'ರಿಯಲ್‌ ಮಿ 3' ಮತ್ತು 'ರಿಯಲ್ ಮಿ 2' ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್..?

|

ಚೀನಾ ಮೂಲದ ಸ್ಮಾರ್ಟ್‌ಪೋನ್ ಕಂಪನಿ 'ರಿಯಲ್ ಮಿ' ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ಮುಂದುವರಿದ ಫೀಚರ್ಸ್‌ಗಳನ್ನು ಪರಿಚಯಿಸುವುದರೊಂದಿಗೆ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಇದರೊಂದಿಗೆ ಡಿಸೈನ್‌ನಿಂದಲೂ ಗಮನ ಸೆಳೆಯುತ್ತಿದೆ. ಇತ್ತೀಚಿಗೆ ಕಂಪನಿಯು 'ರಿಯಲ್ ಮಿ 3' ಸ್ಮಾರ್ಟ್‌ಫೋನ್ ರಿಲೀಸ್‌ ಮಾಡಿ ಮಾರುಕಟ್ಟೆಯಲ್ಲಿ ಡಿಮ್ಯಾಂಡ್‌ ಹೆಚ್ಚಿಸಿಕೊಂಡಿದೆ.

'ರಿಯಲ್‌ ಮಿ 3' ಮತ್ತು 'ರಿಯಲ್ ಮಿ 2' ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್..?

'ರಿಯಲ್ ಮಿ' ಕಂಪನಿ ದೇಶಿಯ ಮಾರುಕಟ್ಟೆಗೆ ಕೆಲವೇ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದರೂ ಅವು ಉತ್ತಮ ಫಲಿತಾಂಶವನ್ನು ನೀಡಿವೆ. ಇದೇ ಮಾರ್ಚ್‌ 12 ರಿಂದ 'ರಿಯಲ್‌ ಮಿ 3' ಸೇಲ್‌ ಆರಂಭಿಸಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಪ್ರಸ್ತುತ ಕಂಪನಿಯ 'ರಿಯಲ್‌ ಮಿ 2' ಮತ್ತು 'ರಿಯಲ್‌ ಮಿ 3' ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿವೆ.

'ರಿಯಲ್‌ ಮಿ 3' ಮತ್ತು 'ರಿಯಲ್ ಮಿ 2' ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್..?

ಬಜೆಟ್‌ ಬೆಲೆಯಲ್ಲಿ ದೊರೆಯಲಿರುವ ಈ ಸ್ಮಾರ್ಟ್‌ಫೋನ್‌ಗಳು ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್? ರಿಯಲ್‌ ಮಿ 3 ಮತ್ತು ರಿಯಲ್‌ ಮಿ 2 ಸ್ಮಾರ್ಟ್‌ಫೋನ್‌ಗಳ ನಡುವಿನ ವ್ಯತ್ಯಾಸವೆನು? ಎಂಬುದನ್ನು ತಿಳಿಯಲು ಈ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಫೀಚರ್ಸ್‌ಗಳತ್ತ ನೋಡೋಣ ಬನ್ನಿರಿ.

'ರಿಯಲ್ ಮಿ 3' ವಿನ್ಯಾಸ

'ರಿಯಲ್ ಮಿ 3' ವಿನ್ಯಾಸ

ರಿಯಲ್ ಮಿ 3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಸುತ್ತಲೂ ಅತೀ ಕಡಿಮೆ ಅಂಚನ್ನು ಒಳಗೊಂಡಿದ್ದು, ಡ್ಯುವ್‌ಡ್ರಾಪ್ ನಾಚ್ ಸ್ಕ್ರೀನ್ ಹೊಂದಿದೆ. ತೆಳುವಾದ ರಚನೆಯೊಂದಿಗೆ ಕಡಿಮೆ ತೂಕವನ್ನು ಹೊಂದಿರುದೆ. ಗ್ರೇಡಿಯಂಟ್ ಯೂನಿಬಾಡಿ ಡಿಸೈನ್ ರಚನೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ಗೆ ಹಿಂಬದಿಯಲ್ಲಿ ಫಿಂಗರ್ ಸೆನ್ಸಾರ್‌ ನೀಡಲಾಗಿದೆ.

'ರಿಯಲ್ ಮಿ 3' ಡಿಸ್‌ಪ್ಲೇ

'ರಿಯಲ್ ಮಿ 3' ಡಿಸ್‌ಪ್ಲೇ

'ರಿಯಲ್ ಮಿ 3' ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಅನುಪಾತವು 19:5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯ 409 ppi ಆಗಿದೆ. ವಿಶಾಲವಾದ ಡಿಸ್‌ಪ್ಲೇ ಅಂಚು ರಹಿತವಾಗಿದ್ದು, ಪೂರ್ಣ ಡಿಸ್‌ಪ್ಲೇ ವೀಕ್ಷಣೆಯ ಅನುಭವ ದೊರೆಯಲಿದೆ.

'ರಿಯಲ್ ಮಿ 3' ಪ್ರೊಸೆಸರ್

'ರಿಯಲ್ ಮಿ 3' ಪ್ರೊಸೆಸರ್

'ಮೀಡಿಯಾಟೆಕ್‌ ಹಿಲಿಯೋ P70 ಚಿಪ್‌' ಸೆಟ್‌ ಸಾಮರ್ಥ್ಯದ ಪವರ್‌ಫುಲ್‌ ಪ್ರೊಸೆಸರ್‌ ಅನ್ನು ಹೊಂದಿರುವ 'ರಿಯಲ್ ಮಿ 3' ಸಾರ್ಟ್‌ಫೋನ್ 'ಅಂಡ್ರಾಯ್ಡ್‌ 9 ಪೈ' ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ Mali-G72 MP3 ಗ್ರಾಫಿಕ್ಸ್ ಅನ್ನು ಸಹ ಒಳಗೊಂಡಿದ್ದು, ಹೈ ಎಂಡ್ ಗೇಮ್ಸ್‌ಗಳನ್ನು ಅತ್ಯುತ್ತಮವಾಗಿ ಬೆಂಬಲಿಸುತ್ತದೆ.

'ರಿಯಲ್ ಮಿ 3' AI ಕ್ಯಾಪ್ಯಾಬಲಿಟಿ

'ರಿಯಲ್ ಮಿ 3' AI ಕ್ಯಾಪ್ಯಾಬಲಿಟಿ

ಸ್ಮಾರ್ಟ್‌ ಆಪ್‌ ರೆಕ್‌ಗ್ನೈಸ್‌ ಆಯ್ಕೆ ನೀಡಲಾಗಿದ್ದು, ಇದರೊಂದಿಗೆ ಆಟೋ ಸೀನ್ ರೆಕಗ್ನೈಸ್‌ ಆಯ್ಕೆ ಹೊಂದಿದೆ. ಮಂದಬೆಳಕಿನಲ್ಲಿ ಅತ್ಯುತ್ತಮ ಫೋಟೋಗಳ ಮೂಡಿಬರಲು ನೈಟ್‌ ಶಾರ್ಟ್‌ ಅಪ್ಟೀಮೈಸ್ ಆಯ್ಕೆಯನ್ನು ಒದಗಿಸಲಾಗಿದೆ. ಕ್ಯಾಮೆರಾದಲ್ಲಿ AI ಬ್ಯೂಟಿ ಆಯ್ಕೆಯನ್ನು ಒಳಗೊಂಡಿದೆ.

'ರಿಯಲ್ ಮಿ 3' ಮೆಮೊರಿ

'ರಿಯಲ್ ಮಿ 3' ಮೆಮೊರಿ

'ರಿಯಲ್ ಮಿ 3' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, 3GB RAM+32GB ಸಾಮರ್ಥ್ಯದಲ್ಲಿ ಮತ್ತು 4GB RAM ಸಾಮರ್ಥ್ಯದೊಂದಿಗೆ 64 GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೂ ವಿಸ್ತರಿಸುವ ಅವಕಾಶವನ್ನು ಸಹ ಒದಗಿಸಲಾಗಿದೆ.

'ರಿಯಲ್ ಮಿ 3' ಕ್ಯಾಮೆರಾ

'ರಿಯಲ್ ಮಿ 3' ಕ್ಯಾಮೆರಾ

ರಿಯಲ್ ಮಿ 3 ಸ್ಮಾರ್ಟ್‌ಫೋನ್ ಎರಡು ಹಿಂಬದಿ ಕ್ಯಾಮೆರಾಗಳನ್ನು ಹೊಂದಿದ್ದು, ಅವು ಕ್ರಮವಾಗಿ '24 ಮೆಗಾಪಿಕ್ಸಲ್' ಮತ್ತು '16 ಮೆಗಾಪಿಕ್ಸಲ್' ಸಾಮರ್ಥ್ಯವನ್ನು ಒಳಗೊಂಡಿರುವ ಜತೆ F/1.8 ಅಪರ್ಚರ್ ಅನ್ನು ಹೊಂದಿದೆ. ಹಾಗೇ ಮುಂಬದಿಯಲ್ಲಿ 13 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು. f/2.0 ಅಪರ್ಚರ್ ಅನ್ನು ಹೊಂದಿದೆ.

'ರಿಯಲ್ ಮಿ 3' ಬ್ಯಾಟರಿ ಶಕ್ತಿ

'ರಿಯಲ್ ಮಿ 3' ಬ್ಯಾಟರಿ ಶಕ್ತಿ

4230mAh ಸಾಮರ್ಥ್ಯದ ಪವರ್‌ಫುಲ್ ದೀರ್ಘಬಾಳಿಕೆಯ ಬ್ಯಾಟರಿಯನ್ನು ಹೊಂದಿದ್ದು, ಪ್ರೊಸೆಸರ್‌ ಬ್ಯಾಟರಿ ಉಳಿಕೆಯಗೆ ಸಹಕರಿಸುತ್ತದೆ. ಈ ಬ್ಯಾಟರಿಯು ಸುಮಾರು ಎರಡು ದಿನಗಳ ವರೆಗೆ ಬಾಳುವ ಶಕ್ತಿಯನ್ನು ಒಳಗೊಂಡಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಒದಗಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

'ರಿಯಲ್‌ ಮಿ 2' ಡಿಸ್‌ಪ್ಲೇ ಮತ್ತು ರಚನೆ

'ರಿಯಲ್‌ ಮಿ 2' ಡಿಸ್‌ಪ್ಲೇ ಮತ್ತು ರಚನೆ

'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ ಬಾಹ್ಯ ರಚನೆ ಅತ್ಯಂತ ಆಕರ್ಷಕವಾಗಿದ್ದು, ಇದರ ಡಿಸ್‌ಪ್ಲೇಯು ಕಡಿಮೆ ಅಂಚನ್ನು ಹೊಂದಿದೆ. ಇನ್ನೂ 2340x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ವಿಶಾಲವಾದ ಡಿಸ್‌ ಇದಾಗಿದ್ದು, ಡಿಸ್‌ಪ್ಲೇಯ ಗುಣಮಟ್ಟ ಉತ್ತಮವಾಗಿದೆ.

'ರಿಯಲ್‌ ಮಿ 2' ಪ್ರೊಸೆಸರ್

'ರಿಯಲ್‌ ಮಿ 2' ಪ್ರೊಸೆಸರ್

ರಿಯಲ್ ಮಿ ಸಂಸ್ಥೆಯ 'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 660 AIE ಅತ್ಯುತ್ತಮ ಪ್ರೊಸೆಸರ್‌ ಅನ್ನು ಹೊಂದಿರುವುದರೊಂದಿಗೆ ಅಡ್ರೆನೊ 512 GPU ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಕಂಪನಿಯ ಕಲರ್OS 5.2 ತಳಹದಿಯೊಂದಿಗೆ, ಆಂಡ್ರಾಯ್ಡ್ 8.1 ಓರಿಯೊನಲ್ಲಿ ಕಾರ್ಯನಿರ್ವಹಿಸುತ್ತದೆ.

'ರಿಯಲ್‌ ಮಿ 2' ಮೆಮೊರಿ

'ರಿಯಲ್‌ ಮಿ 2' ಮೆಮೊರಿ

ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 4GB ಸಾಮರ್ಥ್ಯ RAM ಮತ್ತು 64 GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದರೇ, ಇನ್ನೊಂದು ವೇರಿಯಂಟ್ 6 GB ಸಾಮರ್ಥ್ಯ RAM ಮತ್ತು 64GB ಸಂಗ್ರಹ ಸಾಮರ್ಥ್ಯಚನ್ನು ಒಳಗೊಂಡಿದೆ. ಇದರೊಂದಿಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

'ರಿಯಲ್‌ ಮಿ 2' ಕ್ಯಾಮೆರಾ

'ರಿಯಲ್‌ ಮಿ 2' ಕ್ಯಾಮೆರಾ

'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನಿನ ಎರಡು ವೇರಿಯಂಟ್‌ಗಳ ಕ್ಯಾಮೆರಾ ಸಾಮರ್ಥ್ಯ ಒಂದೇ ಆಗಿದ್ದು, ಹಿಂಭಾಗದಲ್ಲಿ ಪ್ರಮುಖ ಕ್ಯಾಮೆರಾ 16 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನೂ ಸೆಲ್ಫಿಗಾಗಿ ಮುಂಬದಿಯಲ್ಲಿ 16 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಕ್ಯಾಮೆರಾವನ್ನು ನೀಡಲಾಗಿದೆ.

'ರಿಯಲ್‌ ಮಿ 2' ಬ್ಯಾಟರಿ ಶಕ್ತಿ

'ರಿಯಲ್‌ ಮಿ 2' ಬ್ಯಾಟರಿ ಶಕ್ತಿ

'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ 3500mAh ಶಕ್ತಿ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಪೂರ್ಣ ಚಾರ್ಜ್‌ ಬ್ಯಾಟಿರಿಯು ಒಂದು ದಿನದ ಮಟ್ಟಿಗೆ ನಿರಾಂತಕವಾಗಿ ಬಾಳಕೆ ಬರುತ್ತದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್ ನೀಡಲಾಗುವುದು. ಇದರೊಂದಿಗೆ OTG, WI-FI ನಂತಹ ಇತರೆ ಸೌಲಭ್ಯಗಳನ್ನು ಸಹ ಕಾಣಬಹುದು.

Best Mobiles in India

English summary
Realme 3 vs Realme 2: Price in India, Specifications Compared.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X