Home
ಮೊಬೈಲ್

Moto ಪ್ರಿಯರಿಗೆ ಸರ್ಪ್ರೈಸ್.. ಸದ್ದಿಲ್ಲದೆ 2 ದುಬಾರಿ ಫೋನ್ ಲಾಂಚ್: ಎದುರಾಳಿಗಳಿಗೆ ಶುರುವಾಯ್ತು ನಡುಕ!

ಮೊಟೊರೊಲಾ ಮ್ಯಾಜಿಕ್ ಶುರು..! ಮೊಬೈಲ್ ಪ್ರಿಯರಿಗೆ ಒಂದೇ ದಿನ ಎರಡು ಸಿಹಿ ಸುದ್ದಿ. ಸದ್ದಿಲ್ಲದೆ 2 ದುಬಾರಿ ಫೋನ್ ಲಾಂಚ್. ಹೌದು, ಅಂತೂ ಇಂತೂ ಮೊಟೊರೊಲಾ ಮಾರುಕಟ್ಟೆಯಲ್ಲಿ ದೊಡ್ಡ ಸೌಂಡ್ ಮಾಡಲು ಎಂಟ್ರಿ ಕೊಟ್ಟಿದೆ. ಮೊಟೊರೊಲಾ ಕಂಪನಿಯು ಇಂದು Motorola Razr 50 ಸರಣಿಯ ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. Motorola Razr 50 Ultra ಮತ್ತು Motorola Razr 50 ಫೋನ್‌ಗಳು ಚೀನಾ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವು ಮುಂಬರುವ Samsung Galaxy Z Flip 6 ವಿರುದ್ಧ ಪೈಪೋಟಿ ನಡೆಸಲಿದೆ. Moto Razr 50 Ultra ಮುಂದಿನ ತಿಂಗಳು ಭಾರತದಲ್ಲಿ ಲಾಂಚ್‌ ಆಗಲಿದೆ.

ಮೊಟೊರೊಲಾ ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಿದೆ. ವಿಭಿನ್ನ ಹಾಗೂ ವಿಶೇಷ ಫಿಚರ್ಸ್‌ಗಳ ಹೊಸ ಫೋನ್‌ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದೀಗ, Motorola Razr 50 ಸರಣಿಯ ನೂತನ Razr 50, Razr 50 Ultra ಫೋನ್‌ಗಳ ಮೂಲಕ ಹೊಸ ಅಧ್ಯಾಯ ಪ್ರಾರಂಭಿಸಿದೆ. Moto Razr 50 Ultra ಫೋನ್ Snapdragon 8s Gen 3 SoC ಪ್ರೊಸೆಸರ್, 6.9 ಇಂಚಿನ ದೊಡ್ಡ ಕವರ್‌ ಡಿಸ್ಲ್ಪೇ ಹೊಂದಿದೆ. ಈ ಫೋನ್‌ಗಳ ಬೆಲೆ ಎಷ್ಟು? ವಿಶೇಷತೆಗಳೇನು? ತಿಳಿಯೋಣ ಬನ್ನಿ.

Moto ಪ್ರಿಯರಿಗೆ ಸರ್ಪ್ರೈಸ್.. ಸದ್ದಿಲ್ಲದೆ 2 ದುಬಾರಿ ಫೋನ್ ಲಾಂಚ್: ಬೆಲೆ ಎಷ್ಟು?

Moto Razr 50 ಸರಣಿಯ ಬೆಲೆ, ಬಣ್ಣಗಳು

Moto Razr 50 Ultra ಫೋನ್‌ 12GB/256GB ಸ್ಟೋರೇಜ್‌ ವೇರಿಯಂಟ್‌ ಬೆಲೆ ಚೀನಾದಲ್ಲಿ ಸುಮಾರು 65,500 ರೂ. (CNY 5,699) ಇದೆ. 12GB/512GB ಸ್ಟೋರೇಜ್ ಮಾದರಿಯ ಬೆಲೆ ಅಂದಾಜು 72,250 ರೂ.ನಿಂದ (CNY 6,199) ಪ್ರಾರಂಭವಾಗುತ್ತದೆ. Moto Razr 50 Ultra ಫೋನ್ ಡಿಲ್, ನೇವಿ ಬ್ಲೇಜರ್ ಮತ್ತು ಪೀಚ್ ಫಜ್ ಸೇರಿದಂತೆ ಮೂರು ಪ್ಯಾಂಟೋನ್ ಮೌಲ್ಯೀಕರಿಸಿದ ಬಣ್ಣಗಳಲ್ಲಿ ಲಭ್ಯವಿದೆ.

ಚೀನಾದಲ್ಲಿ Moto Razr 50 ಬೆಲೆಯು ಮೂಲ 8GB/256GB ಸ್ಟೋರೇಜ್‌ ಮಾದರಿಗೆ ಸುಮಾರು 42,500 ರೂ. (CNY 3,699) ಇದೆ. 12GB/512GB ಸ್ಟೋರೇಜ್‌ ವೇರಿಯಂಟ್‌ ಬೆಲೆ ಸುಮಾರು 45,950 ರೂ. ನಿಂದ (CNY 3,999) ಆರಂಭವಾಗುತ್ತದೆ. Moto Razr 50 ಫೋನ್ ಸ್ಟೀಲ್ ವೂಲ್, ಪ್ಯೂಮಿಸ್ ಸ್ಟೋನ್ ಮತ್ತು ಅರಬೆಸ್ಕ್ ಸೇರಿದಂತೆ ಮೂರು ಪ್ಯಾಂಟೋನ್ ಮೌಲ್ಯೀಕರಿಸಿದ ಬಣ್ಣಗಳಲ್ಲಿ ಲಭ್ಯವಿರಲಿದೆ. ಮೊಬೈಲ್‌ ಪ್ರಿಯರು ಈ ಫೋನ್‌ಗಳಿಗೆ ಫಿದಾ ಆಗಿದ್ದಾರೆ.

Moto ಪ್ರಿಯರಿಗೆ ಸರ್ಪ್ರೈಸ್.. ಸದ್ದಿಲ್ಲದೆ 2 ದುಬಾರಿ ಫೋನ್ ಲಾಂಚ್: ಬೆಲೆ ಎಷ್ಟು?

Moto Razr 50 Ultra ಸಂಪೂರ್ಣ ವಿಶೇಷತೆಗಳು

  • ಡಿಸ್ಲ್ಪೇ: ಇಂಟರ್ನಲ್- 6.9 ಇಂಚಿನ (2640×1080 ಪಿಕ್ಸೆಲ್‌ಗಳು) FlexView FHD+ ಪೋಲ್ಡ್ LTPO ಡಿಸ್ಲ್ಪೇ, 1-165Hz ರಿಫ್ರೆಶ್ ರೇಟ್, 10-ಬಿಟ್ HDR 10+, 100% DCI-P3 color gamut, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌, Dolby Vision ಬ್ರೈಟ್‌ನೆಸ್‌.
  • ಎಕ್ಸ್‌ಟ್ರನಲ್: 4″ (1272×1080 ಪಿಕ್ಸೆಲ್‌ಗಳು) ಕ್ವಿಕ್‌ವ್ಯೂ ಪೋಲ್ಡ್ LTPO ಡಿಸ್‌ಪ್ಲೇ, 1-165Hz ರಿಫ್ರೆಶ್ ದರ, 100% DCI-P3 color gamut, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್
  • ಪ್ರೊಸೆಸರ್: ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s Gen 3 4nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 735 GPU
  • ಸ್ಟೋರೇಜ್: 12GB LPDDR5X RAM ಜೊತೆಗೆ 256GB / 512GB UFS 4.0 ಸ್ಟೋರೇಜ್
  • OS: ಆಂಡ್ರಾಯ್ಡ್ 14
  • ಸಿಮ್: ಡ್ಯುಯಲ್ ಸಿಮ್ (eSIM + ನ್ಯಾನೋ)
  • ಕ್ಯಾಮೆರಾ: 50MP (1/1.95″ ಸಂವೇದಕದೊಂದಿಗೆ) ಮುಖ್ಯ ಕ್ಯಾಮೆರಾ, f/1.79 ದ್ಯುತಿರಂಧ್ರ, OIS, 1/1.95″ ಸಂವೇದಕದೊಂದಿಗೆ 50MP 2x ಟೆಲಿಫೋಟೋ ಕ್ಯಾಮೆರಾ, f/2.0 ಅಪರ್ಚರ್
  • ಫ್ರಂಟ್ ಕ್ಯಾಮೆರಾ: f/2.4 ದ್ಯುತಿರಂಧ್ರದೊಂದಿಗೆ 32MP ಫ್ರಂಟ್ ಕ್ಯಾಮರಾ
  • ಯುಎಸ್‌ಬಿ ಟೈಪ್-ಸಿ ಆಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್
  • ಅಳತೆ: 171.42 (open) × 73.99×7.09mm (open), ತೂಕ: 189g
  • ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್
  • ಪ್ರೊಟೆಕ್ಷನ್: ಜಲನಿರೋಧಕ (IPX8)
  • ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 6E 802.11ax (2.4GHz/5GHz) MIMO, ಬ್ಲೂಟೂತ್ 5.3, GPS, USB ಟೈಪ್-C, NFC
  • ಬ್ಯಾಟರಿ: 4000mAh ಬ್ಯಾಟರಿ, 44W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್

Motorola Razr 50 ವಿಶೇಷತೆಗಳು

ವೆನಿಲ್ಲಾ Motorola Razr 50 ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಪ್ರಬಲ ಗ್ರಾಫಿಕ್ಸ್ ಕಾರ್ಯಕ್ಷಮತೆಗಾಗಿ Mali-G615 GPU ಮತ್ತು MediaTek ನ ಹೈಪರ್‌ಎಂಜಿನ್‌ನೊಂದಿಗೆ ಜೋಡಿಸಲಾಗಿದೆ. ಫ್ಲಿಪ್ ಸ್ಮಾರ್ಟ್‌ಫೋನ್ 30W ವೈರ್ಡ್ ಮತ್ತು 15W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Moto ಪ್ರಿಯರಿಗೆ ಸರ್ಪ್ರೈಸ್.. ಸದ್ದಿಲ್ಲದೆ 2 ದುಬಾರಿ ಫೋನ್ ಲಾಂಚ್: ಬೆಲೆ ಎಷ್ಟು?

Motorola Razr 50 ಸಂಪೂರ್ಣ ಫೀಚರ್ಸ್‌ಗಳು

  • ಡಿಸ್ಲ್ಪೇ: ಇಂಟರ್ನಲ್- 6.9 ಇಂಚಿನ (2640×1080 ಪಿಕ್ಸೆಲ್‌ಗಳು) FlexView FHD+ ಪೋಲೆಡ್ ಡಿಸ್ಲ್ಪೇ, 10-120Hz ರಿಫ್ರೆಶ್ ರೇಟ್, 10-ಬಿಟ್ HDR 10+, 120% DCI-P3 color gamut, 2600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, Dolby Vision
  • ಎಕ್ಸ್‌ಟ್ರನಲ್: 3.6″ (1066 x 1056 ಪಿಕ್ಸೆಲ್‌ಗಳು) ಕ್ವಿಕ್‌ವ್ಯೂ ಪೋಲೆಡ್ ಡಿಸ್‌ಪ್ಲೇ, 90Hz ರಿಫ್ರೆಶ್ ದರ, 100% DCI-P3 color gamut, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್
  • ಪ್ರೊಸೆಸರ್: ಆಕ್ಟಾ ಕೋರ್ (2 x 2.5GHz ಕಾರ್ಟೆಕ್ಸ್-A78 + 6 x 2GHz ಕಾರ್ಟೆಕ್ಸ್-A55 CPUಗಳು) ಮೀಡಿಯಾ ಟೆಕ್ ಡೈಮೆನ್ಸಿಟಿ 7300X 4nm ಪ್ರೊಸೆಸರ್ ಜೊತೆಗೆ ಮಾಲಿ-G615 MC2 GPU
  • ಸ್ಟೋರೇಜ್: 8GB / 12GB LPDDR4X RAM ಜೊತೆಗೆ 256GB / 512GB UFS 2.2 ಸ್ಟೋರೇಜ್
  • OS: ಆಂಡ್ರಾಯ್ಡ್ 14
  • ಸಿಮ್: ಡ್ಯುಯಲ್ ಸಿಮ್ (eSIM + ನ್ಯಾನೋ)
  • ಕ್ಯಾಮೆರಾ: 50MP ಮುಖ್ಯ ಕ್ಯಾಮೆರಾ, OIS, 13MP ಅಲ್ಟ್ರಾ-ವೈಡ್ ಕ್ಯಾಮೆರಾ
  • ಫ್ರಂಟ್ ಕ್ಯಾಮೆರಾ: f/2.4 ದ್ಯುತಿರಂಧ್ರದೊಂದಿಗೆ 32MP ಫ್ರಂಟ್ ಕ್ಯಾಮೆರಾ
  • ಯುಎಸ್‌ಬಿ ಟೈಪ್-ಸಿ ಆಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್
  • ಅಳತೆ: 171.3 (open) × 73.99×7.25mm (open), ತೂಕ: 188.4g
  • ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್
  • ಪ್ರೊಟೆಕ್ಷನ್: ನೀರು ನಿರೋಧಕ (IPX8)
  • ಕನೆಕ್ಟಿವಿಟಿ ಆಯ್ಕೆಗಳು: 5G SA/ NSA, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.4, ಬೀಡೌ, GPS, ಗ್ಲೋನಾಸ್, ಗೆಲಿಲಿಯೋ, QZSS, USB ಟೈಪ್-ಸಿ
  • ಬ್ಯಾಟರಿ: 4200mAh ಬ್ಯಾಟರಿ, 33W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್
Best Mobiles in India

English summary
moto razr 50 ultra razr 50 flip smartphones launched china. the company’s latest foldable smartphones starting from China after teasers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+