'ರಿಯಲ್ ಮಿ 3' ಮತ್ತು 'ರಿಯಲ್ ಮಿ 3' ಪ್ರೋ' ನಡುವಿನ ಸಾಮ್ಯತೆ ಗಮನಿಸಿ!
ಚೀನಾ ಮೂಲದ 'ರಿಯಲ್ ಮಿ' ಸ್ಮಾರ್ಟ್‌ಫೋನ್ ಕಂಪನಿಯು ತನ್ನ ಅಗ್ಗದ ಬೆಲೆಯ ಸ್ಮಾರ್ಟ್‌ಪೋನ್‌ಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಪಡೆದುಕೊಂಡಿದೆ. ಕಂಪನಿಯು ಇತ್ತೀಚಿಗೆ 'ರಿಯಲ್ ಮಿ 3' ಮತ್ತು 'ರಿಯಲ್ ಮಿ 3' ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಹಾಗೇ ಇವೆರಡರ ನಡುವಿನ ವ್ಯತ್ಯಾಸವನ್ನು ನೀವು ಗಮನಿಸಲೆಬೇಕು.

ಕಳೆದ ಮಾರ್ಚ್‌ನಲ್ಲಿ 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಒಂದು ತಿಂಗಳ ಅಂತರದಲ್ಲಿ 'ರಿಯಲ್ ಮಿ 3 ಪ್ರೋ' ರಿಲೀಸ್ ಆಗಿದೆ. ಈ ಎರಡು ಸ್ಮಾರ್ಟ್‌ಪೋನ್‌ಗಳ ಫೀಚರ್ಸ್‌ಗಳಲ್ಲಿ ಬಹುತೇಕ ಸಾಮ್ಯತೆ ಕಂಡುಬಂದರೂ, ಗ್ರಾಹಕರಲ್ಲಿ ಸ್ಪಲ್ಪ ಕನ್‌ಫ್ಯೂಸ್ ಎನಿಸಿರಬಹುದು. ಆದರೆ 'ರಿಯಲ್ ಮಿ 3 ಪ್ರೋ' ಡಿಸ್‌ಪ್ಲೇಯ ರೆಸಲ್ಯೂಶನ್ 'ರಿಯಲ್ ಮಿ 3' ಗಿಂತ ಅಧಿಕವಾಗಿದ್ದು, ಹಾಗೇ RAM ಶಕ್ತಿಯಲ್ಲಿ ಸಾಮರ್ಥ್ಯದಲ್ಲಿ 'ರಿಯಲ್ ಮಿ 3 ಪ್ರೊ' ಮುಂದಿದೆ.
ಇನ್ನು ಬ್ಯಾಟರಿಯ ಪವರ್‌ನಲ್ಲಿ 'ರಿಯಲ್ ಮಿ 3 ಪ್ರೋ' ಫೋನ್ VOOC 3.0 ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ, 4,045mAh ಸಾಮರ್ಥ್ಯವನ್ನು ಹೊಂದಿದ್ದರೇ, 'ರಿಯಲ್ ಮಿ 3' ಫೋನ್ 4,230mAh ಸಾಮರ್ಥ್ಯದಲ್ಲಿದ್ದು, ಅಧಿಕ ಬಲವನ್ನು ಪಡೆದಿದೆ. ಆದರೆ ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ಹೊಂದಿಲ್ಲ. ಹಾಗಾದರೇ 'ರಿಯಲ್ ಮಿ 3' ಮತ್ತು 'ರಿಯಲ್ ಮಿ 3' ಪ್ರೋ ಸ್ಮಾರ್ಟ್‌ಫೋನ್‌ಗಳ ಇನ್ನಿತರೆ ಫೀಚರ್ಸ್‌ಗಳನ್ನು ತಿಳಿಯಲು ಮುಂದೆ ಓದಿರಿ.

ರಿಯಲ್ ಮಿ 3 ಪ್ರೋ ಡಿಸೈನ್
3D ಸ್ಪೀಡ್ ವೇ ಡಿಸೈನ್‌ನಲ್ಲಿ ಆಕರ್ಷಕ ರಚನೆಯನ್ನು ಹೊಂದಿದ್ದು, ಗ್ರೇಡಿಯಂಟ್ ಕಲರ್ ಫೋನಿನ ಅಂದ ಹೆಚ್ಚಿಸಿದೆ. ಡಿಸ್‌ಪ್ಲೇಯ ಸುತ್ತಲೂ ಅತೀ ಕಡಿಮೆ ಅಂಚನ್ನು ನೀಡಲಾಗಿದ್ದು, ಸಂಪೂರ್ಣ ಡಿಸ್‌ಪ್ಲೇಯ ಅನುಭವ ದೊರೆಯಲಿದೆ. ಹಾಗೇ ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ಸಹ ನೀಡಲಾಗಿದೆ. ನಿಟ್ರೊ ಬ್ಲೂ ಮತ್ತು ಲೈಟ್ ಪರ್ಪಲ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ರಿಯಲ್ ಮಿ 3 ಪ್ರೋ ಡಿಸ್‌ಪ್ಲೇ
1,080 x 2,340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ರಚನೆಯ ನಡುವಿನ ರೆಶಿಯೋ ಶೇ.90.8% ಆಗಿದೆ ಹಾಗೂ ಅನುಪಾತವು 19.5:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್‌ಪ್ಲೇಯ ಅನುಭವ ನೀಡಲಿದೆ ಎನ್ನಲಾಗಿದೆ.

ರಿಯಲ್ ಮಿ 3 ಪ್ರೋ ಪ್ರೊಸೆಸರ್
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಕ್ಚಾಲ್ಕಮ್ ಚಿಪ್ ಸೆಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ 710 AIE ಪ್ರೊಸೆಸರ್ ಹೊಂದಿದ್ದು, ಫೋನಿನ ಮಲ್ಟಿಟಾಸ್ಕ್ ಕಾರ್ಯವೈಖರಿಯು ವೇಗವಾಗಿರಲಿದೆ. ಹಾಗೇ ಆಂಡ್ರೆನೊ 616 GPU ಸಹ ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ್ 9.0 ಪೈ, ಆಧಾರಿತ ಕಲರ್ 6.0 ಓಎಸ್ ಈ ಫೋನಿನಲ್ಲಿ ಇರಲಿದೆ.

ರಿಯಲ್ ಮಿ 3 ಪ್ರೋ ಮೆಮೊರಿ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ನಿರೀಕ್ಷೆಯಂತೆ ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗಿದೆ. 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯ ಹಾಗೂ 6GB RAM + 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಹೊಂದಿರುವ ವೇರಿಯಂಟ್ ಮಾದರಿಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಕಂಪನಿಯ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ.

ರಿಯಲ್ ಮಿ 3 ಪ್ರೋ ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿದ್ದು, ಪ್ರಾಥಮಿಕ ರೇರ್ ಕ್ಯಾಮೆರಾವು 16 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೋನಿಯ IMX519 ಸೆನ್ಸಾರ್ ಅನ್ನು ಹೊಂದಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 5ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, f/2.4 ಅಪರ್ಚರ್ ಇರಲಿದೆ. AI ಸೆನ್ಸಾರ್ ಪಡೆದುಕೊಂಡಿದ್ದು, ಫೋಟೋಗಳು ಅತ್ಯುತ್ತಮವಾಗಿ ಮೂಡಿಬರಲಿವೆ.

ರಿಯಲ್ ಮಿ 3 ಪ್ರೋ ಸೆಲ್ಫಿ ಕ್ಯಾಮೆರಾ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನಿನಲ್ಲಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದ್ದು, ಈ ಕ್ಯಾಮೆರಾವು f/2.0 ಅಪರ್ಚರ್ ಅನ್ನು ಹೊಂದಿದೆ. ಹಾಗೇ ಸೆಲ್ಫಿ ಕ್ಯಾಮೆರಾ 1/2.8 ಸೆನ್ಸಾರ್‌ನಲ್ಲಿ ಕೆಲಸ ಮಾಡಲಿದೆ.

ರಿಯಲ್ ಮಿ 3 ಪ್ರೋ ಬ್ಯಾಟರಿ
4045mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದರೊಂದಿಗೆ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ಗಾಗಿ VOOC 3.0, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ. ಈ ತಂತ್ರಜ್ಞಾನದ ನೆರವಿನಿಂದ ಸ್ಮಾರ್ಟ್‌ಫೋನ್ ಕ್ವಿಕ್ ಆಗಿ ಚಾರ್ಜ್ ಪಡೆದುಕೊಳ್ಳಲಿದ್ದು, 30 ನಿಮಿಷದಲ್ಲಿ ಶೇ. 50% ಚಾರ್ಜ್ ಪಡೆದುಕೊಳ್ಳವ ಶಕ್ತಿಯನ್ನು ಒದಗಿಸಲಿದೆ.

ರಿಯಲ್ ಮಿ 3 ಪ್ರೋ ಬೆಲೆ ಮತ್ತು ಲಭ್ಯತೆ
ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಮೊದಲ ಸೇಲ್ ಇದೇ ಏಪ್ರಿಲ್ 29ರಿಂದ ಆರಂಭವಾಗಲಿದೆ. ನಿಟ್ರೊ ಬ್ಲೂ ಮತ್ತು ಲೈಟ್ ಪರ್ಪಲ್ ಬಣ್ಣಗಳ ಆಯ್ಕೆಗಳು ದೊರೆಯಲಿವೆ. ಇನ್ನು ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನಿನ 4GB RAM+64GB ವೇರಿಯಂಟ್ ಬೆಲೆಯು 13,999ರೂ.ಗಳು ಹಾಗೂ 6GB RAM+128GB ಮಾದರಿಯ ವೇರಿಯಂಟ್ ಬೆಲೆ 16,999ರೂ.ಗಳು ಆಗಿದೆ.

ರಿಯಲ್ ಮಿ 3 ವಿನ್ಯಾಸ
ರಿಯಲ್ ಮಿ 3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಸುತ್ತಲೂ ಅತೀ ಕಡಿಮೆ ಅಂಚನ್ನು ಒಳಗೊಂಡಿದ್ದು, ಡ್ಯುವ್‌ಡ್ರಾಪ್ ನಾಚ್ ಸ್ಕ್ರೀನ್ ಹೊಂದಿದೆ. ತೆಳುವಾದ ರಚನೆಯೊಂದಿಗೆ ಕಡಿಮೆ ತೂಕವನ್ನು ಹೊಂದಿರುದೆ. ಗ್ರೇಡಿಯಂಟ್ ಯೂನಿಬಾಡಿ ಡಿಸೈನ್ ರಚನೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ಗೆ ಹಿಂಬದಿಯಲ್ಲಿ ಫಿಂಗರ್ ಸೆನ್ಸಾರ್ ನೀಡಲಾಗಿದೆ.

ರಿಯಲ್ ಮಿ 3 ಡಿಸ್‌ಪ್ಲೇ
'ರಿಯಲ್ ಮಿ 3' ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಅನುಪಾತವು 19:5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯ 409 ppi ಆಗಿದೆ. ವಿಶಾಲವಾದ ಡಿಸ್‌ಪ್ಲೇ ಅಂಚು ರಹಿತವಾಗಿದ್ದು, ಪೂರ್ಣ ಡಿಸ್‌ಪ್ಲೇ ವೀಕ್ಷಣೆಯ ಅನುಭವ ದೊರೆಯಲಿದೆ.

ರಿಯಲ್ ಮಿ 3 ಪ್ರೊಸೆಸರ್
'ಮೀಡಿಯಾಟೆಕ್ ಹಿಲಿಯೋ P70 ಚಿಪ್' ಸೆಟ್ ಸಾಮರ್ಥ್ಯದ ಪವರ್‌ಫುಲ್ ಪ್ರೊಸೆಸರ್ ಅನ್ನು ಹೊಂದಿರುವ 'ರಿಯಲ್ ಮಿ 3' ಸಾರ್ಟ್‌ಫೋನ್ 'ಅಂಡ್ರಾಯ್ಡ್ 9 ಪೈ' ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ Mali-G72 MP3 ಗ್ರಾಫಿಕ್ಸ್ ಅನ್ನು ಸಹ ಒಳಗೊಂಡಿದ್ದು, ಹೈ ಎಂಡ್ ಗೇಮ್ಸ್‌ಗಳನ್ನು ಅತ್ಯುತ್ತಮವಾಗಿ ಬೆಂಬಲಿಸುತ್ತದೆ.

ರಿಯಲ್ ಮಿ 3 AI ಕ್ಯಾಪ್ಯಾಬಲಿಟಿ
ಈ ಫೋನಿನಲ್ಲಿ ಸ್ಮಾರ್ಟ್ ಆಪ್ ರೆಕ್‌ಗ್ನೈಸ್ ಆಯ್ಕೆ ನೀಡಲಾಗಿದ್ದು, ಇದರೊಂದಿಗೆ ಆಟೋ ಸೀನ್ ರೆಕಗ್ನೈಸ್ ಆಯ್ಕೆ ಹೊಂದಿದೆ. ಮಂದಬೆಳಕಿನಲ್ಲಿ ಅತ್ಯುತ್ತಮ ಫೋಟೋಗಳ ಮೂಡಿಬರಲು 'ನೈಟ್ ಶಾರ್ಟ್ ಅಪ್ಟೀಮೈಸ್' ಆಯ್ಕೆಯನ್ನು ಬಳಸಿಕೊಳ್ಳಬಹುದಾಗಿದೆ. ಇದರೊಂದಿಗೆ ಕ್ಯಾಮೆರಾವು AI ಬ್ಯೂಟಿ ಆಯ್ಕೆಯನ್ನು ಒಳಗೊಂಡಿದೆ.

ರಿಯಲ್ ಮಿ 3 ಮೆಮೊರಿ
'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, 3GB RAM+32GB ಸಾಮರ್ಥ್ಯದಲ್ಲಿ ಮತ್ತು 4GB RAM ಸಾಮರ್ಥ್ಯದೊಂದಿಗೆ 64 GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೂ ವಿಸ್ತರಿಸುವ ಅವಕಾಶವನ್ನು ಸಹ ಒದಗಿಸಲಾಗಿದೆ.

ರಿಯಲ್ ಮಿ 3 ಕ್ಯಾಮೆರಾ
ರಿಯಲ್ ಮಿ 3 ಸ್ಮಾರ್ಟ್‌ಫೋನ್ ಎರಡು ಹಿಂಬದಿ ಕ್ಯಾಮೆರಾಗಳನ್ನು ಹೊಂದಿದ್ದು, ಅವು ಕ್ರಮವಾಗಿ '24 ಮೆಗಾಪಿಕ್ಸಲ್' ಮತ್ತು '16 ಮೆಗಾಪಿಕ್ಸಲ್' ಸಾಮರ್ಥ್ಯವನ್ನು ಒಳಗೊಂಡಿರುವ ಜತೆ F/1.8 ಅಪರ್ಚರ್ ಅನ್ನು ಹೊಂದಿದೆ. ಹಾಗೇ ಮುಂಬದಿಯಲ್ಲಿ 13 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು. f/2.0 ಅಪರ್ಚರ್ ಅನ್ನು ಹೊಂದಿದೆ.

ರಿಯಲ್ ಮಿ 3 ಬ್ಯಾಟರಿ ಶಕ್ತಿ
4230mAh ಸಾಮರ್ಥ್ಯದ ಪವರ್‌ಫುಲ್ ದೀರ್ಘಬಾಳಿಕೆಯ ಬ್ಯಾಟರಿಯನ್ನು ಹೊಂದಿದ್ದು, ಅತ್ಯುತ್ತಮ ಪ್ರೊಸೆಸರ್ ಬ್ಯಾಟರಿ ಲೈಫ್ ಉಳಿಕೆಯಗೆ ಸಹಕರಿಸುತ್ತದೆ. ಈ ಬ್ಯಾಟರಿಯು ಸುಮಾರು ಎರಡು ದಿನಗಳ ವರೆಗೆ ಬಾಳುವ ಶಕ್ತಿಯನ್ನು ಒಳಗೊಂಡಿದೆ. ಆದರೆ ಯಾವುದೇ ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ಒದಗಿಸಲಾಗಿಲ್ಲ.

ರಿಯಲ್ ಮಿ 3 ಬೆಲೆ ಮತ್ತು ಲಭ್ಯತೆ
ಎರಡು ವೇರಿಯಂಟ್ ಮಾದರಿಗಳಿಲ್ಲಿ ಲಾಂಚ್ ಆಗಿರುವ 'ರಿಯಲ್ ಮಿ 3' ಸ್ಮಾರ್ಟ್‌ಫೋನಿನ 3GB+32GB ಮಾದರಿಯ ವೇರಿಯಂಟ್ ಬೆಲೆ 8999ರೂ.ಗಳು ಮತ್ತು 4GB+64GB ಮಾದರಿಯ ವೇರಿಯಂಟ್ ಬೆಲೆ 10,999ರೂ.ಗಳು ಆಗಿದೆ. ಗ್ರಾಹಕರು 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಅನ್ನು ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








