Home
ಮೊಬೈಲ್

Realme: ಇನ್ಮುಂದೆ ಸ್ಮಾರ್ಟ್‌ಫೋನ್‌ ಟಚ್‌ ಮಾಡೋದೇ ಬೇಡ! ಈ ಫೋನ್‌ನಲ್ಲಿ ಏರ್ ಗೆಸ್ಚರ್ ಫೀಚರ್ಸ್‌

ಸ್ಮಾರ್ಟ್‌ಫೋನ್‌ಗಳು (Smartphones) ಒಂದು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಿವೆ. ಅದರಲ್ಲೂ ಇತ್ತೀಚೆಗೆ ಭಿನ್ನ ರೀತಿಯ ಹಾಗೂ ಶೈಲಿಯ ಸ್ಮಾರ್ಟ್‌ಫೋನ್‌ಗಳು ಅನಾವರಣ ಆಗುತ್ತಿವೆ. ಈ ಸಾಲಿನಲ್ಲಿ ನೀವು ಫೋಲ್ಡಬಲ್‌ ಫೋನ್‌ಗಳನ್ನು ಕಾಣಬಹುದು. ಆದರೆ, ಇದೀಗ ಇದೆಲ್ಲವನ್ನೂ ಮೀರಿದ ವಿಶೇಷ ಫೀಚರ್ಸ್‌ ಆಯ್ಕೆಯ ಫೋನ್‌ ಇನ್ನೇನು ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.

ಹೌದು, ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ನೀವು ಊಹಿಸಲೂ ಸಹ ಆದ ಫೀಚರ್ಸ್‌ ಅನ್ನು ಘೋಷಣೆ ಮಾಡುತ್ತಲೇ ಇರಲಾಗುತ್ತದೆ. ಯಾಕೆಂದರೆ ಹಲವಾರು ಸ್ಮಾರ್ಟ್‌ಫೋನ್‌ ಕಂಪೆನಿಗಳು ಅಸ್ಥಿತ್ವದಲ್ಲಿದ್ದು, ಇವುಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ ಒಂದಕ್ಕೊಂದು ಮೀರಿಸುವ ಫೀಚರ್ಸ್‌ ಅನ್ನು ಘೋಷಣೆ ಮಾಡುತ್ತಲೇ ಇರುತ್ತವೆ. ಅದರಂತೆ ಈಗ ರಿಯಲ್‌ಮಿ (Realme) ಒಂದು ಹೆಜ್ಜೆ ಮುಂದೆ ಇದ್ದು, ಏರ್ ಗೆಸ್ಚರ್ ಫೀಚರ್ಸ್‌ ಮೂಲಕ ಹೊಸ ಫೋನ್‌ ಅನ್ನು ಲಾಂಚ್‌ ಮಾಡಲಿದೆ ಎನ್ನಲಾಗಿದೆ. ಇದರಿಂದ ನೀವು ಫೋನ್‌ ಸ್ಕ್ರೀನ್‌ ಅನ್ನು ಟಚ್‌ ಮಾಡುವ ಪ್ರಮೇಯವೇ ಇರುವುದಿಲ್ಲ. ಹಾಗಿದ್ರೆ, ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.

ಸ್ಮಾರ್ಟ್‌ಫೋನ್‌ ಟಚ್‌ ಮಾಡೋದೇ ಬೇಡ! ಈ ಫೋನ್‌ನಲ್ಲಿ ಏರ್ ಗೆಸ್ಚರ್ ಫೀಚರ್ಸ್‌...

ಏರ್ ಗೆಸ್ಚರ್ ಫೀಚರ್ಸ್‌ನೊಂದಿಗೆ ರಿಯಲ್‌ಮಿ ನಾರ್ಜೋ 70 ಪ್ರೊ 5G: ರಿಯಲ್‌ಮಿಯ ಬಹು ನಿರೀಕ್ಷಿತ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್‌ (Realme Narzo 70 Pro 5G Smartphone) ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಲಾಂಚ್‌ ಆಗಲಿದೆ. ವಿಶೇಷ ಏನೆಂದರೆ ಈ ಫೋನ್‌ ಏರ್ ಗೆಸ್ಚರ್ ಫೀಚರ್ಸ್‌ (Air Gesture Features) ಮೂಲಕ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಮೂಲಕ ಬಳಕೆದಾರರ ಸಂವಹನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಿದೆ.

ಈ ನವೀನ ಫೀಚರ್ಸ್‌ ನಾರ್ಜೋ 70 ಪ್ರೊ 5G ಬಳಕೆದಾರರಿಗೆ ಯಾವುದೇ ಭೌತಿಕ ಸ್ಪರ್ಶದ ಅಗತ್ಯವಿಲ್ಲದೆ ವಿವಿಧ ಫೋನ್ ಕಾರ್ಯಗಳನ್ನು ಮನಬಂದಂತೆ ನ್ಯಾವಿಗೇಟ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಏರ್ ಗೆಸ್ಚರ್‌ಗಳ ಸಂಯೋಜನೆಯು ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಗೇಮ್‌ ಚೇಂಜರ್‌ ಆಗಿದ್ದು, ಕೈಗಳು ಮಣ್ಣಾದಾಗ ಅಥವಾ ಒದ್ದೆಯಾದಾಗ ಅದರಲ್ಲೂ ಊಟದ ಸಮಯದಲ್ಲಿ ಫೋನ್ ಅನ್ನು ಮುಟ್ಟದೆಯೇ ಅದರೊಂದಿಗೆ ಸಂವಹನ ನಡೆಸಬಹುದಾಗಿದೆ.

ಸ್ಮಾರ್ಟ್‌ಫೋನ್‌ ಟಚ್‌ ಮಾಡೋದೇ ಬೇಡ! ಈ ಫೋನ್‌ನಲ್ಲಿ ಏರ್ ಗೆಸ್ಚರ್ ಫೀಚರ್ಸ್‌...

ಇನ್ನು ರಿಯಲ್‌ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್‌ 10 ವಿಭಿನ್ನ ಗೆಸ್ಚರ್ ಪ್ರಕಾರಗಳನ್ನು ಬೆಂಬಲಿಸುತ್ತದೆ ಎಂದು ರಿಯಲ್‌ಮಿ ಮಾಹಿತಿ ನೀಡಿದೆ. ಇದರೊಂದಿಗೆ ಈ ಗೆಸ್ಚರ್ ಕಂಟ್ರೋಲ್‌ಗಳು ವಿಡಿಯೋ ಕೇಂದ್ರಿತ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಅನುಕೂಲ ಮಾಡಿಕೊಡಲಿವೆ. ಈ ಮೂಲಕ ಥರ್ಡ್‌ ಪಾರ್ಟಿ ಆಪ್‌ಗಳಿಗೂ ವಿಸ್ತರಿಸುತ್ತವೆ. ಇದರರ್ಥ ಬಳಕೆದಾರರು ವಿಡಿಯೋವನ್ನು ಲೈಕ್ ಮಾಡಲು ಥಂಬ್ಸ್ ಅಪ್‌ಗಳಂತಹ ಸನ್ನೆಗಳನ್ನು ಬಳಕೆ ಮಾಡಬಹುದು. ಮೆಚ್ಚಿನವುಗಳ ಪಟ್ಟಿಗೆ ಕಂಟೆಂಟ್‌ ಅನ್ನು ಸೇರಿಸಲು ಓಕೆ ಗೆಸ್ಚರ್ ಬಳಕೆ ಮಾಡಬಹುದು. ಈ ಮೂಲಕ ವಿಡಿಯೋ ಕಂಟೆಂಟ್‌ನೊಂದಿಗೆ ಸಲೀಸಾಗಿ ಸಂವಹನ ನಡೆಸಬಹುದಾಗಿದೆ.

ಇದು ಒಂದು ವಿಷಯವಾಗದರೆ ಮತ್ತೊಂದು ಕಡೆ ರಿಯಲ್‌ಮಿ ನಾರ್ಜೊ 70 ಪ್ರೊ 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ನೊಂದಿಗೆ ಅತ್ಯಾಧುನಿಕ 50 ಮೆಗಾಪಿಕ್ಸೆಲ್‌ ಸೋನಿ ಐಎಂಎಕ್ಸ್ 890 ಕ್ಯಾಮೆರಾವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಟೀಸರ್ ಪ್ರಕಾರ ಈ ಫೋನ್ ಪಂಚ್-ಹೋಲ್ ಡಿಸ್ಪ್ಲೇ, ಸಾಂಪ್ರದಾಯಿಕ 3.5mm ಹೆಡ್‌ಫೋನ್ ಜ್ಯಾಕ್ ಮತ್ತು ವಿಶೇಷವಾದ ವೃತ್ತಾಕಾರದ ಕ್ಯಾಮೆರಾ ಮಾಡ್ಯುಲ್‌ ಸೇರಿದಂತೆ ಅನೇಕ ಗಮನಾರ್ಹ ಫೀಚರ್ಸ್‌ಗಳ ಬಗ್ಗೆ ಈಗಾಗಲೇ ಸುಳಿವು ನೀಡಿವೆ.

ಸ್ಮಾರ್ಟ್‌ಫೋನ್‌ ಟಚ್‌ ಮಾಡೋದೇ ಬೇಡ! ಈ ಫೋನ್‌ನಲ್ಲಿ ಏರ್ ಗೆಸ್ಚರ್ ಫೀಚರ್ಸ್‌...

ಈ ಫೋನ್‌ ಅನ್ನುಹಿಂದಿನ ರಿಯಲ್‌ಮಿ ಮಾದರಿಗಳಿಗೆ ಹೋಲಿಕೆ ಮಾಡಿದರೆ ಮೊದಲೇ ಇನ್‌ಸ್ಟಾಲ್‌ ಮಾಡಲಾದ ಆಪ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ನಾರ್ಜೊ 70 ಪ್ರೊ 5G ಉತ್ತಮ ಅನುಭವವನ್ನು ನೀಡಲಿದೆ. ಅಂದರೆ ನಿಮಗೆ ಇಷ್ಟ ಇರುವ ಆಪ್‌ಗಳನ್ನು ಮಾತ್ರ ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ.

Best Mobiles in India

English summary
Realme Narzo 70 Pro 5G smartphone will be launched in India later this month. this phone will appear with Air Gesture Features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+