Home
ಮೊಬೈಲ್

'ರಿಯಲ್ ಮಿ 3' ಸ್ಮಾರ್ಟ್‌ಫೋನ್ ರಿಲೀಸ್‌ಗೆ ಮೂಹುರ್ತ ಫಿಕ್ಸ್! ಭರ್ಜರಿ ಸೇಲ್ ಕನ್ಫರ್ಮ್!!

ಚೀನಾ ಮೂಲದ 'ರಿಯಲ್ ಮಿ' ಸ್ಮಾರ್ಟ್‌ಫೋನ್ ಕಂಪನಿ ಕೆಲವೇ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದರೂ ಭಾರತೀಯರ ಮನಗೆದ್ದಿದೆ. ಇದೀಗ ಬಿಡುಗಡೆಗೆ ರೆಡಿ ಇರುವ ಕಂಪನಿಯ 'ರಿಯಲ್ ಮಿ 3' ಸ್ಮಾರ್ಟ್‌ಪೋನ್ ಅತೀ ಮುಂದುವರಿದ ಫೀಚರ್ಸ್‌ಗಳನ್ನು ಹೊಂದಿದ್ದು, ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಖತ್ ಸೌಂಡ್‌ ಮಾಡಲಿದೆ. ಮತ್ತು ಇತರೆ ಚೀನಾ ಮೂಲದ ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

'ರಿಯಲ್ ಮಿ 3' ಫೋನ್ ರಿಲೀಸ್‌ಗೆ ಮೂಹುರ್ತ ಫಿಕ್ಸ್! ಭರ್ಜರಿ ಸೇಲ್ ಕನ್ಫರ್ಮ್!!

ರಿಯಲ್ ಮಿ ಕಂಪನಿಯ ಬಹುನಿರೀಕ್ಷಿತ ರಿಯಲ್ ಮಿ 3 ಸ್ಮಾರ್ಟ್‌ಫೋನ್ ಇದೇ ಮಾರ್ಚ್ 4 ರಂದು ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಈ ಸ್ಮಾರ್ಟ್‌ಫೋನ್ 'ಆಂಡ್ರಾಯ್ಡ್ 9 ಪೈ ಓಎಸ್‌' ನೊಂದಿಗೆ, 'ಮೀಡಿಯಾಟೆಕ್‌ ಹಿಲಿಯೋ P70 ಚಿಪ್‌' ಸೆಟ್‌ ಪ್ರೊಸೆಸರ್ ಅನ್ನು ಒಳಗೊಂಡಿರಲಿದೆ. ಇದರ ಡಿಸ್‌ಪ್ಲೇಯು ವಾಟರ್ ಡ್ರಾಪ್ ನಾಚ್‌ನೊಂದಿಗೆ ಅತೀ ಕಡಿಮೆ ಅಂಚನ್ನು ಹೊಂದಿದೆ.

'ರಿಯಲ್ ಮಿ 3' ಫೋನ್ ರಿಲೀಸ್‌ಗೆ ಮೂಹುರ್ತ ಫಿಕ್ಸ್! ಭರ್ಜರಿ ಸೇಲ್ ಕನ್ಫರ್ಮ್!!

ಒಟ್ಟು ಎರಡು ಕ್ಯಾಮೆರಾಗಳನ್ನು ಹೊಂದಿರುವ 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ 24 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಮತ್ತು 30fps, ಸಾಮರ್ಥ್ಯದಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಇದರೊಂದಿಗೆ 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಹೊಂದಿರಲಿರುವ ಇನ್ನಿತರೆ ವಿಶೇಷ ಫೀಚರ್ಸ್‌ಗಳನ್ನು ತಿಳಿಯಲು ಮುಂದೆ ಓದಿರಿ.

ವಿನ್ಯಾಸ

ವಿನ್ಯಾಸ

ರಿಯಲ್ ಮಿ 3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಸುತ್ತಲೂ ಅತೀ ಕಡಿಮೆ ಅಂಚನ್ನು ಒಳಗೊಂಡಿದ್ದು, ವಾಟರ್ ಡ್ರಾಪ್ ನಾಚ್ ಸ್ಕ್ರೀನ್ ಇರಲಿದ್ದು, ತೆಳುವಾದ ರಚನೆಯೊಂದಿಗೆ ಕಡಿಮೆ ತೂಕವನ್ನು ಹೊಂದಿದೆ. ನಾಲ್ಕು ಮೂಲೆಗಳು ಹಾಫ್ ಕರ್ವ್ ಆಕಾರವನ್ನು ಪಡೆದಿದ್ದು, ಫೋನಿಗೆ ಸೌಂದರ್ಯ ನೀಡಿವೆ. ಸೆಲ್ಫಿ ಕ್ಯಾಮೆರಾ ಮುಂಬದಿಯ ಮೇಲ್ತುದಿಯ ಮಧ್ಯ ಭಾಗದಲ್ಲಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಅನುಪಾತವು 19:5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯ 409 ppi ಆಗಿದೆ. ವಿಶಾಲವಾದ ಡಿಸ್‌ಪ್ಲೇ ಅಂಚು ರಹಿತವಾಗಿದ್ದು, ಪೂರ್ಣ ಡಿಸ್‌ಪ್ಲೇ ವೀಕ್ಷಣೆಯ ಅನುಭವ ದೊರೆಯಲಿದೆ.

ಪ್ರೊಸೆಸರ್

ಪ್ರೊಸೆಸರ್

'ಮೀಡಿಯಾಟೆಕ್‌ ಹಿಲಿಯೋ P70 ಚಿಪ್‌' ಸೆಟ್‌ ಸಾಮರ್ಥ್ಯದ ವೇಗದ ಪ್ರೊಸೆಸರ್‌ ಅನ್ನು ಹೊಂದಿರುವ 'ರಿಯಲ್ ಮಿ 3' ಸಾರ್ಟ್‌ಫೋನ್ 'ಅಂಡ್ರಾಯ್ಡ್‌ 9 ಪೈ' ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ Mali-G72 MP3 ಗ್ರಾಫಿಕ್ಸ್ ಅನ್ನು ಸಹ ಒಳಗೊಂಡಿರಲಿದ್ದು, ಹೈ ಎಂಡ್ ಗೇಮ್ಸ್‌ ಆಡಬಹುದಾಗಿದೆ.

ಮೆಮೊರಿ

ಮೆಮೊರಿ

'ರಿಯಲ್ ಮಿ 3' ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯದೊಂದಿಗೆ 64 GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೂ ವಿಸ್ತರಿಸುವ ಅವಕಾಶವನ್ನು ಸಹ ಒದಗಿಸಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ರಿಯಲ್ ಮಿ 3 ಸ್ಮಾರ್ಟ್‌ಫೋನ್ ಎರಡು ಹಿಂಬದಿ ಕ್ಯಾಮೆರಾಗಳನ್ನು ಹೊಂದಿರಲಿದ್ದು, ಅವು ಕ್ರಮವಾಗಿ '24 ಮೆಗಾಪಿಕ್ಸಲ್' ಮತ್ತು '16 ಮೆಗಾಪಿಕ್ಸಲ್' ಸಾಮರ್ಥ್ಯವನ್ನು ಒಳಗೊಂಡಿರಲಿವೆ ಎಂದು ಹೇಳಲಾಗುತ್ತಿದೆ. ಮುಂಬದಿಯಲ್ಲಿ 16 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

4000mAh ಸಾಮರ್ಥ್ಯದ ಪವರ್‌ಫುಲ್ ದೀರ್ಘಬಾಳಿಕೆಯ ಬ್ಯಾಟರಿಯನ್ನು ಹೊಂದಿರಲಿದ್ದು, ಈ ಬ್ಯಾಟರಿಯು ಸುಮಾರು ಎರಡು ದಿನಗಳ ವರೆಗೆ ಬಾಳುವ ಶಕ್ತಿಯನ್ನು ಒಳಗೊಂಡಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಒದಗಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Best Mobiles in India

English summary
The Realme 3 has been tipped to get a number of features like a notched display, bezel-less screen and such. The Realme 3 launch date has already been fixed for March 4 next month.to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+