Home
ಮೊಬೈಲ್

ಧೂಳೆಬ್ಬಿಸಿದ Realme..! ಈ ಫೋನ್ ಹೊಸ ಸ್ಟೋರೇಜ್‌ನಲ್ಲಿ ಎಂಟ್ರಿ: 2,000 ಡಿಸ್ಕೌಂಟ್

ರಿಯಲ್‌ಮಿ ಮೊಬೈಲ್‌ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇನ್ಮುಂದೆ ರಿಯಲ್‌ಮಿಯ ಈ ಫೋನ್‌ ಮೂರು ಸ್ಟೋರೇಜ್‌ನಲ್ಲಿ ಲಭ್ಯ. ಹೌದು, Realme P1 Pro 5G ಸ್ಮಾರ್ಟ್‌ಫೋನ್‌ ಈಗಾಗಲೇ ಮೊಬೈಲ್‌ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಇದರ ಹೊಸ ಸ್ಟೋರೇಜ್‌ ಆವೃತ್ತಿಯು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ತನ್ನ ಹೊಸ 12GB + 256GB ಸ್ಟೋರೇಜ್‌ ಆಯ್ಕೆಯನ್ನು ಪರಿಚಯಿಸಿದೆ. ಇದು Qualcomm Snapdragon 6 Gen 1 SoC, 120Hz ಡಿಸ್‌ಪ್ಲೇಯನ್ನು ಹೊಂದಿದೆ. ಈ ಹೊಸ ವೇರಿಯಂಟ್‌ನಲ್ಲಿ ಹೊಸತೇನಿದೆ? ಯಾವ ಬಣ್ಣಗಳಲ್ಲಿ ಖರೀದಿಸಬಹುದು? ಅನ್ನೊದನ್ನ ತಿಳಿಯೋಣ ಬನ್ನಿ.

ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ರಿಯಲ್‌ಮಿ ಸಜ್ಜಾಗಿದೆ. ಜೊತೆಗೆ, ರಿಯಲ್‌ಮಿ ಫೋನ್‌ ಎದುರು ನೋಡುತ್ತಿರುವ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ರಿಯಲ್‌ಮಿ P1 Pro 5G ಮೊಬೈಲ್‌ನ ಹೊಸ 12GB RAM + 256GB ಸ್ಟೋರೇಜ್‌ ಆಯ್ಕೆಯು ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 45W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನುಳಿದಂತೆ ಈ ಫೋನ್‌ನ ಬೆಲೆ, ಫೀಚರ್ಸ್‌ ಬಗ್ಗೆ ತಿಳಿಯಲು ಮುಂದೆ ಓದಿ.

ಧೂಳೆಬ್ಬಿಸಿದ Realme.. ಈ ಫೋನ್ ಹೊಸ ಸ್ಟೋರೇಜ್‌ನಲ್ಲಿ ಎಂಟ್ರಿ: 2,000 ಡಿಸ್ಕೌಂಟ್

ಪ್ರಮುಖ ಅಂಶಗಳು

  • Realme P1 Pro 5G ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಫೀನಿಕ್ಸ್ ವಿನ್ಯಾಸವನ್ನು ಹೊಂದಿದೆ.
  • ಇದು Qualcomm Snapdragon 6 Gen 1 SoC ಮತ್ತು 120Hz ಡಿಸ್ಪ್ಲೇ ಪಡೆದಿದೆ.
  • 45W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ.
  • ರಿಯಲ್‌ಮಿ P1 Pro ಮೂರು ಸ್ಟೋರೇಜ್‌ಗಳಲ್ಲಿ ಬರುತ್ತದೆ - 8GB + 128GB, 8GB + 256GB ಮತ್ತು 12GB + 256GB.

Realme P1 Pro 5Gನ ವಿಶೇಷತೆಗಳು

ಭಾರತದಲ್ಲಿ ರಿಯಲ್‌ಮಿ P1 Pro ಫೋನ್ ಅನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಫೋನ್ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಫೀನಿಕ್ಸ್ ವಿನ್ಯಾಸವನ್ನು ಹೊಂದಿದೆ. ಇದು IP65 ರೇಟಿಂಗ್ ಅನ್ನು ಪಡೆದಿದೆ. ಜೊತೆಗೆ, ಮಳೆನೀರಿನ ಸ್ಮಾರ್ಟ್ ಟಚ್ ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ಏರ್ ಗೆಸ್ಚರ್‌ಗಳನ್ನು ಸಹ ಬೆಂಬಲಿಸುತ್ತದೆ. ಈ ಮೊಬೈಲ್‌ 120Hz ರಿಫ್ರೆಶ್ ದರದೊಂದಿಗೆ ಬಾಗಿದ AMOLED ಡಿಸ್ಪ್ಲೇಯನ್ನು ಒಳಗೊಂಡಿದೆ.

ಮಸ್ತ್ ಆಗಿದೆ ಕ್ಯಾಮೆರಾ ಸೆಟಪ್

ರಿಯಲ್‌ಮಿ ಪಿ1 ಪ್ರೊ ಮೊಬೈಲ್‌ನ ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಫೋಟೋಗಳಿಗಾಗಿ 50MP Sony LYT600 ಸೆನ್ಸಾರ್ ಜೊತೆಗೆ 50MP ಮುಖ್ಯ ಕ್ಯಾಮೆರಾ ಹೊಂದಿದೆ. 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಸೇರಿದಂತೆ ಅದ್ಭುತ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನ್ 184 ಗ್ರಾಂ ತೂಕ ಹೊಂದಿದೆ. ಈ ಫೋನ್‌ನ ಸಂಪೂರ್ಣ ಫೀಚರ್ಸ್‌ಗಳನ್ನು ಕೆಳಗೆ ತಿಳಿಸಲಾಗಿದೆ. ತಪ್ಪದೇ ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.

Realme P1 Pro ಫೋನ್‌ನ ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ P1 Pro 5G ಮೊಬೈಲ್‌ನ ಹೊಸ 12GB + 256GB ಸ್ಟೋರೇಜ್‌ ವೇರಿಯಂಟ್‌ ಇಂದಿನಿಂದ (ಜೂನ್ 26ರ ಮಧ್ಯರಾತ್ರಿಯಿಂದ) ಆರಂಭವಾಗಲಿದೆ. ಇದರ ಬೆಲೆ 22,999 ರೂ. ಇದೆ. ಇದರಲ್ಲಿ 2,000 ರೂ. ಬ್ಯಾಂಕ್ ರಿಯಾಯಿತಿ ಪಡೆಯಬಹುದು. ಅಂದರೆ, ಈ ಫೋನ್‌ ಅನ್ನು 20,999 ರೂ.ಗೆ ನೀವು ಖರೀದಿಸಬಹುದು. ನೀವು 6 ತಿಂಗಳ No Cost EMI ಯೋಜನೆಯನ್ನು ಆಯ್ಕೆ ಮಾಡಬಹುದು. realme.com ಮತ್ತು Flipkartನಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಈ ಸುದ್ದಿ ಓದಿದ್ದೀರಾ?: Moto ಪ್ರಿಯರಿಗೆ ಸರ್ಪ್ರೈಸ್.. ಸದ್ದಿಲ್ಲದೆ 2 ದುಬಾರಿ ಫೋನ್ ಲಾಂಚ್: ಎದುರಾಳಿಗಳಿಗೆ ಶುರುವಾಯ್ತು ನಡುಕ!

ಕಣ್ಣು ಕುಕ್ಕುವ ಕಲರ್‌ನಲ್ಲಿ ಲಾಂಚ್

ಇನ್ನೂ ರಿಯಲ್‌ಮಿ P1 Pro 5Gನ ಇತರ ರೂಪಾಂತರಗಳ ಬೆಲೆಯನ್ನು ನೋಡುವುದಾದರೆ, 8GB + 128GB ಸ್ಟೋರೇಜ್‌ ಮಾದರಿಯ ಬೆಲೆ 21,999 ರೂ. ಇದೆ. ಹಾಗೆಯೇ, 8GB + 256GB ಸ್ಟೋರೇಜ್‌ ರೂಪಾಂತರದ ಬೆಲೆ 22,999 ರೂ. ಮತ್ತು ಹೊಸ 12GB + 256GB ವೇರಿಯಂಟ್‌ ಬೆಲೆ 22,999 ರೂ. ಇದೆ. ಫೀನಿಕ್ಸ್ ರೆಡ್ ಮತ್ತು ಪ್ಯಾರಟ್ ಬ್ಲೂ ಬಣ್ಣಗಳಲ್ಲಿ ನೀವು ಈ ಫೋನ್‌ ಅನ್ನು ಖರೀದಿಸಬಹುದು.

Realme P1 Pro 5Gನ ಸಂಪೂರ್ಣ ಫೀಚರ್ಸ್‌

  • ಅಳತೆ: 161.47 × 74.02 × 8.35mm
  • ತೂಕ: 184 ಗ್ರಾಂ
  • ಡಿಸ್‌ಪ್ಲೇ: 6.7-ಇಂಚಿನ ಬಾಗಿದ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, ಪೂರ್ಣ HD+ (2412×1080 ಪಿಕ್ಸೆಲ್‌ಗಳು) ರೆಸಲ್ಯೂಶನ್, 800nits HBM ಬ್ರೈಟ್‌ನೆಸ್, 950nits ಸ್ಥಳೀಯ ಗರಿಷ್ಠ ಬ್ರೈಟ್‌ನೆಸ್
  • ಪ್ರೊಸೆಸರ್: Qualcomm Snapdragon 6 Gen 1 SoC, Adreno 710 GPU
  • ಸ್ಟೋರೇಜ್: 128GB / 256GB UFS 3.1 ಸ್ಟೋರೇಜ್
  • ಮೆಮೊರಿ: 8GB/12GB RAM ಮತ್ತು 8GB ಡೈನಾಮಿಕ್ RAM
  • ಸಾಫ್ಟ್‌ವೇರ್: Realme UI 5.0, Android 14. ಎರಡು Android OS ಅಪ್‌ಗ್ರೇಡ್‌ಗಳನ್ನು ಒಳಗೊಂಡಂತೆ ಮೂರು ವರ್ಷಗಳ ಸಾಫ್ಟ್‌ವೇರ್ ಸಪೋರ್ಟ್.
  • ಕ್ಯಾಮೆರಾ: 50MP Sony LYT600 ಸೆನ್ಸಾರ್ ಜೊತೆಗೆ 26mm ಸಮಾನ ಫೋಕಲ್ ಲೆಂತ್, f/1.8 ಅಪರ್ಚರ್, ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಜೊತೆಗೆ 112° ಫೀಲ್ಡ್ ಆಫ್ ವ್ಯೂ ಮತ್ತು f/2.2 ಅಪರ್ಚರ್, ಮತ್ತು LED ಫ್ಲ್ಯಾಷ್
  • ಫ್ರಂಟ್ ಕ್ಯಾಮರಾ: 16MP ಸೆಲ್ಫಿ ಕ್ಯಾಮರಾ ಜೊತೆಗೆ 83° ಫೀಲ್ಡ್ ಆಫ್ ವ್ಯೂ ಮತ್ತು f/2.4 ಅಪರ್ಚರ್
  • ಬ್ಯಾಟರಿ: 5,000mAh
  • ಚಾರ್ಜಿಂಗ್: 45W SuperVOOC ವೇಗದ ಚಾರ್ಜಿಂಗ್, USB ಟೈಪ್-C ಪೋರ್ಟ್
  • ಪ್ರೊಟೆಕ್ಷನ್: ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ, ಫೇಸ್ ಅನ್ಲಾಕ್
  • ಆಡಿಯೋ: ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಮತ್ತು ಹೈ-ರೆಸ್ ಆಡಿಯೊ
  • ಕನೆಕ್ಟಿವಿಟಿ ಆಯ್ಕೆಗಳು: ಡ್ಯುಯಲ್ ಸಿಮ್, 5G, WiFi 6 802.11 a/b/g/n/ac/ax, Bluetooth 5.2, GPS, ಗೆಲಿಲಿಯೋ, GLONASS, BeiDou, ಮತ್ತು USB 2.0
  • ಇತರೆ ಫೀಚರ್ಸ್‌: 3D VC ಕೂಲಿಂಗ್ ಸಿಸ್ಟಮ್, ರೈನ್‌ವಾಟರ್ ಸ್ಮಾರ್ಟ್ ಟಚ್, IP65 ಧೂಳು ಮತ್ತು ನೀರು ನಿರೋಧಕ, ಏರ್ ಗೆಸ್ಚರ್‌ಗಳು, ಫ್ಲ್ಯಾಶ್ ಕ್ಯಾಪ್ಸುಲ್
Best Mobiles in India

English summary
Realme has launched the Realme P1 Pro 5G in an all-new 12GB memory configuration in India: Price, Availability
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+