Home
ಮೊಬೈಲ್

'ರಿಯಲ್ ಮಿ 3 ಪ್ರೋ' ಸ್ಮಾರ್ಟ್‌ಫೋನ್ ಲಾಂಚ್‌ಗೆ ಮೂಹೂರ್ತ ಫಿಕ್ಸ್!

ಭಾರತೀಯ ಗ್ರಾಹಕರನ್ನು ಸೆಳೆದಿರುವ ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳಲ್ಲಿ 'ರಿಯಲ್‌ ಮಿ' ಕೂಡಾ ಒಂದಾಗಿದ್ದು, ಇತ್ತೀಚಿಗೆ ಬಿಡುಗಡೆ ಆಗಿರುವ ರಿಯಲ್ ಮಿ 3 ಸ್ಮಾರ್ಟ್‌ಫೋನ್‌ ಈಗಾಗಲೇ ಬೆಸ್ಟ್‌ ಎಂದೆನಿಸಿಕೊಂಡಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಕಂಪನಿಯು 'ರಿಯಲ್‌ ಮಿ 3 ಪ್ರೋ' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಿದ್ದು, 'ರೆಡ್ಮಿ ನೋಟ್‌ 7 ಪ್ರೋ' ಗೆ ಎದುರಾಳಿ ಆಗಲಿದೆ.

'ರಿಯಲ್ ಮಿ 3 ಪ್ರೋ' ಸ್ಮಾರ್ಟ್‌ಫೋನ್ ಲಾಂಚ್‌ಗೆ ಮೂಹೂರ್ತ ಫಿಕ್ಸ್!

ಹೌದು, ರಿಯಲ್‌ ಮಿ ಕಂಪನಿಯು ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನ್‌ ಅನ್ನು ಇದೇ ಏಪ್ರಿಲ್ 22 ರಂದು ದೇಶಿಯ ಮಾರುಕಟ್ಟೆಯಲ್ಲಿ ರಿಲೀಸ್‌ ಮಾಡಲಾಗುವುದು ಎಂದು ಕಂಪನಿಯ ಸಿಇಓ ಮಾಧವ ಶೇಠ ಟ್ವಿಟ್ಟ್ ಮಾಡಿದ್ದಾರೆ. ಕಂಪನಿಯ ಫ್ಲ್ಯಾಗ್‌ಶಿಫ್ ಫೋನಾಗಿದ್ದು, ಶಿಯೋಮಿಯ ರೆಡ್ಮಿ ನೋಟ್‌ 7 ಪ್ರೋ ಗೆ ಪ್ರತಿಸ್ಪರ್ಧಿ ಆಗಲಿದೆ ಎನ್ನಲಾಗುತ್ತದೆ. 48ಎಂಪಿ ಕ್ಯಾಮೆರಾ ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನಿನ ಹೈಲೆಟ್ಸ್‌ ಎನ್ನಬಹುದು.

'ರಿಯಲ್ ಮಿ 3 ಪ್ರೋ' ಸ್ಮಾರ್ಟ್‌ಫೋನ್ ಲಾಂಚ್‌ಗೆ ಮೂಹೂರ್ತ ಫಿಕ್ಸ್!

ಅತ್ಯುತ್ತಮ ಬ್ಯಾಟರಿ ಶಕ್ತಿಯೊಂದಿಗೆ VOOC 3.0 ಚಾರ್ಜರ್‌ ತಂತ್ರಜ್ಞಾನ ಒದಗಿಸಲಾಗಿರಲಿದೆ. ಹಾಗೇ ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್‌ ಮತ್ತು ಡಿಸ್‌ಪ್ಲೇ ರೆಸಲ್ಯೂಶನ್‌ ಈ ಸ್ಮಾರ್ಟ್‌ಫೋನಿನ ಆಕರ್ಷಕ ಅಂಶಗಳಾಗಿದೆ. ಹಾಗಾದರೇ ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಹೊಂದಿರುವ ಇತರೆ ಫೀಚರ್ಸ್‌ಗಳೇನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

1,080 x 2,340 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಡಿಸ್‌ಪ್ಲೇಯಿಂದ ಬಾಡಿಯ ರಚನೆಯ ನಡುವಿನ ಅನುಪಾತವು 19.5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್‌ಪ್ಲೇಯ ಅನುಭವ ನೀಡಲಿದೆ ಎನ್ನಲಾಗಿದೆ.

ಪ್ರೊಸೆಸರ್

ಪ್ರೊಸೆಸರ್

ಕ್ಚಾಲ್ಕಮ್ ಚಿಪ್‌ ಸೆಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್‌ ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಹೊಂದಿರಲಿದೆ. ಆಂಡ್ರಾಯ್ಡ್‌ 9.0 ಪೈ ಓಎಸ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. 4GB + 32GB, 4GB + 64GB ಮತ್ತು 6GB + 64GB ಮೂರು ವೇರಿಯಂಟ್‌ಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗುತ್ತದೆ.

ಕ್ಯಾಮೆರಾ

ಕ್ಯಾಮೆರಾ

ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಮತ್ತು ಸೋನಿಯ IMX519 ಸೆನ್ಸಾರ್‌ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ನೀಡಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ.

ಬ್ಯಾಟರಿ

ಬ್ಯಾಟರಿ

ಸುಮಾರು 4500mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗುವುದು ಎನ್ನುತ್ತಿವೆ ಲೀಕ್ ಮಾಹಿತಿಗಳು. ಇದರೊಂದಿಗೆ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ಗಾಗಿ VOOC 3.0, ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ.

ಬೆಲೆ

ಬೆಲೆ

ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿದ್ದು, ಹೀಗಾಗಿ ಭಿನ್ನ ಬೆಲೆಯ ಶ್ರೇಣಿಯನ್ನು ಹೊಂದಿರಲಿವೆ. ಬ್ಲ್ಯಾಕ್ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಗಳು ಇರಲಿವೆ. ಆದರೆ 6 GB RAM / 64 GB ವೇರಿಯಂಟ್ ಬೆಲೆಯು 18990ರೂ.ಗಳು ಇರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Realme 3 Pro is all set to launch in India on April 22. Realme has confirmed the launch date through a tweet posted on Thursday.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+