Home
ಮೊಬೈಲ್

ರಿಯಲ್‌ಮಿ 7 ಪ್ರೊ ಫಸ್ಟ್‌ ಲುಕ್: ಜಬರ್ದಸ್ತ್ ಕ್ವಾಡ್‌ ಕ್ಯಾಮೆರಾ ಫೋನ್!

ರಿಯಲ್‌ ಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹಲವು ಭಿನ್ನ ಶ್ರೇಣಿಯ ಫೋನ್‌ಗಳಿಂದ ಗುರುತಿಸಿಕೊಂಡಿದೆ. ಸಂಸ್ಥೆಯು ಇತ್ತೀಚಿಗೆ ರಿಯಲ್ ಮಿ 7 ಸ್ಮಾರ್ಟ್‌ಫೋನ್ ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಸರಣಿಯು ರಿಯಲ್‌ಮಿ 7 ಮತ್ತು ರಿಯಲ್‌ಮಿ 7 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದ್ದು, ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್ ಗ್ರಾಹಕರ ಹೆಚ್ಚಿನ ಗಮನ ಸೆಳೆದಿದೆ.

ರಿಯಲ್‌ಮಿ 7 ಪ್ರೊ

ಭಾರತೀಯ ಮಾರುಕಟ್ಟೆಗೆ ಲಗ್ಗೆ ಹಾಕಿರುವ ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್ ಬಜೆಟ್ ಫೋನ್‌ ಆಗಿದ್ದರು ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಶಿಯೋಮಿಯ ರೆಡ್ಮಿ ಸರಣಿಯ ಫೋನ್‌ಗಳಿಗೆ ಪೈಪೋಟಿ ನೀಡುವ ಲಕ್ಷಣಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೇಗದ ಪ್ರೊಸೆಸರ್, ಕ್ವಾಡ್ ಕ್ಯಾಮೆರಾ, ಬಿಗ್ ಬ್ಯಾಟರಿ, ಆಕರ್ಷಕ ಡಿಸೈನ್‌ನಂತಹ ಸ್ಪರ್ಧಾತ್ಮಕ ಫೀಚರ್ಸ್‌ಗಳನ್ನು ಪಡೆದಿದೆ. ಹಾಗಾದರೇ ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್ ಫಸ್ಟ್‌ ಲುಕ್ ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಕರ್ಷಕ ಡಿಸೈನ್ ಮತ್ತು ಡಿಸ್‌ಪ್ಲೇ

ಆಕರ್ಷಕ ಡಿಸೈನ್ ಮತ್ತು ಡಿಸ್‌ಪ್ಲೇ

ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.4-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 20: 9 ಆಕಾರ ಅನುಪಾತ ಹೊಂದಿದ್ದು, ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.8 ಆಗಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ. ಮೊದಲ ನೋಟದಲ್ಲಿಯೇ ಗ್ರಾಹಕರಿಗೆ ಈ ಫೋನ್ ಡಿಸೈನ್ ಹೆಚ್ಚು ಆಕರ್ಷಕ ಅನಿಸಲಿದೆ.

ಪ್ರೊಸೆಸರ್ ವೇಗ ಹೇಗೆ

ಪ್ರೊಸೆಸರ್ ವೇಗ ಹೇಗೆ

ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 720G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಜೊತೆಗೆ 6GB RAM+128GB ಸ್ಟೋರೇಜ್ ಹಾಗೂ 8GB RAM ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ. ಸ್ಟಿರಿಯೋ ಸ್ಪೀಕರ್ಸ್‌ ಸೌಲಭ್ಯವನ್ನು ಪಡೆದಿದೆ. ಅಧಿಕ ಡೇಟಾದ ಗೇಮ್‌ಗಳನ್ನು ಸುಗಮವಾಗಿ ಆಡಬಹುದಾಗಿದೆ.

ನಾಲ್ಕು ಕ್ಯಾಮೆರಾ ಸೆಟ್‌ಅಪ್

ನಾಲ್ಕು ಕ್ಯಾಮೆರಾ ಸೆಟ್‌ಅಪ್

ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ. ಸದ್ಯ ಮಾರುಕಟ್ಟೆಯಲ್ಲಿ 64ಎಂಪಿ ಕ್ಯಾಮೆರಾ ಟ್ರೆಂಡಿಂಗ್‌ನಲ್ಲಿದ್ದು, ಹೀಗಾಗಿ ಅಧಿಕ ಕ್ಯಾಮೆರಾ ಸೆನ್ಸಾರ್‌ ಪಡೆದಿದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್ 4500mAh ಬ್ಯಾಟರಿಯನ್ನು ಪಡೆದಿದ್ದು, 65W ಸೂಪರ್‌ ಡಾರ್ಟ್‌ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ ವೈಫೈ-802.11ac, ಜಿಪಿಎಸ್‌, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4G VoLTE, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ. ಬಜೆಟ್‌ ಬೆಲೆಯಲ್ಲಿ ಅಧಿಕ ಬ್ಯಾಟರಿ ನೀಡಿರುವುದು ಪ್ಲಸ್‌ ಪಾಯಿಂಟ್ ಆಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ದೇಶಿಯ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್‌ 6GB + 128GB ಸ್ಟೋರೇಜ್ ಬೆಲೆಯು 19,999ರೂ. ಆಗಿದ್ದು, 8GB + 128GB ವೇರಿಯಂಟ್ ದರವು 21,999ರೂ. ಆಗಿದೆ. ಇನ್ನು ರಿಯಲ್‌ ಮಿ 7 ಪ್ರೊ ಫೋನ್ ಇದೇ ಸೆ.14 ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್ ಸೇಲ್ ಶುರು ಮಾಡಲಿದೆ.

ಕೊನೆಯ ಮಾತು

ಕೊನೆಯ ಮಾತು

ರಿಯಲ್‌ಮಿ 7 ಪ್ರೊ 20,000 ಸಾವಿರ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ತನ್ನ ವರ್ಗದಲ್ಲಿಯೇ ಇತರೆ ಬ್ರ್ಯಾಂಡ್‌ ಫೋನ್‌ಗಳಿಗೆ ಪೈಪೋಟಿ ನೀಡುವಂತಹ ಫೀಚರ್ಸ್‌ ಒಳಗೊಂಡಿದೆ. ಬಿಗ್ ಡಿಸ್‌ಪ್ಲೇ, ನಾಲ್ಕು ಕ್ಯಾಮೆರಾ ರಚನೆಯಿಂದ ಗಮನ ಸೆಳೆಯುತ್ತದೆ. ಆದರೆ ಬ್ಯಾಟರಿ ಬಾಳಿಕೆಯನ್ನು 5000mAh ನೀಡಿದ್ದರೇ ಇನ್ನಷ್ಟು ಪವರ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಹೊರತುಪಡಿಸಿ ಉಳಿದಂತೆ ಬಜೆಟ್‌ ಬೆಲೆಗೆ ಕ್ವಾಡ್‌ ಕ್ಯಾಮೆರಾ ಫೋನ್ ಖರೀದಿಸುವವರಿಗೆ ಈ ಫೋನ್ ಉತ್ತಮ ಆಯ್ಕೆ.

Best Mobiles in India

English summary
Realme 7 Pro boasts a quad-lens rear camera featuring the 64MP Sony IMX682 sensor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+