Just In
- 43 min ago
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- 16 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 16 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- 19 hrs ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
Don't Miss
- Movies
Sara Annaiah: 'ಕನ್ನಡತಿ'ಯ ವರೂಧಿನಿ ಈಗ 'ನಮ್ಮ ಲಚ್ಚಿ' ಜೊತೆ ಪ್ರತ್ಯಕ್ಷ.. ಏನಿದು ಹೊಸ ಸುದ್ದಿ?
- Sports
Ind Vs Aus Test : ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡೋದೆ ಅನುಮಾನ !
- News
ಮೈಸೂರಿನ ಒಬ್ಬರಿಗೆ ಪದ್ಮಭೂಷಣ, ಇಬ್ಬರಿಗೆ ಪದ್ಮಶ್ರೀ ಪ್ರಶಸ್ತಿ, ಇಲ್ಲಿದೆ ನೋಡಿ ವಿವರ
- Automobiles
ವಿದೇಶದಲ್ಲಿ 20 ಲಕ್ಷವಿದ್ದ ಕಾರು ಭಾರತಕ್ಕೆ ಬಂದರೆ 50 ಲಕ್ಷ ರೂ. ದುಬಾರಿಯಾಗಲು ಕಾರಣವೇನು..?
- Finance
Padma Awards 2023: ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರು ಯಾರು?
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದು 'ರಿಯಲ್ ಮಿ 3 ಪ್ರೋ' ಮೊದಲ ಸೇಲ್ ಶುರು!.ಆರಂಭಿಕ ಬೆಲೆ 13,999ರೂ!
ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ 'ರಿಯಲ್ ಮಿ 3 ಪ್ರೋ' ಸ್ಮಾರ್ಟ್‌ಫೋನ್ ಇತ್ತೀಚಿಗೆ ಲಾಂಚ್ ಆಗಿದ್ದು, ಈ ಸ್ಮಾರ್ಟ್‌ಫೋನ್ ಭಾರತದಲ್ಲಿಂದು ಮೊದಲ ಸೇಲ್ ಆರಂಭಿಸಲಿದೆ. ಮಧ್ಯಾಹ್ನ 12 ಗಂಟೆಗೆ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಶುರುವಾಗಲಿದ್ದು, ಈ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್ ಗ್ರಾಹಕರ ಕೈಸೇರಲಿದೆ.

ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನಿನ ಪ್ರಮುಖ ಕೀ ಹೈಲೈಟ್ಸ್ ಎಂದರೇ, 6.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್ ಶಕ್ತಿ ಒದಗಿಸಲಾಗಿದೆ. ಫೋನ್ ವೇಗವಾಗಿ ಮಲ್ಟಿಕಾಸ್ಕ್ ಕೆಲಸಗಳನ್ನು ನಿರ್ವಹಿಸಲಿದೆ. ಹಾಗೇ 4GB ಮತ್ತು 6GB RAM ಎರಡು ವೇರಿಯಂಟ್ ಮಾದರಿಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಹಾಗಾದರೇ ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್
3D ಸ್ಪೀಡ್ ವೇ ಡಿಸೈನ್‌ನಲ್ಲಿ ಆಕರ್ಷಕ ರಚನೆಯನ್ನು ಹೊಂದಿದ್ದು, ಗ್ರೇಡಿಯಂಟ್ ಕಲರ್ ಫೋನಿನ ಅಂದ ಹೆಚ್ಚಿಸಿದೆ. ಡಿಸ್‌ಪ್ಲೇಯ ಸುತ್ತಲೂ ಅತೀ ಕಡಿಮೆ ಅಂಚನ್ನು ನೀಡಲಾಗಿದ್ದು, ಸಂಪೂರ್ಣ ಡಿಸ್‌ಪ್ಲೇಯ ಅನುಭವ ದೊರೆಯಲಿದೆ. ಹಾಗೇ ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ಸಹ ನೀಡಲಾಗಿದೆ. ನಿಟ್ರೊ ಬ್ಲೂ ಮತ್ತು ಲೈಟ್ ಪರ್ಪಲ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಡಿಸ್‌ಪ್ಲೇ
1,080 x 2,340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ರಚನೆಯ ನಡುವಿನ ರೆಶಿಯೋ ಶೇ.90.8% ಆಗಿದೆ ಹಾಗೂ ಅನುಪಾತವು 19.5:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್‌ಪ್ಲೇಯ ಅನುಭವ ನೀಡಲಿದೆ ಎನ್ನಲಾಗಿದೆ.

ಪ್ರೊಸೆಸರ್
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಕ್ಚಾಲ್ಕಮ್ ಚಿಪ್ ಸೆಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ 710 AIE ಪ್ರೊಸೆಸರ್ ಹೊಂದಿದ್ದು, ಫೋನಿನ ಮಲ್ಟಿಟಾಸ್ಕ್ ಕಾರ್ಯವೈಖರಿಯು ವೇಗವಾಗಿರಲಿದೆ. ಹಾಗೇ ಆಂಡ್ರೆನೊ 616 GPU ಸಹ ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ್ 9.0 ಪೈ, ಆಧಾರಿತ ಕಲರ್ 6.0 ಓಎಸ್ ಈ ಫೋನಿನಲ್ಲಿ ಇರಲಿದೆ.

ಮೆಮೊರಿ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ನಿರೀಕ್ಷೆಯಂತೆ ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗಿದೆ. 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯ ಹಾಗೂ 6GB RAM + 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಹೊಂದಿರುವ ವೇರಿಯಂಟ್ ಮಾದರಿಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಕಂಪನಿಯ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ.

ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿದ್ದು, ಪ್ರಾಥಮಿಕ ರೇರ್ ಕ್ಯಾಮೆರಾವು 16 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೋನಿಯ IMX519 ಸೆನ್ಸಾರ್ ಅನ್ನು ಹೊಂದಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 5ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, f/2.4 ಅಪರ್ಚರ್ ಇರಲಿದೆ. AI ಸೆನ್ಸಾರ್ ಪಡೆದುಕೊಂಡಿದ್ದು, ಫೋಟೋಗಳು ಅತ್ಯುತ್ತಮವಾಗಿ ಮೂಡಿಬರಲಿವೆ.

ಸೆಲ್ಫಿ ಕ್ಯಾಮೆರಾ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನಿನಲ್ಲಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದ್ದು, ಈ ಕ್ಯಾಮೆರಾವು f/2.0 ಅಪರ್ಚರ್ ಅನ್ನು ಹೊಂದಿದೆ. ಹಾಗೇ ಸೆಲ್ಫಿ ಕ್ಯಾಮೆರಾ 1/2.8 ಸೆನ್ಸಾರ್‌ನಲ್ಲಿ ಕೆಲಸ ಮಾಡಲಿದೆ.

ಬ್ಯಾಟರಿ
4045mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದರೊಂದಿಗೆ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ಗಾಗಿ VOOC 3.0, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ. ಈ ತಂತ್ರಜ್ಞಾನದ ನೆರವಿನಿಂದ ಸ್ಮಾರ್ಟ್‌ಫೋನ್ ಕ್ವಿಕ್ ಆಗಿ ಚಾರ್ಜ್ ಪಡೆದುಕೊಳ್ಳಲಿದ್ದು, 30 ನಿಮಿಷದಲ್ಲಿ ಶೇ. 50% ಚಾರ್ಜ್ ಪಡೆದುಕೊಳ್ಳವ ಶಕ್ತಿಯನ್ನು ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಇಂದು ಮೊದಲ ಸೇಲ್ ಆರಂಭವಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ನಿಟ್ರೊ ಬ್ಲೂ ಮತ್ತು ಲೈಟ್ ಪರ್ಪಲ್ ಬಣ್ಣಗಳ ಆಯ್ಕೆಗಳು ದೊರೆಯಲಿವೆ. ಇನ್ನು ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನಿನ 4GB RAM+64GB ವೇರಿಯಂಟ್ ಬೆಲೆಯು 13,999ರೂ.ಗಳು ಹಾಗೂ 6GB RAM+128GB ಮಾದರಿಯ ವೇರಿಯಂಟ್ ಬೆಲೆ 16,999ರೂ.ಗಳು ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470