ರಿಯಲ್‌ಮಿ 8 ಫಸ್ಟ್ ಲುಕ್: ಬಜೆಟ್ ಪ್ರೈಸ್‌ನಲ್ಲಿ ವೇಗ ಪ್ರೊಸೆಸರ್ ಪೋನ್!
ರಿಯಲ್ ಮಿ ಸಂಸ್ಥೆಯು ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್ ಸರಣಿಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ರಿಯಲ್‌ಮಿ ಸಂಸ್ಥೆಯು ಇತ್ತೀಚಿಗೆ ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಸರಣಿಯು ರಿಯಲ್‌ಮಿ 8 ಮತ್ತು ರಿಯಲ್‌ಮಿ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಕೆಲ ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಮಾರುಕಟ್ಟೆಗೆ ಲಗ್ಗೆ ಹಾಕಿರುವ ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಕಡಿಮೆ ದರದ ಫೋನ್ ಆಗಿದ್ದರು ಕೆಲವು ಉತ್ತಮ ಫೀಚರ್ಸ್‌ಗಳನ್ನು ಪಡೆದಿದೆ. ತನ್ನ ವರ್ಗದ ಇತರೆ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುವ ಲಕ್ಷಣಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೇಗದ ಪ್ರೊಸೆಸರ್, ಕ್ವಾಡ್ ಕ್ಯಾಮೆರಾ, ಬಿಗ್ ಬ್ಯಾಟರಿ, ಆಕರ್ಷಕ ಡಿಸೈನ್‌ನಂತಹ ಸ್ಪರ್ಧಾತ್ಮಕ ಫೀಚರ್ಸ್‌ಗಳನ್ನು ಪಡೆದಿದೆ. ಹಾಗಾದರೇ ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಫಸ್ಟ್ ಲುಕ್ ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ 8-ಡಿಸ್‌ಪ್ಲೇ ಹೇಗಿದೆ
ರಿಯಲ್‌ಮಿ 8 ಸ್ಮಾರ್ಟ್‌ಫೋನ್ 6.4 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್ ಸಹ ಪಡೆದುಕೊಂಡಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಒಳಗೊಂಡಿದ್ದು, 90Hz ಸ್ಕ್ರೀನ್ ರೀಫ್ರೇಶ್ ರೇಟ್ ಹೊಂದಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ. ಮೊದಲ ನೋಟದಲ್ಲಿಯೇ ಗ್ರಾಹಕರಿಗೆ ಈ ಫೋನ್ ಡಿಸೈನ್ ಹೆಚ್ಚು ಆಕರ್ಷಕ ಅನಿಸಲಿದೆ.

ರಿಯಲ್‌ಮಿ 8 ಪ್ರೊಸೆಸರ್ ಯಾವುದು
ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G95 ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ Adreno 618 GPU ಗ್ರಾಫಿಕ್ ಸಪೋರ್ಟ್‌ನ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಪ್ರೊಸೆಸರ್ ಇತ್ತೀಚಿನ ಆಂಡ್ರಾಯ್ಡ್ 11 ಓಎಸ್ ಬೆಂಬಲವನ್ನು ಪಡೆದುಕೊಂಡಿರಲಿದೆ. ಇನ್ನು ಈ ಫೋನ್ 6GB + 128GB ಮತ್ತು 8GB + 128GB ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದೆ. ಅಧಿಕ ಡೇಟಾದ ಗೇಮ್‌ಗಳನ್ನು ಸುಗಮವಾಗಿ ಆಡಬಹುದಾಗಿದೆ.

ರಿಯಲ್‌ಮಿ 8 - ಕ್ಯಾಮೆರಾ ಸೆನ್ಸಾರ್ ಹೇಗೆ
ರಿಯಲ್‌ಮಿ 8 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 64ಎಂಪಿ ಕ್ಯಾಮೆರಾ ಟ್ರೆಂಡಿಂಗ್‌ನಲ್ಲಿದ್ದು, ಹೀಗಾಗಿ ಅಧಿಕ ಕ್ಯಾಮೆರಾ ಸೆನ್ಸಾರ್ ಪಡೆದಿದೆ.

ರಿಯಲ್‌ಮಿ 8 - ಬ್ಯಾಟರಿ ಪವರ್ ಏನು
ರಿಯಲ್‌ಮಿ 8 ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದರೊಂದಿಗೆ 30W Dart ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರಲಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್ ಸೈಬರ್ ಸಿಲ್ವರ್ ಹಾಗೂ ಸೈಬರ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿದೆ. ಬಜೆಟ್ ಬೆಲೆಯಲ್ಲಿ ಅಧಿಕ ಬ್ಯಾಟರಿ ನೀಡಿರುವುದು ಪ್ಲಸ್ ಪಾಯಿಂಟ್ ಆಗಿದೆ.

ಬೆಲೆ ಎಷ್ಟು?
ರಿಯಲ್‌ಮಿ 8 ಫೋನಿನ 4GB + 128GB ವೇರಿಯಂಟ್ ಬೆಲೆಯು 14,999ರೂ. ಆಗಿದೆ. 6GB + 128GB ವೇರಿಯಂಟ್ ಬೆಲೆಯು 15,999ರೂ. ಆಗಿದೆ. ಇನ್ನು ಹೈ ಎಂಡ್ 8GB + 128GB ವೇರಿಯಂಟ್ ದರವು 16,999ರೂ. ಆಗಿದೆ. ಅದೇ ರೀತಿ ರಿಯಲ್‌ಮಿ 8 ಪ್ರೊ ಫೋನಿನ 6GB + 128GB ವೇರಿಯಂಟ್ ದರವು 17,999ರೂ. ಆಗಿದೆ ಮತ್ತು 8GB + 128GB ವೇರಿಯಂಟ್ ಬೆಲೆಯು 19,999ರೂ. ಆಗಿದೆ.


Click it and Unblock the Notifications








