB+128GB ಮತ್ತು 8GB RAM + 256GB ಆಗಿವೆ. ಈ ಫೋನ್ ರಿಯಲ್ ಮಿ ಎಕ್ಸ್2 ಫೋನ್‌ಗಿಂತ ಉತ್ತಮವಾಗಿದೆಯೇ?..ಈ ಫೋನಿನ ಕಾರ್ಯವೈಖರಿ ಹೇಗಿದೆ? ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ರಚನೆ ಹೇಗಿದೆ
ಪೊಕೊ X2 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.84.8% ಆಗಿದೆ. ವಿಶಾಲವಾದ ಡಿಸ್‌ಪ್ಲೇಯು ವಿಡಿಯೊ ವೀಕ್ಷಣೆಗೆ ಮತ್ತು ಗೇಮಿಂಗ್‌ಗೆ ಅತ್ಯುತ್ತಮ ವೇದಿಕೆ ರೂಪಿಸಿದೆ. ಇನ್ನು ಈ ಫೋನಿನ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 395ppi ಆಗಿದ್ದು, ಡಿಸ್‌ಪ್ಲೇಯು 120Hz ರೀಫ್ರೇಶಿಂಗ್ ರೇಟ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹೀಗಾಗಿ ಡಿಸ್‌ಪ್ಲೇಯ ಸ್ಕ್ರೀನ್ ಟಚ್ ಆಪರೇಟಿಂಗ್ ವೇಗ ಉತ್ತಮವಾಗಿದೆ. ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 5 ಸಹ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯವೆನು
ಪೊಕೊ X2 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದುಕೊಂಡಿದೆ. ಆಂಡ್ರಾಯ್ಡ್ 10 ಓಎಸ್ ನಲ್ಲಿ ಸಾಕಷ್ಟು ಹೊಸ ಫೀಚರ್ಸ್‌ಗಳು ಅಪ್‌ಡೇಟ್ ಆಗಿದ್ದು, ಬಳಕೆದಾರರಿಗೆ ಹೊಸ ಅನುಭವ ನೀಡುತ್ತದೆ. ಹಾಗೆಯೇ ಇದರಲ್ಲಿ ಅಡ್ರೆನೊ 618 ಗ್ರಾಫಿಕ್ಸ್ ಪಡೆದಿದೆ. ಇದರೊಂದಿಗೆ 6GB RAM + 64GB, 6GB RAM + 128GB ಮತ್ತು 8GB RAM + 256GB ಸಾಮರ್ಥ್ಯ ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.

64ಎಂಪಿ ಕ್ಯಾಮೆರಾ ವಿಶೇಷ
ಪೊಕೊ X2 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು ಸೋನಿಯ IMX686 ಸೆನ್ಸಾರ್ ಒಳಗೊಂಡ 64ಎಂಪಿ ಕ್ಯಾಮೆರಾ ಆಗಿದೆ. ಸೆಕೆಂಡರಿ ಕ್ಯಾಮೆರಾವು ಅಲ್ಟ್ರಾ ವೈಲ್ಡ್ ಆಂಗಲ್‌ನ 8ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಇನ್ನು ಮುಂಬದಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಅವುಗಳು 20ಎಂಪಿ ಮತ್ತು 2ಎಂಪಿ ಸೆನ್ಸಾರ್ ಹೊಂದಿವೆ. ಕ್ಯಾಮೆರಾ ಗುಣಮಟ್ಟ ಉತ್ತಮ ಅನಿಸಲಿದೆ.

ಬ್ಯಾಟರಿ ಬಲ
ಪೊಕೊ X2 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಇದರೊಂದಿಗೆ 27W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಫೋನ್ ವೇಗದ ಚಾರ್ಜ್ ಉತ್ತಮವಾಗಿದೆ. ಹಾಗೆಯೆ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ 802.11ac, ಎನ್‌ಎಫ್‌ಸಿ, ಜಿಪಿಎಸ್, ಯುಎಸ್‌ಬಿ, ಬ್ಲೂಟೂತ್, ಆಯ್ಕೆಗಳು ಇರಲಿವೆ. ಬ್ಲೂ, ರೆಡ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

ಬೆಲೆ ಎಷ್ಟಿದೆ?
ಪೊಕೊ ಎಕ್ಸ್2 ಸ್ಮಾರ್ಟ್‌ಫೋನ್ ಒಟ್ಟು ಮೂರು ವೇರಿಯಂಟ್ ಮಾದರಿಗಳಲ್ಲಿ ಲಾಂಚ್ ಆಗಿದ್ದು, 6GB RAM + 64GB ಬೇಸಿಕ್ ವೇರಿಯಂಟ್ ಬೆಲೆಯು 15,999ರೂ ಆಗಿದೆ. ಇನ್ನು 6GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 16,999ರೂ ಆಗಿದ್ದು, 8GB RAM + 256GB ಸಾಮರ್ಥ್ಯದ ಹೈಎಂಡ್ ವೇರಿಯಂಟ್ ಬೆಲೆಯು 19,999ರೂ.ಗಳಾಗಿದೆ.

ಕೊನೆಯ ಮಾತು
ಪೊಕೊ ಎಕ್ಸ್2 ಸ್ಮಾರ್ಟ್‌ಫೋನ್ ಪೊಕೊ ಎಫ್1 ಫೋನಗಿಂತ ಅಪ್‌ಡೇಟ್ ಫೀಚರ್ಸ್‌ಗಳೊಂದಿಗೆ ಅಟ್ರ್ಯಾಕ್ಟ್ ಲುಕ್ ಪಡೆದಿದೆ. ಮೀಡ್‌ರೇಂಜ್ ಬೆಲೆಯಲ್ಲಿ ಈ ಫೋನ್ ಉತ್ತಮ ಆಯ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications








