ಶುರುವಾಗಲಿದೆ 'ರಿಯಲ್‌ ಮಿ 3 ಪ್ರೋ' ಪ್ರೀ ಬುಕ್ಕಿಂಗ್!.'R ಪಾಸ್‌' ಪಡೆಯುವ ಅವಕಾಶ!

|

ಒಪ್ಪೊ ಕಂಪನಿಯ ಸಬ್‌ ಬ್ರ್ಯಾಂಡ್‌ ಆಗಿರುವ 'ರಿಯಲ್‌ ಮಿ' ಕಂಪನಿಯ ಬಹುನಿರೀಕ್ಷಿತ 'ರಿಯಲ್‌ ಮಿ 3 ಪ್ರೋ' ಸ್ಮಾರ್ಟ್‌ಫೋನಿನ ಪ್ರೀ ಬುಕ್ಕಿಂಗ್ ಇದೇ ಏಪ್ರಿಲ್‌ 19 ರಂದು ಆರಂಭವಾಗಲಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರು ಬುಕ್ಕ್ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದ್ದು, ಶಿಯೋಮಿ ರೆಡ್ಮಿ ನೋಟ್‌ 7 ಪ್ರೋ ಗೆ ಸೆಡ್ಡು ಹೊಡೆಯಲಿದೆ.

ಶುರುವಾಗಲಿದೆ 'ರಿಯಲ್‌ ಮಿ 3 ಪ್ರೋ' ಪ್ರೀ ಬುಕ್ಕಿಂಗ್!.'R ಪಾಸ್‌' ಪಡೆಯಿರಿ!

'ರಿಯಲ್‌ ಮಿ 3 ಪ್ರೋ' ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು ರಿಜಿಸ್ಟರ್‌ ಮಾಡಬಹುದಾಗಿದ್ದು, ರಿಜಿಸ್ಟರ್‌ ಮಾಡಿದ ಕೆಲವು ಅದೃಷ್ಟಶಾಲಿಗಳಿಗೆ ಕಂಪನಿ ಆರ್‌ ಪಾಸ್‌(R pass) ನೀಡಲಿದೆ. 'ಆರ್‌ ಪಾಸ್‌' ಪಡೆದ ಗ್ರಾಹಕರಿಗೆ ಫ್ಲ್ಯಾಶ್ ಸೇಲ್‌ನಲ್ಲಿ 'ರಿಯಲ್‌ ಮಿ 3 ಪ್ರೋ' ಸ್ಮಾರ್ಟ್‌ಫೋನ್‌ ಸೀಗಲಿದ್ದು, ಈ ಸ್ಮಾರ್ಟ್‌ಫೋನ್‌ ಇದೇ ಏಪ್ರಿಲ್‌ 22 ರಂದು ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್‌ ಆಗಲಿದೆ.

ಶುರುವಾಗಲಿದೆ 'ರಿಯಲ್‌ ಮಿ 3 ಪ್ರೋ' ಪ್ರೀ ಬುಕ್ಕಿಂಗ್!.'R ಪಾಸ್‌' ಪಡೆಯಿರಿ!

ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಿರುವ ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯೆಂದರೆ ಕ್ಯಾಮೆರಾ ಮತ್ತು ಬ್ಯಾಟರಿ ಆಗಿದ್ದು, 48ಎಂಪಿ ರೇರ್ ಕ್ಯಾಮೆರಾ ಇರಲಿದ್ದು, ಇದರೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದೆ. ಹಾಗಾದರೇ 'ರಿಯಲ್‌ ಮಿ 3 ಪ್ರೋ' ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

1,080 x 2,340 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಡಿಸ್‌ಪ್ಲೇಯಿಂದ ಬಾಡಿಯ ರಚನೆಯ ನಡುವಿನ ಅನುಪಾತವು 19.5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್‌ಪ್ಲೇಯ ಅನುಭವ ನೀಡಲಿದೆ ಎನ್ನಲಾಗಿದೆ.

ಪ್ರೊಸೆಸರ್

ಪ್ರೊಸೆಸರ್

ಕ್ಚಾಲ್ಕಮ್ ಚಿಪ್‌ ಸೆಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್‌ ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಹೊಂದಿರಲಿದೆ. ಆಂಡ್ರಾಯ್ಡ್‌ 9.0 ಪೈ ಓಎಸ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. 4GB + 32GB, 4GB + 64GB ಮತ್ತು 6GB + 64GB ಮೂರು ವೇರಿಯಂಟ್‌ಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗುತ್ತದೆ.

ಕ್ಯಾಮೆರಾ

ಕ್ಯಾಮೆರಾ

ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಮತ್ತು ಸೋನಿಯ IMX519 ಸೆನ್ಸಾರ್‌ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ.

ಬ್ಯಾಟರಿ

ಬ್ಯಾಟರಿ

ಸುಮಾರು 4500mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗುವುದು ಎನ್ನುತ್ತಿವೆ ಲೀಕ್ ಮಾಹಿತಿಗಳು. ಇದರೊಂದಿಗೆ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ಗಾಗಿ VOOC 3.0, ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ.

ಬೆಲೆ

ಬೆಲೆ

ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿದ್ದು, ಹೀಗಾಗಿ ಭಿನ್ನ ಬೆಲೆಯ ಶ್ರೇಣಿಯನ್ನು ಹೊಂದಿರಲಿವೆ. ಬ್ಲ್ಯಾಕ್ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಗಳು ಇರಲಿವೆ. ಆದರೆ 6 GB RAM / 64 GB ವೇರಿಯಂಟ್ ಬೆಲೆಯು 18990ರೂ.ಗಳು ಇರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Realme 3 Pro ‘Blind’ Pre-Bookings Open April 19; Fast Charging Support Teased.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X