Home
ಮೊಬೈಲ್

Realme: ಅ.15ಕ್ಕೆ ಹೊಸ ಫೋನ್ ಲಾಂಚ್; ಬೆಲೆ ಬಹಿರಂಗ.. ಟಾಪ್ 5 ಫೀಚರ್ಸ್ ಲೀಕ್!

ರಿಯಲ್‌ಮಿ (Realme) ಕಂಪನಿಯು ವರ್ಷದ ಆರಂಭದಲ್ಲಿ ತನ್ನ 'P1' ಸರಣಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ Realme P1 ಮತ್ತು Realme P1 Pro ಫೋನ್‌ ಮಶರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಇದೀಗ, ಕಂಪನಿಯು ಈ ಸರಣಿಯಲ್ಲಿ ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅದುವೇ, ರಿಯಲ್‌ಮಿ P1 ಸ್ಪೀಡ್ 5G (Realme P1 Speed 5G) ಸ್ಮಾರ್ಟ್‌ಫೋನ್. ಇತ್ತೀಚೆಗೆ, ಕಂಪನಿಯು ಈ ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮಧ್ಯೆಯೇ, ಮುಂಬರುವ ಮೊಬೈಲ್‌ನ ಪ್ರಮುಖ ವೈಶಿಷ್ಟ್ಯಗಳು ಸೋರಿಕೆಯಾಗಿವೆ.

ಹೌದು, ರಿಯಲ್‌ಮಿ P1 ಸ್ಪೀಡ್ 5G ಅನ್ನು ಇದೇ ಅಕ್ಟೋಬರ್ 15 ರಂದು ಬಿಡುಗಡೆ ಮಾಡಲಾಗುವುದು. ಅಂದು ಮಧ್ಯಾಹ್ನ 12 ಗಂಟೆಗೆ ಲಾಂಚ್ ಈವೆಂಟ್ ನಡೆಯಲಿದೆ. ಈ ಫೋನ್ Realme P1 ಮತ್ತು Realme P1 Pro ಮೊಬೈಲ್‌ನ ವಿನ್ಯಾಸವನ್ನು ಹೋಲುತ್ತದೆ. ಇದು ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಹಿಂಭಾಗದಲ್ಲಿ ಫ್ಲಾಟ್ ಕಾರ್ನರ್‌ಗಳನ್ನು ಹೊಂದಿದೆ. ಈ ಫೋನ್ ಮುಂಭಾಗದಲ್ಲಿ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ, ಟೀಸರ್‌ನಲ್ಲಿ ವಿನ್ಯಾಸದ ಜೊತೆಗೆ ಫೋನನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದೆ.

Realme: ಅ.15ಕ್ಕೆ ಹೊಸ ಫೋನ್ ರಿಲೀಸ್; ಬೆಲೆ ಬಹಿರಂಗ.. ಟಾಪ್ 5 ಫೀಚರ್ಸ್ ಲೀಕ್!

ರಿಯಲ್‌ಮಿ P1 ಸ್ಪೀಡ್ 5G ನಿರೀಕ್ಷಿತ ಬೆಲೆ

ಕಂಪನಿಯು ರಿಯಲ್‌ಮಿ P1 ಸ್ಪೀಡ್ 5G ಅನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ. ಈವರೆಗೆ, ಬೆಲೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ವರದಿಯ ಪ್ರಕಾರ, ರಿಯಲ್‌ಮಿ P1 ಸ್ಪೀಡ್ 5G ಫೋನಿನ ಬೆಲೆ 20,000 ರೂ. ಗಿಂತ ಕಡಿಮೆ ಇರುತ್ತದೆ. ಆಫರ್‌ಗಳೊಂದಿಗೆ ಇನ್ನೂ ಕಡಿಮೆ ಬೆಲೆಗೆ ಫೋನ್ ಖರೀದಿಗೆ ಲಭ್ಯವಿರಲಿದೆ.

ರಿಯಲ್‌ಮಿ P1 ಸ್ಪೀಡ್ 5G ಫೋನಿನ ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಕಂಪನಿಯು ರಿಯಲ್‌ಮಿ P1 ಸ್ಪೀಡ್ 5G ಫೋನನ್ನು 120Hz ರಿಫ್ರೆಶ್ ದರದೊಂದಿಗೆ OLED ಡಿಸ್ಪ್ಲೇಯೊಂದಿಗೆ ಪರಿಚಯಿಸಲಿದೆ. ಇದು ಶೇ.92.65 ರಷ್ಟು ದೇಹದ (ಬಾಡಿ) ಅನುಪಾತ ಪಡೆಯುತ್ತದೆ. ಈ ಫೋನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಐ ಪ್ರೊಟೆಕ್ಷನ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

ಪ್ರೊಸೆಸರ್ ಸಾಮರ್ಥ್ಯ

ಮಾಹಿತಿಯ ಪ್ರಕಾರ, ರಿಯಲ್‌ಮಿ P1 ಸ್ಪೀಡ್ 5G ಫೋನ್‌ ಮಿಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5G ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಈ ಪ್ರೊಸೆಸರ್‌ 750K ಗಿಂತ ಹೆಚ್ಚಿನ AnTuTu ಸ್ಕೋರ್ ಅನ್ನು ಪಡೆದಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಕಂಪನಿಯ ಇತ್ತೀಚಿನ UI ನೊಂದಿಗೆ ಬರುವ ನಿರೀಕ್ಷೆಯಿದೆ.

ಸ್ಟೋರೇಜ್ ಆಯ್ಕೆ

ಕಂಪನಿಯ ಮೈಕ್ರೋಸೈಟ್‌ನಲ್ಲಿ, ಈ ಫೋನನ್ನು 26GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಹಂಚಿಕೊಳ್ಳಲಾಗಿದೆ. ಇದರೊಂದಿಗೆ, 8GB RAM ಮತ್ತು 12GB RAM ಸ್ಟೋರೇಜ್ ಆಯ್ಕೆಯಲ್ಲಿ ಬರುವ ನಿರೀಕ್ಷೆಯಿದೆ. ಈ ಫೋನಿನಲ್ಲಿ 14 GB ವರೆಗಿನ ವರ್ಚುವಲ್ ತಂತ್ರಜ್ಞಾನವು ಲಭ್ಯವಿರುತ್ತದೆ. ಇದರ ಸಹಾಯದಿಂದ 26GB RAM ವರೆಗೆ ಬಳಸಬಹುದು.

ಈ ಸುದ್ದಿ ಓದಿದ್ದೀರಾ?: 108MP ಕ್ಯಾಮೆರಾ, 256GB ಸ್ಟೋರೇಜ್.. ಕಡಿಮೆ ಬೆಲೆಗೆ Realme 5G ಫೋನ್ ಸೇಲ್!

ಕ್ಯಾಮೆರಾ ಸೆಟಪ್

ರಿಯಲ್‌ಮಿ P1 ಸ್ಪೀಡ್ 5G ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಹೊಂದಿರುತ್ತದೆ ಎಂದು ಕಂಪನಿ ದೃಢಪಡಿಸಿದೆ. ಇದು ಎಲ್‌ಇಡಿ ಫ್ಲ್ಯಾಷ್ ಮತ್ತು ಎಐ ತಂತ್ರಜ್ಞಾನದೊಂದಿಗೆ ಬರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಈ ಮೊಬೈಲ್ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗುತ್ತದೆ. ಇದು, ಸುಧೀರ್ಘ ಬ್ಯಾಕಪ್ ಜೊತೆಗೆ ತ್ವರಿತ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ.

ಇತರೆ ವೈಶಿಷ್ಟ್ಯಗಳು

ಹೊಸ ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ TUV ಲ್ಯಾಗ್ ಉಚಿತ ಮೊಬೈಲ್ ಗೇಮಿಂಗ್ ಪ್ರಮಾಣೀಕರಣದೊಂದಿಗೆ ಬರುತ್ತದೆ. ನೀರು ಮತ್ತು ಧೂಳಿನ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಜೊತೆಗೆ, ವೈ ಫೈ 6, ಬ್ಲೂಟೂತ್ 5.4, 5G, 4G ಸಂಪರ್ಕ ಆಯ್ಕೆಗಳು ಇರಲಿದೆ.

Best Mobiles in India

English summary
Realme P1 Speed 5G specifications, design expected price revealed ahead of launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+