Home
ಮೊಬೈಲ್

ಜಸ್ಟ್ 8,999 ರೂ..! ಸದ್ದಿಲ್ಲದೆ Realme C63 ಫೋನ್ ಲಾಂಚ್: ಜುಲೈ 3 ರಿಂದ ಸೇಲ್ ಶುರು

ರಿಯಲ್‌ಮಿ ಮೊಬೈಲ್‌ ಪ್ರಿಯರಿಗೆ ಸರ್ಪ್ರೈಸ್ ಗಿಫ್ಟ್. ಸದ್ದಿಲ್ಲದೆ ಹೊಚ್ಚ ಹೊಸ ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಜಸ್ಟ್‌ 8,999 ರೂ. ಬೆಲೆಯಲ್ಲಿ ಭರಪೂರ ಫೀಚರ್ಸ್‌ನೊಂದಿಗೆ ಈ ಮೊಬೈಲ್‌ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. ಹೌದು, ವಿಶ್ವದ ದೈತ್ಯ ಟೆಕ್‌ ಕಂಪನಿಗಳಲ್ಲಿ ಒಂದಾಗಿರುವ ರಿಯಲ್‌ಮಿ, ಮತ್ತೊಮ್ಮೆ ತನ್ನ ನೂತನ ಫೋನ್‌ನಿಂದ ಸದ್ದು ಮಾಡಿದೆ. ಸೈಲೆಂಟ್‌ ಆಗಿಯೇ ತನ್ನ 'C' ಸರಣಿಯ ನೂತನ Realme C63 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. Realme C63 ಮೊಬೈಲ್‌ ಅಬ್ಬರಕ್ಕೆ ಟೆಕ್‌ ವಲಯ ಕಂಗಾಲಾಗುವ ಮುನ್ಸೂಚನೆ ದೊರೆತಿದೆ. ಈ ನೂತನ ಫೋನ್‌ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ? ಬೆಲೆ ಎಷ್ಟು? ಎಂಬ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ರಿಯಲ್‌ಮಿ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಮ್ಯಾಜಿಕ್‌ ಮಾಡುವುದು ಹೊಸತೇನಲ್ಲ. ಸ್ಟೈಲಿಶ್ ಡಿಸೈನ್, ವಿಭಿನ್ನ ಫೀಚರ್ಸ್‌ ಹಾಗೂ ಕಾರ್ಯಕ್ಷತೆಯ ಕಾರಣಕ್ಕೆ ರಿಯಲ್‌ಮಿ ಸೈ ಎನಿಸಿಕೊಂಡಿದೆ. ಅದರಂತೆ, ಸದ್ದಿಲ್ಲದೆ ಎಂಟ್ರಿ ಕೊಟ್ಟಿದ್ದರೂ ತನ್ನ ಕ್ಯಾಮೆರಾ ರಚನೆಯ ಮೂಲಕವೇ ರಿಯಲ್‌ಮಿ C63 ಸಖತ್‌ ಸೌಂಡ್‌ ಮಾಡುತ್ತಿದೆ. ಇದು 50MP ಸೆನ್ಸಾರ್‌ ಸಾಮರ್ಥ್ಯದ ಮುಖ್ಯ ಕ್ಯಾಮೆರಾ, 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಎಂಟ್ರಿಯಲ್ಲಿಯೇ ಅಬ್ಬರದ ಸೌಂಡ್‌ ಮಾಡುತ್ತಿದೆ. ಈ ನೂತನ ಫೋನ್‌ನ ಮತ್ತಷ್ಟು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ಜಸ್ಟ್ 8,999 ರೂ..! ಸದ್ದಿಲ್ಲದೆ Realme C63 ಫೋನ್ ಲಾಂಚ್: ಜುಲೈ 3 ರಿಂದ ಸೇಲ್

Realme C63 ಫೋನ್‌ನ ವಿಶೇಷತೆಗಳೇನು?

ರಿಯಲ್‌ಮಿ C63 ಫೋನ್ ಕೇವಲ 7.74mm ದಪ್ಪವನ್ನು ಹೊಂದಿದೆ. ಇದು 4GB RAM ಮತ್ತು ಹೆಚ್ಚುವರಿ 4GB ವರ್ಚುವಲ್ RAM ಪಡೆದಿದೆ. Unisoc T612 SoC ಪ್ರೊಸೆಸರ್‌ನೊಂದಿಗೆ (ಜೊತೆಗೆ Mali-G57 GPU) ಕಾರ್ಯನಿರ್ವಹಿಸಲಿದೆ. ಡಿಸ್ಪ್ಲೇಯು 560nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. 50MP ಹಿಂಬದಿಯ ಕ್ಯಾಮರಾ, 8MP ಫ್ರಂಟ್ ಕ್ಯಾಮರಾ ಇದೆ. ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

5000mAh ಬ್ಯಾಟರಿ, 45W ವೇಗದ ಚಾರ್ಜಿಂಗ್‌

ಈ ರಿಯಲ್‌ಮಿ C63 ಫೋನ್‌ನ ಬ್ಯಾಟರಿ ಬ್ಯಾಕಪ್ ಅದ್ಭುತವಾಗಿದೆ. ಇದು 45W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಒದಗಿಸುತ್ತದೆ. ಇದು ಏರ್ ಗೆಸ್ಚರ್‌ಗಳನ್ನು ಹೊಂದಿದ್ದು, ಕಾಲ್‌ಗಳಿಗೆ ಉತ್ತರಿಸಲು, ಇನ್‌ಕಮಿಂಗ್ ಕರೆಗಳನ್ನು ಮ್ಯೂಟ್ ಮಾಡಲು ಮತ್ತು ವೀಡಿಯೊ ಸ್ಟ್ರೀಮ್‌ಗಳ ನಡುವೆ ಮೇಲಕ್ಕೆ/ಕೆಳಗೆ ಸ್ವೈಪ್ ಮಾಡುವ ಆಯ್ಕೆಯನ್ನು ಹೊಂದಿದೆ.

ಈ ಫೋನ್‌ನ ಬೆಲೆ ಎಷ್ಟು? ಮಾರಾಟ ಯಾವಾಗ?

Realme C63 ಮೊಬೈಲ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಲೆದರ್ ಬ್ಲೂ ಮತ್ತು ಜೇಡ್ ಗ್ರೀನ್‌ನಲ್ಲಿ ಬರುತ್ತದೆ. ಭಾರತದಲ್ಲಿ 4GB + 128GB ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಾಂಚ್ ಮಾಡಲಾಗಿದೆ. 8,999 ರೂ. ಬೆಲೆಯಲ್ಲಿ ಲಭ್ಯವಿರುತ್ತದೆ. ಇದೇ ಜುಲೈ 3 ರಿಂದ realme.com, Flipkart ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ 12 ಗಂಟೆಗೆ ಮಾರಾಟ ಪ್ರಾರಂಭವಾಗಲಿದೆ.

ಭಾರತದಲ್ಲಿ ಅಗ್ಗದ ಬೆಲೆಗೆ ಲಾಂಚ್‌

ಇಂಡೋನೇಷ್ಯಾದಲ್ಲಿ ಜೂನ್ 5 ರಿಂದ ರಿಯಲ್‌ಮಿ C63 ಫೋನ್‌ನ ಮಾರಾಟ ಪ್ರಾರಂಭವಾಗಿತ್ತು. ಅಲ್ಲಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಂಡೋನೇಷಿಯನ್ ವೆಬ್‌ಸೈಟ್‌ನಲ್ಲಿ ಈ ಫೋನ್‌ನ ಬೆಲೆ 10,250 ರೂ. ಇತ್ತು. 6GB/128GB ಸ್ಟೋರೇಜ್ ಮಾದರಿಯ ಬೆಲೆ 10,250 ರೂ. ಮತ್ತು 8GB/128GB ಸ್ಟೋರೇಜ್‌ ಬೆಲೆ 11,790 ರೂ. ಇತ್ತು.ಆದರೆ, ಭಾರತದಲ್ಲಿ ಕೇವಲ 8,999 ರೂ.ಗೆ ಲಾಂಚ್ ಮಾಡಲಾಗಿದೆ.

ರಿಯಲ್‌ಮಿ C63 ಸಂಪೂರ್ಣ ಫೀಚರ್ಸ್‌ಗಳು

  • ಡಿಸ್ಲ್ಪೇ: 6.74 ಇಂಚಿನ (1600 x 720 ಪಿಕ್ಸೆಲ್‌ಗಳು) HD+ IPS LCD ಡಿಸ್ಲ್ಪೇ.
  • ರಿಫ್ರೆಶ್ ರೇಟ್: 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ರೇಟ್, 450nits ಗರಿಷ್ಠ ಬ್ರೈಟ್‌ನೆಸ್
  • ಪ್ರೊಸೆಸರ್: UNISOC T612 ಆಕ್ಟಾ-ಕೋರ್ 12nm ಪ್ರೊಸೆಸರ್ ಜೊತೆಗೆ Mali-G57 GPU
  • ಸ್ಟೋರೇಜ್: 4GB LPDDR4X RAM, 128GB ಸ್ಟೋರೇಜ್ ಮತ್ತು ಮೈಕ್ರೊ SD ಜೊತೆಗೆ 2TB ವರೆಗೆ ವಿಸ್ತರಿಸಬಹುದಾದ ಮೆಮೊರಿ
  • ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್‌ಡಿ)
  • ಓಎಸ್: ರಿಯಲ್‌ಮಿ UI ಜೊತೆಗೆ Android 14
  • ಕ್ಯಾಮೆರಾ: 50MP ಹಿಂಬದಿಯ ಕ್ಯಾಮೆರಾ ( f/1.8 ಅಪರ್ಚರ್, ಡೆಪ್ತ್ ಸೆನ್ಸಾರ್, LED ಫ್ಲಾಷ್)
  • ಫ್ರಂಟ್ ಕ್ಯಾಮೆರಾ: 8MP ಫ್ರಂಟ್ ಕ್ಯಾಮೆರಾ (ಜೊತೆಗೆ f/2.0 aperture), ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್
  • ಆಡಿಯೋ ಜ್ಯಾಕ್: 3.5mm ಆಡಿಯೋ ಜ್ಯಾಕ್, ಕೆಳಗೆ-ಪೋರ್ಟ್ ಮಾಡಿದ ಸ್ಪೀಕರ್((bottom-ported speaker)
  • ಅಳತೆ: 167.26×76.67×7.74 mm, ತೂಕ: 189g (Jade Green) / 191g (Leather Blue)
  • ಬ್ಯಾಟರಿ: 5000mAh ಬ್ಯಾಟರಿ ಬ್ಯಾಕಪ್
  • ಚಾರ್ಜಿಂಗ್: 45W SuperVOOC ಫಾಸ್ಟ್ ಚಾರ್ಜಿಂಗ್
  • ಕನೆಕ್ಟಿವಿಟಿ ಆಯ್ಕೆಗಳು: ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.=0, GPS + ಗ್ಲೋನಾಸ್, USB ಟೈಪ್-ಸಿ

ಇತ್ತೀಚೆಗೆ ರಿಯಲ್‌ಮಿ ಕಂಪನಿಯು ಇಂಡೋನೇಷ್ಯಾದಲ್ಲಿ ತನ್ನ 'C' ಸರಣಿಯ ರಿಯಲ್‌ಮಿ C63 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಇದೀಗ, ಭಾರತದಲ್ಲಿ ಈ ಮೊಬೈಲ್ ಅನ್ನು ಪರಿಚಯಿಸಿದೆ. ಅದರಲ್ಲೂ ಕಡಿಮೆ ಬೆಲೆಯಲ್ಲಿ ಭರಪೂರ ಫೀಚರ್ಸ್‌ನೊಂದಿಗೆ ಈ ಮೊಬೈಲ್‌ ಎಂಟ್ರಿ ಕೊಟ್ಟಿದೆ. ಅಗ್ಗದ ಬೆಲೆಯಲ್ಲಿ ಫೋನ್‌ ಖರೀದಿಸುವ ಗ್ರಾಹಕರಿಗೆ Realme C63 ಸ್ಮಾರ್ಟ್‌ಫೋನ್‌ ಹಾಟ್ ಫೇವರಿಟ್ ಎನಿಸಿದೆ. ಜುಲೈ ತಿಂಗಳ ಮೊದಲ ದಿನವೇ, ರಿಯಲ್‌ಮಿ ಮೊಬೈಲ್ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ ಸಿಕ್ಕಂತಾಗಿದೆ.

Best Mobiles in India

English summary
Realme C63 Launched at Rs 8,999 in India. with AI features, 50MP Primary Camera and 45W Charging. Check price and specifications. Sale Slated for July 3 on Flipkart
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+