Home
ಮೊಬೈಲ್

Realme Narzo N61: ಅಗ್ಗದ ಫೋನ್ ಬಿಡುಗಡೆ.. 7 ಸಾವಿರಕ್ಕಿಂತ ಕಡಿಮೆ!

Realme NARZO N61 launched in india: ರಿಯಲ್‌ಮಿ (Realme) ತನ್ನ ಗ್ರಾಹಕರಿಗಾಗಿ Narzo ಸರಣಿಯಲ್ಲಿ ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಹೊಸ ಫೋನ್ ಅನ್ನು ಬಜೆಟ್ ವಿಭಾಗದಲ್ಲಿ ಪರಿಚಯಿಸಿದೆ. ನೀವು 7 ಅಥವಾ 8 ಸಾವಿರಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಹೊಸ ಫೋನ್ ಖರೀದಿಸಲು ಬಯಸಿದರೆ, ನೀವು ರಿಯಲ್‌ಮಿನ ಈ ಹೊಸ ಫೋನ್‌ ಉತ್ತಮ ಆಯ್ಕೆಯಾಗಲಿದೆ. ಈ ಫೋನನ್ನು ವಾಯೇಜ್ ಬ್ಲೂ ಮತ್ತು ಮಾರ್ಬಲ್ ಬ್ಲ್ಯಾಕ್‌ ಬಣ್ಣಗಳಲ್ಲಿ ಲಾಂಚ್ ಮಾಡಲಾಗಿದೆ. ಬನ್ನಿ ಈ ಫೋನಿನ ಫೀಚರ್ಸ್, ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯೋಣ.

ಹೌದು, ರಿಯಲ್‌ಮಿ ತನ್ನ ಭಾರತೀಯ ಗ್ರಾಹಕರಿಗಾಗಿ Realme Narzo N61 ಫೋನನ್ನು ಇಂದು ಬಿಡುಗಡೆ ಮಾಡಿದೆ. ನೀವು ಸಹ ಅಗ್ಗದ ಫೋನ್ ಖರೀದಿಸಲು ಯೋಜನೆ ರೂಪಿಸಿದ್ದರೆ, ರಿಯಲ್‌ಮಿನ Narzo ಸರಣಿಯ ಹೊಸ ಫೋನ್ ಬಗ್ಗೆ ತಿಳಿಯಲೇಬೇಕು. ಕಂಪನಿಯು ಫೋನ್ ಬಿಡುಗಡೆಯೊಂದಿಗೆ, ಮಾರಾಟದ ವಿವರಗಳು ಮತ್ತು ಬೆಲೆಯನ್ನು ಸಹ ಬಹಿರಂಗಪಡಿಸಲಾಗಿದೆ. ಕಂಪನಿಯ ಹೊಸ ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ. 7 ಸಾವಿರಕ್ಕಿಂತ ಕಡಿಮೆ ಆರಂಭಿಕ ಬೆಲೆಯಲ್ಲಿ ಈ ಫೋನ್ ಖರೀದಿಸಲು ಅವಕಾಶವಿದೆ.

Realme Narzo N61: ಅಗ್ಗದ ಫೋನ್ ಬಿಡುಗಡೆ.. 7 ಸಾವಿರಕ್ಕಿಂತ ಕಡಿಮೆ!

Realme Narzo N61 ಫೋನಿನ ಬೆಲೆ ಎಷ್ಟು?

ಕಂಪನಿಯು Realme Narzo N61 ಫೋನನ್ನು 7,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ನೀಡಿದೆ. ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಫೋನಿನ 4GB+64GB ಸ್ಟೋರೇಜ್‌ ರೂಪಾಂತರವನ್ನು 7,499 ರೂ.ಗೆ ಬಿಡುಗಡೆ ಮಾಡಲಾಗಿದೆ. 6GB+28GB ಸ್ಟೋರೇಜ್‌ ಮಾದರಿಯನ್ನು 8,499 ರೂ.ಗೆ ಬಿಡುಗಡೆ ಮಾಡಲಾಗಿದೆ.

ಫಸ್ಟ್ ಸೇಲ್ ಯಾವಾಗ? ಡಿಸ್ಕೌಂಟ್‌ ಏನಿದೆ?

Realme Narzo N61 ಫೋನಿನ ಮೊದಲ ಮಾರಾಟವನ್ನು ಆಗಸ್ಟ್ 6 ರಂದು ಮಧ್ಯಾಹ್ನ 12 ಗಂಟೆಗೆ ನಿಗದಿಪಡಿಸಲಾಗಿದೆ. Realmeನ ಅಧಿಕೃತ ವೆಬ್‌ಸೈಟ್ ಮತ್ತು Amazon ನಿಂದ ಫೋನ್ ಅನ್ನು ಖರೀದಿಸಬಹುದು. ಕಂಪನಿಯು ಈ ಫೋನಿನ ಖರೀದಿಯ ಮೇಲೆ ಲಾಂಚ್ ಆಫರ್‌ ಘೋಷಿಸಿದೆ. ಕೂಪನ್ ರಿಯಾಯಿತಿಯೊಂದಿಗೆ 500 ರೂ. ಕಡಿಮೆ ಬೆಲೆಗೆ ಖರೀದಿಸಲು ಅವಕಾಶವನ್ನು ನೀಡಲಾಗಿದೆ. ಡಿಸ್ಕೌಂಟ್‌ ಬಳಿಕ ಕೇವಲ 6,999 ರೂ.ಗಳ ಆರಂಭಿಕ ಬೆಲೆಯಲ್ಲಿ ಈ ಫೋನ್ ಖರೀದಿಸಬಹುದು.

ಈ ಸುದ್ದಿ ಓದಿದ್ದೀರಾ?: Poco: ಸದ್ದಿಲ್ಲದೇ ಜಬರ್ದಸ್ತ್‌ ಫೋನ್ ಲಾಂಚ್: SONY ಕ್ಯಾಮೆರಾ.. 90W ಚಾರ್ಜಿಂಗ್.. ಯಾವ ಮಾಡೆಲ್?

Realme Narzo N61 ಫೋನಿನ ಫೀಚರ್ಸ್‌

ಡಿಸ್‌ಪ್ಲೇ: ಈ ಹೊಸ ರಿಯಲ್‌ಮಿ ಫೋನ್ ಅನ್ನು 6.74 ಇಂಚಿನ ದೊಡ್ಡ ಡಿಸ್‌ಪ್ಲೇನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 90hz ರಿಫ್ರೆಶ್ ರೇಟ್ ಬೆಂಬಲ ಮತ್ತು 560nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಮಿನಿ ಕ್ಯಾಪ್ಸುಲ್ 2.0 ವೈಶಿಷ್ಟ್ಯದೊಂದಿಗೆ ಫೋನ್ ಅನ್ನು ಪರಿಚಯಿಸಲಾಗಿದೆ.

ಪ್ರೊಸೆಸರ್: ಕಂಪನಿಯು ಆಕ್ಟಾ ಕೋರ್ ಚಿಪ್‌ಸೆಟ್‌ನೊಂದಿಗೆ Realme Narzo N61 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಸ್ಟೋರೇಜ್: Realme Narzo N61 ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಫೋನ್ 4GB/6GB RAM ಆಯ್ಕೆಯನ್ನು ಮತ್ತು 64GB/128GB ಸ್ಟೋರೇಜ್‌ನೊಂದಿಗೆ ಬರುತ್ತದೆ. ಫೋನ್ 6GB ವರ್ಚುವಲ್ RAM ನೊಂದಿಗೆ ಬರುತ್ತದೆ.

ಕ್ಯಾಮೆರಾ: Realme Narzo N61 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 32MP ಸೂಪರ್ ಕ್ಲಿಯರ್ ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಲೆನ್ಸ್ ಲಭ್ಯವಿದೆ.

ಬ್ಯಾಟರಿ: ಕಂಪನಿಯು ಈ ಹೊಸ ಫೋನ್ ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಫೋನ್ 30 ಗಂಟೆಗಳ ಧ್ವನಿ ಕರೆಗಳನ್ನು ಮತ್ತು 1013 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

Best Mobiles in India

English summary
realme NARZO N61 launched at Rs 7,499 in india. Sale Slated for August 2 on Flipkart : specs, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+