ಸ್ಮಾರ್ಟ್‌ಫೋನ್‌ಗಳ ವೇಗವನ್ನು ಹೆಚ್ಚಿಸಲಿವೆ ಈ ಪ್ರೊಸೆಸರ್‌ಗಳು.!

|

ಸ್ಮಾರ್ಟ್‌ಫೋನ್‌ ಅತ್ಯುತ್ತಮ ಎಂದೆನಿಸಿಕೊಳ್ಳಲು ಅದಕ್ಕೆ ಹಲವು ಫೀಚರ್ಸ್‌ಗಳು ಮತ್ತು ಅದರ ಆಂತರಿಕ ತಂತ್ರಜ್ಞಾನ ಬಹಳ ಮುಖ್ಯ ಪಾತ್ರವಹಿಸುತ್ತದೆ ಅದರಲ್ಲೂ ಪ್ರೊಸೆಸರ್ ಸ್ಮಾರ್ಟ್‌ಫೋನಿನ ಶಕ್ತಿ ಕೇಂದ್ರವೆಂದು ಹೇಳಬಹುದಾಗಿದೆ. ಉನ್ನತ ಸಾಮರ್ಥ್ಯ ಪ್ರೊಸೆಸರ್ ಸ್ಮಾರ್ಟ್‌ಫೋನಿಗಳಿಗೆ ಬಲ ತುಂಬಲಿದ್ದು, ಚೂರುಕಾಗಿ ಕೆಲಸ ನಿರ್ವವಹಿಸಲು ಬುನಾದಿ ಒದಗಿಸುತ್ತವೆ.

ಸ್ಮಾರ್ಟ್‌ಫೋನ್‌ಗಳ ವೇಗವನ್ನು ಹೆಚ್ಚಿಸಲಿವೆ ಈ ಪ್ರೊಸೆಸರ್‌ಗಳು.!

ಸ್ಮಾರ್ಟ್‌ಫೋನ್‌ಗಳಿಗೆ ಬಲವರ್ಧಿಸುವ ಪ್ರೊಸೆಸರ್‌ಗಳಲ್ಲಿ ಪ್ರಸ್ತುತ ಸಾಕಷ್ಟು ಬದಲಾವಣೆಗಳು ನಡೆಯುತ್ತಿದ್ದು, ಹೆಚ್ಚಿನ ಸಾಮರ್ಥ್ಯದ ಪ್ರೊಸೆಸರ್‌ಗಳನ್ನು ಸ್ಮಾರ್ಟ್‌ಪೋನ್‌ಗಳಲ್ಲಿ ಅಳವಡಿಸಲಾಗುತ್ತಿದೆ. ಪ್ರೊಸೆಸರ್‌ಗಳಿಗೆ ಚಿಪ್‌ಸೇಟ್‌ ತಯಾರಿಸುವ 'ಕ್ವಾಲ್ಕಂ' ಸಂಸ್ಥೆಯು 'ಕ್ವಾಲ್ಕಂ AI' ದಿನವನ್ನು ಆಚರಿಸುತ್ತಿದ್ದು, ಇದೀಗ ಮೀಡ್‌ ರೇಂಜಿನ್ ಸ್ಮಾರ್ಟ್‌ಫೋನ್‌ಗಳಿಗಾಗಿ ಮೂರು ಹೊಸ ಪವರ್‌ಫುಲ್ ಪ್ರೊಸೆಸರ್‌ಗಳನ್ನು SoC ಪರಿಚಯಿಸಿದೆ.

ಸ್ಮಾರ್ಟ್‌ಫೋನ್‌ಗಳ ವೇಗವನ್ನು ಹೆಚ್ಚಿಸಲಿವೆ ಈ ಪ್ರೊಸೆಸರ್‌ಗಳು.!

ಸ್ನ್ಯಾಪ್‌ಡ್ರಾಗನ್ 665, 730, 730G ಪ್ರೊಸೆಸರ್‌ಗಳು ಕ್ವಾಲ್ಕಂ‌ನ ಹೊಸ ಪ್ರೊಸೆಸರ್‌ಗಳಾಗಿದ್ದು, ಕ್ಯಾಮೆರಾದಲ್ಲಿ AI ತಂತ್ರಜ್ಞಾನ ಸಹಿತ ಆಟೋಮ್ಯಾಟಿಕ್ ಆಯ್ಕೆಗಳು ಇರಲಿದ್ದು, ಮತ್ತು ಅಡೆತಡೆ ಇಲ್ಲದ ಗೇಮ್ಸ್‌ಗಳನ್ನು ಆಡಲು ಅನುಕೂಲವಾಗುವಂತಹ ವಿಶೇಷ ಸಾಮರ್ಥ್ಯವನ್ನು ಒಳಗೊಂಡಿರಲಿವೆ. ಹಾಗಾದರೇ ಕ್ವಾಲ್ಕಂ‌ನ ಹೊಸ ಪ್ರೊಸೆಸರ್‌ಗಳ ಇತರೆ ಅಂಶಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಕ್ವಾಲ್ಕಂ ಪ್ರೊಸೆಸರ್

ಕ್ವಾಲ್ಕಂ ಪ್ರೊಸೆಸರ್

ಕ್ವಾಲ್ಕಂ ಎಂಬುದು ಪ್ರೊಸೆಸರ್‌ಗಳಿಗೆ ಚಿಪ್‌ಸೇಟ್‌ ಅನ್ನು ತಯಾರಿಸಿ ಕೊಡುವ ಕಂಪನಿಯಾಗಿದ್ದು, ಆಂಡ್ರಾಯ್ಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ವಾಲ್ಕಮ್ ಚಿಪ್‌ಸೇಟ್‌ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಪ್ರೊಸೆಸರ್‌ಗಳನ್ನು ಪರಿಚಯಿಸಿದ್ದು, ಮೀಡ್‌ರೇಂಜ್ ಫೋನ್‌ಗಳಲ್ಲಿ ಹೈ ಎಂಡ್‌ ಫೀಚರ್ಸ್‌ಗಳು ಸೀಗುವಂತಾಗಿವೆ. ಸ್ಮಾರ್ಟ್‌ಫೋನ್‌ಗಳ ವೇಗವನ್ನು ಹೆಚ್ಚಿಸಲು ನೆರವಾಗುತ್ತಿವೆ.

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 665

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 665

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 665 14nm ರಚನೆಯನ್ನು ಹೊಂದಿದ್ದು. ಕ್ರಿಯೊ 260 ಆಕ್ಟಾಕೋರ್ ಸಿಪಿಯು ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಆಡ್ರೆನೊ 610 GPU ಸಹ ಇರಲಿದ್ದು, ಕೊರ್ಟೆಕ್ಸ್-A73 2.0ಗಿಗಾಹರ್ಡ್ಸ್ ಸಾಮರ್ಥ್ಯದಲ್ಲಿ GPU ಕೆಲಸ ನಿರ್ವಹಿಸಲಿದೆ. ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಒತ್ತನ್ನು ಈ ಪ್ರೊಸೆಸರ್‌ ಒದಗಿಸಲಿದ್ದು, 48 ಮೆಗಾಪಿಕ್ಸಲ್ ಜೊತೆಗೆ ತ್ರಿವಳಿ ಕ್ಯಾಮೆರಾಗೆ ಬೆಂಬಲದೊಂದಿಗೆ ಸ್ನ್ಯಾಪ್‌ಚಾಟ್‌ ಮೋಡ್ ಆಯ್ಕೆಗೆ ಸಹಕರಿಸಲಿದೆ.

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 730

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 730

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್‌ 10nm ರಚನೆಯನ್ನು ಹೊಂದಿದ್ದು. ಕ್ರಿಯೊ 470 ಆಕ್ಟಾಕೋರ್ ಸಿಪಿಯು ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಆಡ್ರೆನೊ 618 GPU ಸಹ ಇರಲಿದ್ದು, ಕೊರ್ಟೆಕ್ಸ್-A76, 2.2ಗಿಗಾಹರ್ಡ್ಸ್ ಸಾಮರ್ಥ್ಯದಲ್ಲಿ GPU ಕೆಲಸ ನಿರ್ವಹಿಸಲಿದೆ. ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಒತ್ತನ್ನು ಈ ಪ್ರೊಸೆಸರ್‌ ಒದಗಿಸಲಿದ್ದು, 48 ಮೆಗಾಪಿಕ್ಸಲ್ ಜೊತೆಗೆ ತ್ರಿವಳಿ ಕ್ಯಾಮೆರಾಗೆ ಬೆಂಬಲ ನೀಡುವ ಜೊತೆಗೆ 5X ಆಪ್ಟಿಕಲ್ ಝೂಮ್ ಆಯ್ಕೆಗೆ ಸಹಕರಿಸಲಿದೆ.

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 730G

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 730G

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 730G, ಈ ಪ್ರೊಸೆಸರ್ G ಸರಣಿಯದಾಗಿದ್ದು, G ಸರಣಿಯೂ ಗೇಮ್ಸ್‌ಗಳಿಗಾಗಿ ತಯಾರಾದಂತಹ ಪ್ರೊಸೆಸರ್‌ ಆಗಿದೆ. GPU ಗಳಿಗಿಂತ ಶೇ.15 ವೇಗದಲ್ಲಿ ಈ ಪ್ರೊಸೆಸರ್‌ ಇರಲಿದೆ. 700 ಸಿರೀಸ್ HDR ಸಾಮರ್ಥ್ಯದಲ್ಲಿ ಗೇಮ್ಸ್‌ಗಳಿಗೆ 10ಬಿಟ್ ಕಲರ್ ಡೆಪ್ತ್‌ ಇದಗಿಸಲಿದೆ. ಗ್ರಾಫಿಕ್ ವಿಭಾಗದಲ್ಲಿಯೂ ಇದರ ಕಾರ್ಯವೈಖರಿಯು ಅತ್ಯುತ್ತಮವಾಗಿರಲಿದೆ.

Best Mobiles in India

English summary
Qualcomm has announced three new chipsets for mid-range smartphones. These include the Snapdragon 665, Snapdragon 730, and a special gaming-centric Snapdragon 730G SoCs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X