ಅಗ್ಗದ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ 'ರಿಯಲ್ ಮಿ 3' ಸ್ಮಾರ್ಟ್‌ಫೋನ್.!!

|

ದೇಶಿಯ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯಗೊಂಡಿರುವ 'ರಿಯಲ್‌ ಮಿ' ಸ್ಮಾರ್ಟ್‌ಫೋನ್‌ ಕಂಪನಿಯು ತನ್ನ ಬಹುನಿರೀಕ್ಷಿತ 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಇದೀಗ ಬಿಡುಗಡೆ ಆಗಿದೆ. ಅತ್ಯುತ್ತಮ ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನ ವರ್ಗದ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಟಾಂಗ ನೀಡಲಿದೆ.

ಅಗ್ಗದ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ 'ರಿಯಲ್ ಮಿ 3' ಫೋನ್.!!

ಹೌದು, ಭಾರತದಲ್ಲಿ ಇಂದು ಲಾಂಚ್‌ ಆಗಿರುವ 'ರಿಯಲ್ ಮಿ 3' ಸ್ಮಾರ್ಟ್‌ಫೋನ್, 3GB RAM+32GB ಮತ್ತು 4GB RAM+64GB ಸಾಮರ್ಥ್ಯದ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 'ಮೀಡಿಯಾಟೆಕ್‌ ಹಿಲಿಯೋ P70 ಚಿಪ್‌ ಪವರ್‌ಫುಲ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 8999ರೂ.ಗಳು ಆಗಿದೆ.

ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿರುವ 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ 24 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಮತ್ತು 30fps, ಸಾಮರ್ಥ್ಯದಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಗೇಮಿಂಗ್‌ಗೆ ಪೂರ್ಣ ಬೆಂಬಲ ನೀಡುವ ಶಕ್ತಿ ಹೊಂದಿದೆ. ಹಾಗಾದರೇ 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಹೊಂದಿರುವ ಇನ್ನಿತರೆ ವಿಶೇಷ ಫೀಚರ್ಸ್‌ಗಳನ್ನು ತಿಳಿಯಲು ಮುಂದೆ ಓದಿರಿ.

ವಿನ್ಯಾಸ

ವಿನ್ಯಾಸ

ರಿಯಲ್ ಮಿ 3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಸುತ್ತಲೂ ಅತೀ ಕಡಿಮೆ ಅಂಚನ್ನು ಒಳಗೊಂಡಿದ್ದು, ಡ್ಯುವ್‌ಡ್ರಾಪ್ ನಾಚ್ ಸ್ಕ್ರೀನ್ ಹೊಂದಿದೆ. ತೆಳುವಾದ ರಚನೆಯೊಂದಿಗೆ ಕಡಿಮೆ ತೂಕವನ್ನು ಹೊಂದಿರುದೆ. ಗ್ರೇಡಿಯಂಟ್ ಯೂನಿಬಾಡಿ ಡಿಸೈನ್ ರಚನೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ಗೆ ಹಿಂಬದಿಯಲ್ಲಿ ಫಿಂಗರ್ ಸೆನ್ಸಾರ್‌ ನೀಡಲಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

'ರಿಯಲ್ ಮಿ 3' ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಅನುಪಾತವು 19:5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯ 409 ppi ಆಗಿದೆ. ವಿಶಾಲವಾದ ಡಿಸ್‌ಪ್ಲೇ ಅಂಚು ರಹಿತವಾಗಿದ್ದು, ಪೂರ್ಣ ಡಿಸ್‌ಪ್ಲೇ ವೀಕ್ಷಣೆಯ ಅನುಭವ ದೊರೆಯಲಿದೆ.

ಪ್ರೊಸೆಸರ್

ಪ್ರೊಸೆಸರ್

'ಮೀಡಿಯಾಟೆಕ್‌ ಹಿಲಿಯೋ P70 ಚಿಪ್‌' ಸೆಟ್‌ ಸಾಮರ್ಥ್ಯದ ಪವರ್‌ಫುಲ್‌ ಪ್ರೊಸೆಸರ್‌ ಅನ್ನು ಹೊಂದಿರುವ 'ರಿಯಲ್ ಮಿ 3' ಸಾರ್ಟ್‌ಫೋನ್ 'ಅಂಡ್ರಾಯ್ಡ್‌ 9 ಪೈ' ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ Mali-G72 MP3 ಗ್ರಾಫಿಕ್ಸ್ ಅನ್ನು ಸಹ ಒಳಗೊಂಡಿದ್ದು, ಹೈ ಎಂಡ್ ಗೇಮ್ಸ್‌ಗಳನ್ನು ಅತ್ಯುತ್ತಮವಾಗಿ ಬೆಂಬಲಿಸುತ್ತದೆ.

AI ಕ್ಯಾಪ್ಯಾಬಲಿಟಿ

AI ಕ್ಯಾಪ್ಯಾಬಲಿಟಿ

ಸ್ಮಾರ್ಟ್‌ ಆಪ್‌ ರೆಕ್‌ಗ್ನೈಸ್‌ ಆಯ್ಕೆ ನೀಡಲಾಗಿದ್ದು, ಇದರೊಂದಿಗೆ ಆಟೋ ಸೀನ್ ರೆಕಗ್ನೈಸ್‌ ಆಯ್ಕೆ ಹೊಂದಿದೆ. ಮಂದಬೆಳಕಿನಲ್ಲಿ ಅತ್ಯುತ್ತಮ ಫೋಟೋಗಳ ಮೂಡಿಬರಲು ನೈಟ್‌ ಶಾರ್ಟ್‌ ಅಪ್ಟೀಮೈಸ್ ಆಯ್ಕೆಯನ್ನು ಒದಗಿಸಲಾಗಿದೆ. ಕ್ಯಾಮೆರಾದಲ್ಲಿ AI ಬ್ಯೂಟಿ ಆಯ್ಕೆಯನ್ನು ಒಳಗೊಂಡಿದೆ.

ಮೆಮೊರಿ

ಮೆಮೊರಿ

'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, 3GB RAM+32GB ಸಾಮರ್ಥ್ಯದಲ್ಲಿ ಮತ್ತು 4GB RAM ಸಾಮರ್ಥ್ಯದೊಂದಿಗೆ 64 GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೂ ವಿಸ್ತರಿಸುವ ಅವಕಾಶವನ್ನು ಸಹ ಒದಗಿಸಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ರಿಯಲ್ ಮಿ 3 ಸ್ಮಾರ್ಟ್‌ಫೋನ್ ಎರಡು ಹಿಂಬದಿ ಕ್ಯಾಮೆರಾಗಳನ್ನು ಹೊಂದಿದ್ದು, ಅವು ಕ್ರಮವಾಗಿ '24 ಮೆಗಾಪಿಕ್ಸಲ್' ಮತ್ತು '16 ಮೆಗಾಪಿಕ್ಸಲ್' ಸಾಮರ್ಥ್ಯವನ್ನು ಒಳಗೊಂಡಿರುವ ಜತೆ F/1.8 ಅಪರ್ಚರ್ ಅನ್ನು ಹೊಂದಿದೆ. ಹಾಗೇ ಮುಂಬದಿಯಲ್ಲಿ 13 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು. f/2.0 ಅಪರ್ಚರ್ ಅನ್ನು ಹೊಂದಿದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

4230mAh ಸಾಮರ್ಥ್ಯದ ಪವರ್‌ಫುಲ್ ದೀರ್ಘಬಾಳಿಕೆಯ ಬ್ಯಾಟರಿಯನ್ನು ಹೊಂದಿದ್ದು, ಪ್ರೊಸೆಸರ್‌ ಬ್ಯಾಟರಿ ಉಳಿಕೆಯಗೆ ಸಹಕರಿಸುತ್ತದೆ. ಈ ಬ್ಯಾಟರಿಯು ಸುಮಾರು ಎರಡು ದಿನಗಳ ವರೆಗೆ ಬಾಳುವ ಶಕ್ತಿಯನ್ನು ಒಳಗೊಂಡಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಒದಗಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬೆಲೆ?

ಬೆಲೆ?

ಭಾರತದಲ್ಲಿ ಇಂದು ಬಿಡುಗಡೆ ಆಗಿರುವ 'ರಿಯಲ್‌ ಮಿ 3' ಸ್ಮಾರ್ಟ್‌ಫೋನ್ ಇದೇ ಮಾರ್ಚ್‌ 12 ರಿಂದ ಜನಪ್ರಿಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭಿಸಲಿದ್ದು, 3GB+32GB ಮಾದರಿಯ ವೇರಿಯಂಟ್ ಬೆಲೆ 8999ರೂ.ಗಳು ಮತ್ತು 4GB+64GB ಮಾದರಿಯ ವೇರಿಯಂಟ್ ಬೆಲೆ 10,999ರೂ.ಗಳು

Best Mobiles in India

English summary
The Realme 3 launch event is taking place in New Delhi.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X