Just In
- 17 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 19 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 19 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 21 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
ಗ್ವಾಲಿಯರ್ನಲ್ಲಿ ಯುದ್ಧ ವಿಮಾನ ಪತನ; ಬೆಳಗಾವಿ ಮೂಲದ ಯೋಧ ಹುತಾತ್ಮ
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Movies
3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಇಷ್ಟು ಸಾಕಾ?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರಿಯಲ್ ಮಿ 3 ಪ್ರೊ' ಸೆಕೆಂಡ್ ಫ್ಲ್ಯಾಶ್ ಸೇಲ್ ಆರಂಭಕ್ಕೆ ಕ್ಷಣಗಣನೆ!
ಈಗಾಗಲೇ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಕ್ರೇಜ್ ಹುಟ್ಟುಹಾಕಿರುವ 'ರಿಯಲ್ ಮಿ 3 ಪ್ರೊ' ಸ್ಮಾರ್ಟ್‌ಫೋನ್ ಕಳೆದ ತಿಂಗಳು ಏಪ್ರಿಲ್ 29 ರಂದು ಮೊದಲ ಫ್ಲ್ಯಾಶ್ ಸೇಲ್ ಕಂಡಿದ್ದು, ಇಂದು (ಮೇ.3) ಎರಡನೆ ಫ್ಲ್ಯಾಶ್ ಸೇಲ್ ಆರಂಭವಾಗಲಿದೆ. ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮತ್ತು ರಿಯಲ್ ಮಿ ಸ್ಟೋರ್‌ಗಳ ಮೂಲಕ ಗ್ರಾಹಕರು ಈ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ.

ಕಂಪನಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಎಂದೇ ಬಿಂಬಿತವಾಗಿರುವ 'ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಪೋನ್' ಎರಡನೇ ಫ್ಲ್ಯಾಶ್ ಸೇಲ್ ಅನ್ನು ಕಂಪನಿಯು ಮೂರು ಅವಧಿಯ ಹಂತಗಳಲ್ಲಿ ಸೇಲ್ ಮಾಡಲಿದೆ. ಮೊದಲ ಸೇಲ್ ಇಂದು(ಮೇ.3) ಮಧ್ಯಾಹ್ನ 12 ಗಂಟೆಗೆ, ನಂತರ ಸಂಜೆ 4 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ ಸಮಯ ನಿಗದಿ ಮಾಡಿದ್ದು, ಗ್ರಾಹಕರಿಗೆ ಫ್ಲಿಪ್‌ಕಾರ್ಟ್ ಮತ್ತು ಕಂಪನಿ ಸ್ಟೋರ್‌ಗಳಲ್ಲಿ ಲಭ್ಯ.

ಈ ಫೋನ್ 4GB RAM ಮತ್ತು 6GB RAM ವೇರಿಯಂಟ್‌ಗಳ ಆಯ್ಕೆಗಳನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನಿಗೆ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಒದಗಿಸಲಾಗಿದೆ. ಜೊತೆಗೆ ದೀರ್ಘ ಬಾಳಿಕೆಗಾಗಿ ಪವರ್‌ಫುಲ್ ಬ್ಯಾಟರಿ ಬಾಳಿಕೆಯನ್ನು ನೀಡಲಾಗಿದ್ದು, ಕ್ಯಾಮೆರಾದಲ್ಲಿ ಸೋನಿಯ IMX519 ಸೆನ್ಸಾರ್ ಅನ್ನು ಅಳವಡಿಸಲಾಗಿದೆ. ಹಾಗಾದರೇ 'ರಿಯಲ್ ಮಿ 3 ಪ್ರೋ' ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸೈನ್
3D ಸ್ಪೀಡ್ ವೇ ಡಿಸೈನ್‌ನಲ್ಲಿ ಆಕರ್ಷಕ ರಚನೆಯನ್ನು ಹೊಂದಿದ್ದು, ಗ್ರೇಡಿಯಂಟ್ ಕಲರ್ ಫೋನಿನ ಅಂದ ಹೆಚ್ಚಿಸಿದೆ. ಡಿಸ್‌ಪ್ಲೇಯ ಸುತ್ತಲೂ ಅತೀ ಕಡಿಮೆ ಅಂಚನ್ನು ನೀಡಲಾಗಿದ್ದು, ಸಂಪೂರ್ಣ ಡಿಸ್‌ಪ್ಲೇಯ ಅನುಭವ ದೊರೆಯಲಿದೆ. ಹಾಗೇ ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ಸಹ ನೀಡಲಾಗಿದೆ. ನಿಟ್ರೊ ಬ್ಲೂ ಮತ್ತು ಲೈಟ್ ಪರ್ಪಲ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಡಿಸ್‌ಪ್ಲೇ
1,080 x 2,340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ರಚನೆಯ ನಡುವಿನ ರೆಶಿಯೋ ಶೇ.90.8% ಆಗಿದೆ ಹಾಗೂ ಅನುಪಾತವು 19.5:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್‌ಪ್ಲೇಯ ಅನುಭವ ನೀಡಲಿದೆ ಎನ್ನಲಾಗಿದೆ.

ಪ್ರೊಸೆಸರ್
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಕ್ಚಾಲ್ಕಮ್ ಚಿಪ್ ಸೆಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ 710 AIE ಪ್ರೊಸೆಸರ್ ಹೊಂದಿದ್ದು, ಫೋನಿನ ಮಲ್ಟಿಟಾಸ್ಕ್ ಕಾರ್ಯವೈಖರಿಯು ವೇಗವಾಗಿರಲಿದೆ. ಹಾಗೇ ಆಂಡ್ರೆನೊ 616 GPU ಸಹ ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ್ 9.0 ಪೈ, ಆಧಾರಿತ ಕಲರ್ 6.0 ಓಎಸ್ ಈ ಫೋನಿನಲ್ಲಿ ಇರಲಿದೆ.

ಮೆಮೊರಿ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ನಿರೀಕ್ಷೆಯಂತೆ ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗಿದೆ. 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯ ಹಾಗೂ 6GB RAM + 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಹೊಂದಿರುವ ವೇರಿಯಂಟ್ ಮಾದರಿಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಕಂಪನಿಯ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ.

ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿದ್ದು, ಪ್ರಾಥಮಿಕ ರೇರ್ ಕ್ಯಾಮೆರಾವು 16 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೋನಿಯ IMX519 ಸೆನ್ಸಾರ್ ಅನ್ನು ಹೊಂದಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 5ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, f/2.4 ಅಪರ್ಚರ್ ಇರಲಿದೆ. AI ಸೆನ್ಸಾರ್ ಪಡೆದುಕೊಂಡಿದ್ದು, ಫೋಟೋಗಳು ಅತ್ಯುತ್ತಮವಾಗಿ ಮೂಡಿಬರಲಿವೆ.

ಸೆಲ್ಫಿ ಕ್ಯಾಮೆರಾ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನಿನಲ್ಲಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದ್ದು, ಈ ಕ್ಯಾಮೆರಾವು f/2.0 ಅಪರ್ಚರ್ ಅನ್ನು ಹೊಂದಿದೆ. ಹಾಗೇ ಸೆಲ್ಫಿ ಕ್ಯಾಮೆರಾ 1/2.8 ಸೆನ್ಸಾರ್‌ನಲ್ಲಿ ಕೆಲಸ ಮಾಡಲಿದೆ.

ಬ್ಯಾಟರಿ
4045mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದರೊಂದಿಗೆ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ಗಾಗಿ VOOC 3.0, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ. ಈ ತಂತ್ರಜ್ಞಾನದ ನೆರವಿನಿಂದ ಸ್ಮಾರ್ಟ್‌ಫೋನ್ ಕ್ವಿಕ್ ಆಗಿ ಚಾರ್ಜ್ ಪಡೆದುಕೊಳ್ಳಲಿದ್ದು, 30 ನಿಮಿಷದಲ್ಲಿ ಶೇ. 50% ಚಾರ್ಜ್ ಪಡೆದುಕೊಳ್ಳವ ಶಕ್ತಿಯನ್ನು ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಸೆಕೆಂಡ್ ಸೇಲ್ (ಇಂದು) ಮೇ.3ರಂದು ಆರಂಭವಾಗಲಿದೆ. ನಿಟ್ರೊ ಬ್ಲೂ ಮತ್ತು ಲೈಟ್ ಪರ್ಪಲ್ ಬಣ್ಣಗಳ ಆಯ್ಕೆಗಳು ದೊರೆಯಲಿವೆ. ಇನ್ನು ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನಿನ 4GB RAM+64GB ವೇರಿಯಂಟ್ ಬೆಲೆಯು 13,999ರೂ.ಗಳು ಹಾಗೂ 6GB RAM+128GB ಮಾದರಿಯ ವೇರಿಯಂಟ್ ಬೆಲೆ 16,999ರೂ.ಗಳು ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470