ಇಂದಿನಿಂದ ಶುರುವಾಗಿದೆ 'ರಿಯಲ್ ಮಿ C1' ಸ್ಮಾರ್ಟ್‌ಫೋನ್‌ ಸೇಲ್.!

|

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆ ಗಳಿಸಿರುವ 'ರಿಯಲ್ ಮಿ' ಸ್ಮಾರ್ಟ್‌ಫೋನ್‌ ಕಂಪನಿಯು ಈ ಹಿಂದೆ ಬಿಡುಗಡೆ 'ರಿಯಲ್ ಮಿ ಸಿ 1 ' ಹೆಸರಿನ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿತ್ತು. ಇದೀಗ ಕಂಪನಿ 'ರಿಯಲ್ ಮಿ ಸಿ 1' (2019) ಸ್ಮಾರ್ಟ್‌ಫೋನಿನ ಅಪ್‌ಡೇಟ್‌ ಎಡಿಷನ್ ಬಿಡುಗಡೆ ಮಾಡಿದ್ದು. ಇಂದಿನಿಂದ ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇಂದಿನಿಂದ ಶುರುವಾಗಿದೆ 'ರಿಯಲ್ ಮಿ C1' ಸ್ಮಾರ್ಟ್‌ಫೋನ್‌ ಸೇಲ್.!

ಹೌದು, ಈಗಾಗಲೇ ರಿಯಲ್ ಮಿ ಸಿ 1' ಸ್ಮಾರ್ಟ್‌ಫೋನ್‌ ಭಾರತೀಯ ಗ್ರಾಹಕರನ್ನು ಆಕರ್ಷಿಸಿದ್ದು, ಈ ಹೊಸ ಅಪ್‌ಡೇಟ್‌ 'ರಿಯಲ್ ಮಿ ಸಿ 1' (2019) ಎಡಿಷನ್ ಸ್ಮಾರ್ಟ್‌ಫೋನ್‌ನ ಕೂಡಾ ಗ್ರಾಹಕರನ್ನು ಸೆಳೆಯಲಿದೆ ಎಂದು ಹೇಳಲಾಗುತ್ತಿದೆ. ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇಂದಿನಿಂದ ಈ ಹೊಸ ಸ್ಮಾರ್ಟ್‌ಫೋನಿನ ಮಾರಾಟ ಶುರುವಾಗಿದ್ದು, ಗ್ರಾಹಕರು ಸ್ಮಾರ್ಟ್‌ಪೋನನ್ನು ಖರೀದಿಸಬಹುದಾಗಿದೆ.

ಇಂದಿನಿಂದ ಶುರುವಾಗಿದೆ 'ರಿಯಲ್ ಮಿ C1' ಸ್ಮಾರ್ಟ್‌ಫೋನ್‌ ಸೇಲ್.!

ನೂತನ 'ರಿಯಲ್ ಮಿ ಸಿ 1' ಅಪ್‌ಡೇಟ್‌ ಎಡಿಷನ್‌ಸ್ಮಾರ್ಟ್‌ಫೋನ್‌ನಲ್ಲಿ RAM ಮತ್ತು ಆಂತರಿಕ ಸಂಗ್ರಹ ಸಾಮರ್ಥ್ಯಗಳನ್ನು ವೃದ್ಧಿಸಿದ್ದು, ಇದರೊಂದಿಗೆ ಕೆಲವು ಹೊಸ ಫೀಚರ್ಸ್‌ಗಳನ್ನು ಅಳವಡಿಸಲಾಗಿದೆ. ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ ಆಗಿರುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಗನೆ ಸದ್ದು ಮಾಡುವ ಲಕ್ಷಣಗಳಿವೆ ಎನ್ನಲಾಗುತ್ತಿದೆ. ಹಾಗಾದರೇ, ಈ ಫೋನಿನಲ್ಲಿ ಇತರೆ ಏನೆಲ್ಲಾ ಫೀಚರ್ಸ್‌ಗಳಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಿನ್ಯಾಸ

ವಿನ್ಯಾಸ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಓಷಿಯನ್ ಬ್ಲೂ ಮತ್ತು ಡೀಪ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಂಭಾಗದದಲ್ಲಿ ಐಫೋನ್ X ಮಾದರಿಯ ನೋಚ್‌ನಲ್ಲಿ ಸೆಲ್ಫಿ ಕ್ಯಾಮೆರಾ ಹೊಂದಿದ್ದು, AI ಫೇಸ್‌ ಅನ್‌ಲಾಕ್ ಫೀಚರ್‌ ಇದೆ. ಯುನಿಬಾಡಿ ಗ್ಲಾಸ್ ವಿನ್ಯಾಸ ಹೊಂದಿದ್ದು, ಬೆಜಲ್‌ ಲೆಸ್‌ ಡಿಸ್‌ಪ್ಲೇ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 6.2 ಇಂಚಿನ HD+ ಗುಣಮಟ್ಟದ 19:9 ಅನುಪಾತನದ ಡಿಸ್‌ಪ್ಲೇ ಹೊಂದಿದೆ. ಐಫೋನ್ X ಮಾದರಿಯ ನೋಚ್ ಡಿಸ್‌ಪ್ಲೇ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಇದು ಆಂಡ್ರಾಯ್ಡ್ 8.1 ಓರಿಯೋ ಬೆಂಬಲಿತ ColorOS 5.1 ನಿಂದ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 9.0 ಪೈ ಅಪ್‌ಡೇಟ್ ದೊರೆಯಲಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಮಿ C1 ನಲ್ಲಿ ಒಕ್ಟಾಕೋರ್‌ನ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಅಳವಡಿಸಲಾಗಿದೆ. ಆಡ್ರಿನೋ 506 GPU ಕೂಡ ಕಾಣಬಹುದಾಗಿದ್ದು, ಗೇಮಿಂಗ್‌ ಮತ್ತೀತರ ಮಲ್ಟಿಮೀಡಿಯಾ ಅನುಭವಗಳನ್ನು ಉತ್ತಮಗೊಳಿಸಿತ್ತದೆ. ರಿಯಲ್‌ಮಿ C1 ನ ವೇಗ 1.8GHz ಇದ್ದು, ಇಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ ಆಗಿದೆ.

ಮೆಮೊರಿ

ಮೆಮೊರಿ

ಈ ಮೊದಲು ರಿಯಲ್ ಮಿ C1 ಒಂದೇ ಆವೃತ್ತಿಯಲ್ಲಿ ದೊರೆಯುತ್ತಿತ್ತು, 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದ್ದ ಈ ಸ್ಮಾರ್ಟ್‌ಪೋನ್ ಇದೀಗ 3GB RAM ಮತ್ತು 32 GB ಮೆಮೊರಿಯ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಎರಡೂ ಮಾದರಿಯ ಫೋನ್‌ಗಳ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಮೂಲಕ 256 GBವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ರಿಯಲ್ ಮಿ C1ನಲ್ಲಿ ಅತಿ ಕಡಿಮೆ ಬೆಲೆಗೆ ಡ್ಯುಯಲ್‌ ಕ್ಯಾಮೆರಾ ನೀಡಿದ್ದು, ಹಿಂಭಾಗದಲ್ಲಿ 13 MP+2 MP ಲೆನ್ಸ್ ಅಳವಡಿಸಲಾಗಿದೆ. ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ಕ್ಯಾಮೆರಾ AI ಬೆಂಬಲಿತವಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಕೃತಕ ಬುದ್ದಿಮತ್ತೆ ಆಧಾರಿತ ಕ್ಯಾಮೆರಾ ತಂತ್ರಜ್ಞಾನ ಅತ್ಯತ್ತಮವಾಗಿದೆ ಎಂದು ಹೇಳಬಹುದು.

ಬ್ಯಾಟರಿ ಮತ್ತು ಬೆಲೆ

ಬ್ಯಾಟರಿ ಮತ್ತು ಬೆಲೆ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 4230mAh ಬ್ಯಾಟರಿ ಹೊಂದಿದ್ದು. ಎರಡು ದಿನಗಳ ಕಾಲ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೇ ಪವರ್ ಸೇವಿಂಗ್ ಮೋಡ್ ಇದ್ದು, ದೀರ್ಘ ಬ್ಯಾಟರಿ ಬಾಳಿಕೆಯನ್ನು ಕಾಣಬಹುದು. ಇನ್ನು 2 GB RAM ಮಾದರಿಯ ಫೋನ್ ಬೆಲೆ 7,499 ರೂ. ಗಳಾದರೆ, 3GB RAM ಮಾದರಿಯ ಸ್ಮಾರ್ಟ್‌ಫೋನ್ ಬೆಲೆಯು ಕೇವಲ 8,499 ರೂ.ಗಳಾಗಿವೆ.

Best Mobiles in India

English summary
Realme C1 (2019), the new storage variant of the Realme C1 that was launched in India last year, will go on sale in India for the first time today. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X