ರಿಯಲ್ ಮಿ 7 ಪ್ರೊ ಹಾಗೂ ರೆಡ್ಮಿ ನೋಟ್ 9 ಪ್ರೊ: ಖರೀದಿಗೆ ಯಾವುದು ಬೆಸ್ಟ್?
ಪ್ರಸ್ತುತ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳು ಬಜೆಟ್ ದರ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ವಾಡ್ ಕ್ಯಾಮೆರಾ, ಬಿಗ್ ಬ್ಯಾಟರಿ ಬ್ಯಾಕ್‌ಅಪ್, ವೇಗದ ಪ್ರೊಸೆಸರ್ ಫೀಚರ್ಸ್‌ಗಳ ಪರಿಚಯಿಸುತ್ತಿವೆ. ಈ ನಿಟ್ಟಿನಲ್ಲಿ ರಿಯಲ್ ಮಿ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ರಿಯಲ್ ಮಿ 7 ಪ್ರೊ ಹೆಚ್ಚು ಗಮನ ಸೆಳೆದಿದ್ದು, ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗೆಯೇ ಇತ್ತೀಚಿನ ರೆಡ್ಮಿ ನೋಟ್ 9 ಪ್ರೊ ಗಿಂತ ರಿಯಲ್‌ಮಿ 7 ಪ್ರೊ ಭಿನ್ನವೆ?..ಇವೆರಡಲ್ಲಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೇ ಬಳಕೆದಾರರಿಗೆ ಮೂಡದೇ ಇರದು.

ಹೌದು, ಬಜೆಟ್ ಪ್ರೈಸ್‌ಟ್ಯಾಗ್ ಹೊಂದಿರುವ ರಿಯಲ್ ಮಿ 7 ಪ್ರೊ ಹಾಗೂ ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಮೇಲ್ನೋಟಕ್ಕೆ ಬಹುತೇಕ ಸಾಮತ್ಯೆ ಎಂದು ಕಂಡುಬಂದರೂ ಇವೆರಡು ಫೋನ್‌ಗಳ ಭಿನ್ನ ಫೀಚರ್ಸ್‌ಗಳನ್ನು ಪಡೆದಿವೆ. ಹಾಗಾದರೇ ರಿಯಲ್ ಮಿ 7 ಪ್ರೊ ಮತ್ತು ರೆಡ್ಮಿ ನೋಟ್ 9 ಪ್ರೊ ಇವೆರಡಲ್ಲಿ ಖರೀದಿಗೆ ಯಾವುದು ಯೋಗ್ಯ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಡಿಸ್‌ಪ್ಲೇ ವ್ಯತ್ಯಾಸ
ರಿಯಲ್ ಮಿ 7 ಪ್ರೊ ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.4-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 20: 9 ಆಕಾರ ಅನುಪಾತ ಹೊಂದಿದ್ದು, ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.8 ಆಗಿದೆ. ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ಪಂಚ್ ಹೋಲ್ ಮಾದರಿಯಲ್ಲಿದ್ದು, ಈ ಫೋನ್ 60Hz ಡಿಸ್‌ಪ್ಲೇ ರೀಫ್ರೇಶ್ ರೇಟ್ ಹೊಂದಿದೆ ಹಾಗೂ ಟಚ್ ಸಾಂಪ್ಲಿಂಗ್ ರೇಟ್ 120Hz ಆಗಿದೆ.

ಪ್ರೊಸೆಸರ್ ಕಾರ್ಯವೈಖರಿ
ರಿಯಲ್ ಮಿ 7 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 720G SoC ಪ್ರೊಸೆಸರ್ ಅನ್ನು ಹೊಂದಿದ್ದು, ಜೊತೆಗೆ 6GB RAM+128GB ಸ್ಟೋರೇಜ್ ಅನ್ನು ಹೊಂದಿದೆ. ಇನ್ನು ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720 ಪ್ರೊಸೆಸರ್ ಅನ್ನು ಪಡೆದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 4GB RAM +64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಪ್ರೊಸೆಸರ್ ಫೀಚರ್‌ನಲ್ಲಿ ಈ ಎರಡು ಫೋನ್‌ಗಳು ಸಾಮತ್ಯೆ ಪಡೆದಿವೆ.

ಕ್ಯಾಮೆರಾ ವಿನ್ಯಾಸ
ರಿಯಲ್ ಮಿ 7 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್ ಪಡೆದಿದೆ. ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 8ಎಂಪಿಯ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದೆ. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಇವೆರಡರಲ್ಲಿ ರಿಯಲ್ ಮಿ 7 ಪ್ರೊ ಫೋನ್ ಕ್ಯಾಮೆರಾ ಹೈಲೈಟ್ ಅನಿಸಲಿದೆ.

ಬ್ಯಾಟರಿ ಬ್ಯಾಕ್‌ಅಪ್
ರಿಯಲ್ ಮಿ 7 ಪ್ರೊ ಸ್ಮಾರ್ಟ್‌ಫೋನ್ 4500mAh ಬ್ಯಾಟರಿಯನ್ನು ಪಡೆದಿದ್ದು, 65W ಸೂಪರ್ ಡಾರ್ಟ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ 5020mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದರೊಂದಿಗೆ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ, ಬ್ಲೂಟೂತ್, ಹಾಟ್‌ಸ್ಟಾಪ್ ಸೇರಿದಂತೆ ಇತ್ತೀಚಿನ ಫೀಚರ್ಸ್‌ಗಳು ಪಡೆದಿವೆ. ಬ್ಯಾಟರಿ ಸಾಮರ್ಥ್ಯದಲ್ಲಿ ಹೆಚ್ಚಿನ ಭಿನ್ನತೆಗಳು ಇಲ್ಲ.

ಬೆಲೆ ಎಷ್ಟು?
ರಿಯಲ್ ಮಿ 7 ಪ್ರೊ ಸ್ಮಾರ್ಟ್‌ಫೋನ್ 6GB + 128GB ಸ್ಟೋರೇಜ್ ಬೆಲೆಯು 19,999ರೂ. ಆಗಿದ್ದು, 8GB + 128GB ವೇರಿಯಂಟ್ ದರವು 21,999ರೂ. ಆಗಿದೆ. ಇನ್ನು ರಿಯಲ್ ಮಿ 7 ಪ್ರೊ ಫೋನ್ ಇದೇ ಸೆ.14 ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್ ಸೇಲ್ ಶುರು ಮಾಡಲಿದೆ. ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ ಬೆಲೆಯು 13,999ರೂ. ಆಗಿದೆ. 6GB RAM ವೇರಿಯಂಟ್ ಬೆಲೆಯು 16,999ರೂ. ಆಗಿದೆ.


Click it and Unblock the Notifications








