Home
ಮೊಬೈಲ್

'ರಿಯಲ್‌ ಮಿ 5S' ವಿಮರ್ಶೆ : ಕಡಿಮೆ ಬೆಲೆಗೆ ಉತ್ತಮ ಕ್ಯಾಮೆರಾ ಫೋನ್!

ಚೀನಾ ಮೂಲದ 'ರಿಯಲ್‌ ಮಿ' ಕಂಪನಿಯು ಇತ್ತೀಚಿಗೆ ಲಾಂಚ್ ಮಾಡಿರುವ 'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್ ಸದ್ಯ ಬಜೆಟ್‌ ಬೆಲೆಯಲ್ಲಿ ಗ್ರಾಹಕರನ್ನು ಸೆಳೆದಿದ್ದು, ಹಲವು ವಿಶೇಷತೆಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಮುಖ್ಯವಾಗಿ ಈ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಫೀಚರ್ಸ್‌ಗಳಿಂದ ಹೈಲೈಟ್‌ ಆಗಿ ಕಾಣಿಸಿಕೊಂಡಿದ್ದು, ರೆಡ್ಮಿ ನೋಟ್‌ 8 ಫೋನಿಗೆ ಟಾಂಗ್ ನೀಡುವ ಸಾಮರ್ಥ್ಯ ಪಡೆದಿದೆ.

ರಿಯಲ್‌ ಮಿ 5S

ರಿಯಲ್‌ ಮಿ ಸಂಸ್ಥೆಯು 'ರಿಯಲ್‌ ಮಿ 5S' ಇದೇ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬಂದಿದ್ದು, ಈ ಸ್ಮಾರ್ಟ್‌ಫೋನ್ ಇತ್ತೀಚಿಗೆ ಟ್ರೆಂಡ್‌ನಲ್ಲಿರುವ 48ಎಂಪಿ ಕ್ಯಾಮೆರಾವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ನಲ್ಲಿಕಾರ್ಯನಿರ್ವಹಿಸುತ್ತದೆ. ಹಾಗೂ ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವು ಕ್ರಮವಾಗಿ 4GB RAM + 64GB ಮತ್ತು 4GB RAM + 128GB ಆಗಿವೆ. ಇನ್ನುಳಿದಂತೆ ರಿಯಲ್‌ ಮಿ 5S ಸ್ಮಾರ್ಟ್‌ಫೋನಿನ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ 720 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಹೊಂದಿದೆ. ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್‌ 3+ ರಕ್ಷಣೆಯನ್ನು ಪಡೆದಿದೆ. ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅನುಪಾತವು 89% ಪರ್ಸೆಂಟ್ ಆಗಿದ್ದು, ಡಿಸ್‌ಪ್ಲೇಯ ಪ್ರಖರತೆಯು ಉತ್ತಮವಾಗಿದೆ. ವಿಡಿಯೊ ವೀಕ್ಷಣೆಗೆ ಮತ್ತು ಗೇಮ್ಸ್‌ಗೆ ಬೆಸ್ಟ್‌ ಅನಿಸುವಂತಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಸಪೋರ್ಟ್‌ ನೀಡಲಾಗಿದೆ. ಹಾಗೂ ColorOS 6.1 ಬೆಂಬಲ ಸಹ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4GB RAM + 64GB ಮತ್ತು 4GB RAM + 128GB ವೇರಿಯಂಟ್ ಸಾಮರ್ಥ್ಯದ ಎರಡು ಆಯ್ಕೆಗಳನ್ನು ಹೊಂದಿದೆ. ವೇಗದ ಕಾರ್ಯವೈಖರಿ ಒದಗಿಸಲಿದೆ.

ಕ್ಯಾಮೆರಾ ಸ್ಪೆಷಲ್‌

ಕ್ಯಾಮೆರಾ ಸ್ಪೆಷಲ್‌

'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.5 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿಯ ಸೆನ್ಸಾರ್‌ ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದ್ದು, ಎಚ್‌ಆರ್‌ಡಿ, AI ಬ್ಯುಟಿಫಿಕೇಶನ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಫೋಟೊ ರೆಸಲ್ಯೂಶನ್ ಉತ್ತಮ ಎನ್ನಬಹುದು.

ಬ್ಯಾಟರಿ ಪವರ್

ಬ್ಯಾಟರಿ ಪವರ್

'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಸಾಮರ್ಥ್ಯ ಪಡೆದಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಈ ಪೋನ್ 12ಗಂಟೆಗಳ ವಿಡಿಯೊ ಪ್ಲೇಬ್ಯಾಕ್‌ ಮತ್ತು 718 ಗಂಟೆಗಳ ಬ್ಯಾಟರಿ ಸ್ಟ್ಯಾಂಡ್‌ಬೈ ಸಾಮರ್ಥ್ಯವನ್ನು ಪಡೆದಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಕಂಪಾಸ್‌, ಬ್ಲೂಟೂತ್, ವೈಫೈ, ಜಿಎಸ್‌ಪಿ, ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ. ಬ್ಯಾಟರಿ ಬ್ಯಾಕ್‌ಅಪ್‌ ಈ ಬಜೆಟ್‌ಗೆ ಉತ್ತಮವೇ ಸರಿ.

ಕೊನೆಯ ಮಾತು

ಕೊನೆಯ ಮಾತು

ರಿಯಲ್‌ ಮಿ 5s ಸ್ಮಾರ್ಟ್‌ಫೋನ್ ಉತ್ತಮ ಕ್ವಾಡ್‌ ಕ್ಯಾಮೆರಾದ ಬಜೆಟ್‌ ಸ್ಮಾರ್ಟ್‌ಫೋನ್ ಎನ್ನಬಹುದಾಗಿದೆ. ಈ ಸ್ಮಾರ್ಟ್‌ಫೋನ್ ರೆಡ್ಮಿ ನೋಟ್ 8 ಫೋನಿಗೆ ಪೈಪೋಟಿ ನೀಡುವ ಲಕ್ಷಣಗಳನ್ನು ಹೊಂದಿದೆ. ಡಿಸೈನ್, ಕ್ಯಾಮೆರಾ ಮತ್ತು ಬ್ಯಾಟರಿ ಪ್ಲಸ್‌ ಪಾಯಿಂಟ್ ಆಗಿದೆ. ಪ್ಲಾಸ್ಟಿಕ್ ಬಾಡಿ ಡಿವೈಸ್‌ ಎನ್ನುವುದು ಸ್ವಲ್ಪ ಮಟ್ಟಿಗೆ ಬೇಸರ ಅನಿಸಿದರೂ ಈ ಫೋನ್ 10,000ರೂ. ಪ್ರೈಸ್‌ನಲ್ಲಿ ಉತ್ತಮ ಎನ್ನಬಹುದು.

Best Mobiles in India

English summary
Realme 5s price starts at Rs. 9,999 in India for its 4GB RAM + 64GB storage variant. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+