Home
ಮೊಬೈಲ್

ರಿಯಲ್‌ಮಿ GT ನಿಯೋ 2 ಫಸ್ಟ್‌ ಲುಕ್: ರಫ್‌ ಆಂಡ್‌ ಟಫ್‌ ಕಾರ್ಯವೈಖರಿಯ ಫೋನ್‌!

ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ರಿಯಲ್‌ಮಿಯು ಈಗಾಗಲೇ GT ಸರಣಿಯಲ್ಲಿ ಹಲವು ಫೋನ್‌ಗಳನ್ನು ಲಾಂಚ್ ಮಾಡಿ ಸೈ ಎನಿಸಿಕೊಂಡಿದೆ. ಆ ಪೈಕಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ರಿಯಲ್‌ಮಿ GT ನಿಯೋ 2 ಹಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಮುಖ್ಯವಾಗಿ 5G ಸಪೋರ್ಟ್‌ ನೊಂದಿಗೆ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ.

ಸ್ಮಾರ್ಟ್‌ಫೋನ್‌

ಹೌದು, ರಿಯಲ್‌ಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ನೂತನವಾಗಿ ಪರಿಚಯಿಸಿರುವ ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ 120Hz ರೀಫ್ರೇಶ್‌ ರೇಟ್ ಒಳಗೊಂಡ HDR10+ ಬೆಂಬಲದ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗಾದರೇ ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನಿನ ಫಸ್ಟ್‌ ಲುಕ್ ಹೇಗಿದೆ?.. ಫೀಚರ್ಸ್‌ಗಳ ಕಾರ್ಯ ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ

ರಿಯಲ್‌ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್‌ 1080 × 2400 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿರುವ 6.62-ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, 1,300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು ಡಿಸಿ ಡಿಮ್ಮಿಂಗ್‌ನೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇ 600Hz ಟಚ್‌ ಸ್ಯಾಂಪಲ್‌ ರೇಟ್‌ ಮತ್ತು HDR10+ ಬೆಂಬಲವನ್ನು ಹೊಂದಿದೆ. ಜೊತೆಗೆ ಸ್ಕ್ರೀನ್‌ ಟು ಬಾಡಿ 92.60% ಅನುಪಾತವನ್ನು ಹೊಂದಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ. ಮೊದಲ ನೋಟದಲ್ಲಿಯೇ ಗ್ರಾಹಕರಿಗೆ ಈ ಫೋನ್ ಡಿಸೈನ್ ಹೆಚ್ಚು ಆಕರ್ಷಕ ಅನಿಸಲಿದೆ.

ಪ್ರೊಸೆಸರ್‌ ಪವರ್ ಯಾವುದು

ಪ್ರೊಸೆಸರ್‌ ಪವರ್ ಯಾವುದು

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ 7GB ವರ್ಚುವಲ್ ಮೆಮೊರಿಯನ್ನು ಕೂಡ ಬೆಂಬಲಿಸಲಿದೆ. ಅಧಿಕ RAM ಬಯಸುವ ಗ್ರಾಹಕರಿಗೆ ಈ ಫೋನ್ ಆಕರ್ಷಕ ಎನಿಸಲಿದೆ. ಪ್ರೊಸೆಸರ್ ವೇಗವು ಉತ್ತಮವಾಗಿದ್ದು, ಮಲ್ಟಿಟಾಸ್ಕ್ ಕೆಲಸಗಳು ಸರಾಗವಾಗಿ ನಡೆಯುತ್ತವೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದರು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಗಮನ ಸೆಳೆದಿದೆ. ಜೊತೆಗೆ ಪೋರ್ಟ್ರೇಟ್ ಬೊಕೆ, ಎಚ್‌ಡಿಆರ್, ಫೇಸ್‌ ಡಿಟೆಕ್ಷನ್‌, ಫಿಲ್ಟರ್, ಸೂಪರ್ ನೈಟ್ ಸ್ಕೇಪ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 65W ಸೂಪರ್ ಡಾರ್ಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 36 ನಿಮಿಷಗಳಲ್ಲಿ ಫೋನ್ ಅನ್ನು 0 ದಿಂದ 100% ಫುಲ್‌ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ, ಬ್ಲೂಟೂತ್‌, GPS/ A-GPS, NFC ಮತ್ತು USB ಟೈಪ್‌-ಸಿ ಪೋರ್ಟ್ ಬೆಂಬಲಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8GB + 128GB ಶೇಖರಣಾ ರೂಪಾಂತರಕ್ಕೆ 31,999ರೂ. ಬೆಲೆ ಹೊಂದಿದೆ. ಜೊತೆಗೆ 12GB + 256GB ಸ್ಟೋರೇಜ್ ಆಯ್ಕೆಯ ಬೆಲೆ 35,999ರೂ.ಬೆಲೆ ಹೊಂದಿದೆ. ಇನ್ನು ಈ ಫೋನ್‌ ನಿಯೋ ಬ್ಲಾಕ್, ನಿಯೋ ಬ್ಲೂ ಮತ್ತು ನಿಯೋ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Realme GT Neo 2 First Look: Ruff And Tuff Performance Phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+