smartphones:10 ಸಾವಿರದ ಒಳಗೆ ಲಭ್ಯ ಇರುವ ಕ್ವಾಡ್ ರಿಯರ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಿವು!
ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಬಜೆಟ್ ಬೆಲೆಯ ಫೋನ್‌ಗಳಿಗೆ ಇನ್ನಿಲ್ಲದ ಬೇಡಿಕೆ ನಿರ್ಮಾಣ ಆಗಿದೆ. ಈ ಕಾರಣಕ್ಕೆ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಭಿನ್ನ ಫೀಚರ್ಸ್ ಆಯ್ಕೆಯ ಸಾಕಷ್ಟು ಬಜೆಟ್ ಬೆಲೆಯ ಫೋನ್‌ಗಳನ್ನು ಅನಾವರಣ ಮಾಡಿವೆ.
ಹೌದು, ಭಾರತದಲ್ಲಿ ಬಜೆಟ್ ಬೆಲೆಯ ಫೋನ್‌ಗಳಿಗೆ (Budget priced phone) ಹೆಚ್ಚಿನ ಬೇಡಿಕೆ ಇದ್ದು, ಈ ಫೋನ್‌ಗಳು ಬೆಲೆಗೆ ತಕ್ಕ ಫೀಚರ್ಸ್ ಪಡೆದಿದ್ದು, ಈ ಮೂಲಕ ಗ್ರಾಹಕರು ತಮಗೆ ಅಗತ್ಯವಾದ ಸೇವೆಗಳನ್ನು ಪಡೆಯುತ್ತಿದ್ದಾರೆ. ಈ ನಡುವೆ ನೀವೇನಾದರೂ ಕ್ವಾಡ್ ರಿಯರ್ ಕ್ಯಾಮೆರಾ (Quad rear camera) ಆಯ್ಕೆಯ ಅದರಲ್ಲೂ ಹತ್ತು ಸಾವಿರದ ಒಳಗೆ ಲಭ್ಯ ಇರುವ ಫೋನ್‌ಗಳನ್ನು ಸರ್ಚ್ ಮಾಡುತ್ತಿದ್ದರೆ ನಿಮಗೆ ಈ ಲೇಖನ ಉಪಯೋಗ ಆಗಲಿದೆ. ಹಾಗಿದ್ರೆ, ಬನ್ನಿ ಈ ಫೀಚರ್ಸ್ ಹಾಗೂ ಬೆಲೆಯಲ್ಲಿ ಯಾವೆಲ್ಲಾ ಫೋನ್‌ಗಳು ಲಭ್ಯ ಇವೆ ಅನ್ನೋದನ್ನು ಗಮನಿಸೋಣ.

ಪೊಕೊ M2: ಈ ಸ್ಮಾರ್ಟ್‌ಫೋನ್ (Poco M2) ಅನ್ನು ನೀವು 9,989 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಮೀಡಿಯಾಟೆಕ್ ಹಿಲಿಯೊ G80, ಆಕ್ಟಾ ಕೋರ್, 2 GHz ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6 GB RAM + 64 GB ಇಂಟರ್ ಸ್ಟೋರೇಜ್ ಆಯ್ಕೆ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಉಳಿದಂತೆ ಈ ಫೋನ್ 13 MP ಮುಖ್ಯ ಕ್ಯಾಮೆರಾದೊಂದಿಗೆ ಕ್ವಾಡ್ ರಿಯರ್ ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.
ಮೊಟೊರೊಲಾ ಮೊಟೊ G22: ಈ ಫೋನ್ (Motorola Moto G22) ಅನ್ನು ಕೇವಲ 8,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಸಹ ಮೀಡಿಯಾಟೆಕ್ ಹಿಲಿಯೊ G37, ಆಕ್ಟಾ ಕೋರ್, 2.3 GHz ಪ್ರೊಸೆಸರ್ ಬಲ ಪಡೆದಿದ್ದು, 4 GB RAM + 64 GB ಇಂಟರ್ ಸ್ಟೋರೇಜ್ ಹೊಂದಿದೆ. ಇದರ ಜೊತೆಗೆ 6.53 ಇಂಚಿನ 720 x 1600 ಪಿಕ್ಸೆಲ್ ಸ್ಕ್ರೀನ್ ಸಾಮರ್ಥ್ಯದ 90 Hz ರಿಫ್ರೆಶ್ ರೇಟ್ ಆಯ್ಕೆಯ ಡಿಸ್‌ಪ್ಲೇ ಹೊಂದಿದ್ದು, 50 MP ಮುಖ್ಯ ಕ್ಯಾಮೆರಾದೊಂದಿಗೆ ಕ್ವಾಡ್ ರಿಯರ್ ಹಾಗೂ 16 MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ನೋಕಿಯಾ 5.4: ಈ ಸ್ಮಾರ್ಟ್‌ಫೋನ್ (Nokia 5.4) 8,490 ರೂ.ಗಳ ಬೆಲೆಗೆ ಲಭ್ಯ ಇದೆ. ಇದು ಸ್ನಾಪ್‌ಡ್ರಾಗನ್ 662, ಆಕ್ಟಾ ಕೋರ್, 2 GHz ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM, 64 GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ 4000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಜೊತೆಗೆ 48 MP ಮುಖ್ಯ ಕ್ಯಾಮೆರಾದ ಜೊತೆಗೆ ಕ್ವಾಡ್ ರಿಯರ್ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ 5s: ಈ ಫೋನ್ (Realme 5s) 9,799 ರೂ.ಗಳ ಬೆಲೆಗೆ ಲಭ್ಯ ಇದೆ. ಇದು ಸ್ನಾಪ್‌ಡ್ರಾಗನ್ 665, ಆಕ್ಟಾ ಕೋರ್, 2 GHz ಪ್ರೊಸೆಸರ್ ಬಲ ಪಡೆದಿದ್ದು, 4 GB RAM, 64 GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 48 MP ಮುಖ್ಯ ಕ್ಯಾಮೆರಾದ ಜೊತೆಗೆ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಹಾಗೂ 13 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ 5: ಈ ಫೋನ್ (Realme 5) 9,999 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದು 4GB RAM + 64GB ಸ್ಟೋರೇಜ್ ಆಯ್ಕೆಯೊಂದಿಗೆ ಸ್ನಾಪ್‌ಡ್ರಾಗನ್ 665, ಆಕ್ಟಾ ಕೋರ್, 2 GHz ಪ್ರೊಸೆಸರ್ ಬಲ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 12 MP ಕ್ಯಾಮೆರಾದೊಂದಿಗೆ ಕ್ವಾಡ್ ರಿಯರ್ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು ವಿಶೇಷ ಎನಿಸಿದೆ.

ಮೊಟೊರೊಲಾ ಮೊಟೊ G10 ಪವರ್: ಈ ಸ್ಮಾರ್ಟ್‌ಫೋನ್ (Motorola Moto G10 Power) ಅನ್ನು 8,999ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಸ್ನಾಪ್‌ಡ್ರಾಗನ್ 460, ಆಕ್ಟಾ ಕೋರ್, 1.8 GHz ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 4 GB RAM, 64 GB ಇಂಟರ್ ಸ್ಟೋರೇಜ್ ಬೆಂಬಲದ ಜೊತೆಗೆ 6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 48 MP ಮುಖ್ಯ ಕ್ಯಾಮೆರಾದ ಜೊತೆಗೆ ಕ್ವಾಡ್ ರಿಯರ್ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








