ರಜನಿಕಾಂತ್ ಕೊಚಡೈಯಾನ್ ಫೋನ್ ಬರಲಿದೆ !

Posted By: Varun
ರಜನಿಕಾಂತ್ ಕೊಚಡೈಯಾನ್ ಫೋನ್ ಬರಲಿದೆ !

ಸೂಪರ್ ಸ್ಟಾರ್ ರಜನೀಕಾಂತ್ ನ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿರುವಕೊಚಡೈಯಾನ್ ಚಿತ್ರ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಹದಗೆಟ್ಟಿದ್ದ ಆರೋಗ್ಯದಿಂದ ಚೇತರಿಸಿಕೊಂಡ ಮೇಲೆ ಮಾಡುತ್ತಿರುವ ಮೊದಲ ಚಿತ್ರ ಇದಾಗಿರುವುದು ಮೊದಲ ಕಾರಣವಾದರೆ, ಹಾಲಿವುಡ್ ನ ಅವತಾರ್ ಚಿತ್ರದಲ್ಲಿ ಬಳಸಲಾದ ಮೋಶನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಚಿತ್ರಿಸಲಾಗುತ್ತಿರುವ ಭಾರತದ ಮೊದಲ ಚಿತ್ರ ಎಂಬುದು ಮತ್ತೊಂದು ವಿಶೇಷವಾಗಿದೆ.

ರಜನಿಕಾಂತ್ ರ ಕೊನೆಯ ಮಗಳು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೂ ಮೊಬೈಲಿಗೂ ಏನು ಸಂಬಂಧ ಅಂತಾ ನಮ್ಮನ್ನು ಕೇಳೋ ಮೊದಲು ನಾನೇ ಹೇಳಿಬಿಡ್ತೀನಿ. ಅದೇನೆಂದರೆಕೊಚಡೈಯಾನ್ ಚಿತ್ರ ನಿರ್ಮಿಸುತ್ತಿರುವ ಇರೋಸ್ ಇಂಟರ್ನ್ಯಾಷನಲ್ ಹಾಗು ಮೀಡಿಯಾಒನ್ ಸೇರಿಕೊಂಡು, ಕಾರ್ಬನ್ ಮೊಬೈಲ್ ನ ಜೊತೆ ಒಪ್ಪಂದ ಮಾಡಿಕೊಂಡಿದ್ದು, ರಜನೀಕಾಂತ್ ವಿಶೇಷ ಕೊಚಾಡಿಯಾನ್ ಮೊಬೈಲ್ ಅನ್ನು ಬಿಡುಗಡೆ ಮಾಡಲು ಒಪ್ಪಂದವಾಗಿದೆ.

ಈ ಫೋನಿನ ವಿಶೇಷವೇನೆಂದರೆಕೊಚಡೈಯಾನ್ ಚಿತ್ರದ ಹಾಡುಗಳು, ಟ್ರೈಲರ್ ಹಾಗು ರಜನಿ ರವರ ಫೇಮಸ್ ಡೈಲಾಗ್ ಗಳು, ವಾಲ್ ಪೇಪರ್ ಹಾಗು ಚಿತ್ರೀಕರಣದ ತುಣುಕುಗಳನ್ನೂ ಒಳಗೊಂಡಿರುವುದಂತೆ. ಅಕ್ಟೋಬರ್ ತಿಂಗಳಲ್ಲಿ ಕೊಚಾಡಿಯಾನ್ ಚಿತ್ರದ ಆಡಿಯೂ ಬಿಡುಗಡೆ ಸಮಯದಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಕಾರ್ಬನ್ ಕಂಪನಿಯ ಮೂಲಗಳು ತಿಳಿಸಿವೆ.

ರೋಬೋ ರಜನಿಕಾಂತ್ ರ ಹುಟ್ಟುಹಬ್ಬದಂದು (ಡಿಸೆಂಬರ್ 12) ಬಿಡುಗಡೆಯಾಗುತ್ತಿರುವ ಈ ಚಿತ್ರ ಸಿಕ್ಕಾಪಟ್ಟೆ ಹುಚ್ಚೆಬ್ಬಿಸಿದ್ದು, ಒಬ್ಬ ನಟನ ಚಿತ್ರಕ್ಕೆ ಎಂತಲೇ ಹೊಸ ಫೋನ್ ಒಂದು ಬಿಡುಗಡೆಯಾಗುತ್ತಿರುವುದು ಬಹುಷಃ ಭಾರತದಲ್ಲೇ ಮೊದಲನೆಯದಾಗಿರಬೇಕು.

ರಜನಿ ಎಂದರೆ ಸುಮ್ನೆನಾ ? ನೀವೇ ಹೇಳಿ.

 

ವೆಬ್ ಜಾಲಕ್ಕೂ ಸಿಕ್ಕಿಕೊಳ್ಳದ ರಜನಿ ಸೈಟ್ ನ ರಹಸ್ಯವೇನು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot