Home
ಮೊಬೈಲ್

Realme P2 Pro 5G ಬಿಡುಗಡೆ ದಿನಾಂಕ ಘೋಷಣೆ: ಬಜೆಟ್ ಬೆಲೆ.. ವಿಶೇಷತೆಗಳೇನು?

ರಿಯಲ್‌ಮಿ (Realme) ತನ್ನ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಅತೀ ಶೀಘ್ರದಲ್ಲೇ ಹೊಚ್ಚ ಹೊಸ 5G ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಹೌದು, ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಶೀಘ್ರದಲ್ಲೇ ತನ್ನ 'P' ಸರಣಿಯಲ್ಲಿ ಹೊಸ ಫೋನನ್ನು ಲಾಂಚ್ ಮಾಡಲಿದೆ. ಇದು ರಿಯಲ್‌ಮಿ P2 ಪ್ರೊ 5G (Realme P2 Pro 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಫೋನಿನ ಭಾರತದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

ಹೌದು, ರಿಯಲ್‌ಮಿ ಹೊಸ ಟೀಸರ್ ಮೂಲಕ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. Realme P2 ಪ್ರೊ 5G ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 13 ರಂದು ಮಧ್ಯಾಹ್ನ 12 ಗಂಟೆಗೆ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಕಂಪನಿಯು ಬಿಡುಗಡೆ ಮಾಡಿದ ಇತ್ತೀಚಿನ ಟೀಸರ್‌ನಲ್ಲಿ, ಈ ಫೋನ್ 80 ವ್ಯಾಟ್ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ ಎಂದು ದೃಢಪಡಿಸಲಾಗಿದೆ. ಈ ಫೋನ್ 120Hz AMOLED ಬಾಗಿದ ಡಿಸ್ಲ್ಪೇಯೊಂದಿಗೆ ಬರುವುದು ಖಚಿತವಾಗಿದೆ.

 Realme P2 Pro 5G ಬಿಡುಗಡೆ ದಿನಾಂಕ ಘೋಷಣೆ: ಬಜೆಟ್ ಬೆಲೆ.. ವಿಶೇಷತೆಗಳೇನು?

ರಿಯಲ್‌ಮಿ P2 ಪ್ರೊ 5G ಫೋನಿನ ವಿನ್ಯಾಸ

ಟೀಸರ್‌ನಲ್ಲಿ ರಿಯಲ್‌ಮಿ P2 ಪ್ರೊ 5G ಸ್ಮಾರ್ಟ್‌ಫೋನ್ ಹಸಿರು ಬಣ್ಣದಲ್ಲಿ ಕಾಣುತ್ತದೆ. ಈ ಮೂಲಕ ಕಂಪನಿಯು ಬಣ್ಣದ ರೂಪಾಂತರವನ್ನು ದೃಢಪಡಿಸಿದೆ. ಇದರಲ್ಲಿ ಬಾಗಿದ ವಿನ್ಯಾಸ ಮತ್ತು ಗೋಲ್ಡನ್ ಫ್ರೇಮ್ ಸ್ಪಷ್ಟವಾಗಿ ಕಾಣುತ್ತದೆ. ಫೋನಿನ ಮುಂಭಾಗದಲ್ಲಿ ಪಂಚ್ ಹೋಲ್ ಕಟೌಟ್ ಇದೆ. ಮತ್ತು ಹಿಂಭಾಗದ ಫಲಕದಲ್ಲಿರುವ ಬೃಹತ್ ಕ್ಯಾಮೆರಾ ಮಾಡ್ಯೂಲ್ ಚದರ ಆಕಾರದಲ್ಲಿದೆ. ಇದು ಎರಡು ಕ್ಯಾಮೆರಾಗಳು ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿದೆ.

ರಿಯಲ್‌ಮಿ P2 ಪ್ರೊ 5G ಫೋನಿನ ನಿರೀಕ್ಷಿತ ಬೆಲೆ

ಕಂಪನಿಯು ರಿಯಲ್‌ಮಿ P2 ಪ್ರೊ 5G ಫೋನನ್ನು 4 ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. 8GB ಮತ್ತು 128GB ಸ್ಟೋರೇಜ್, 8GB ಮತ್ತು 256GB, 12GB ಮತ್ತು 256GB, 12GB ಮತ್ತು 512GB ಸ್ಟೋರೇಜ್‌ ವೇರಿಯಂಟ್‌ನಲ್ಲಿ ಬರುತ್ತದೆ. ಭಾರತದಲ್ಲಿರಿಯಲ್‌ಮಿ P2 ಪ್ರೊ 5G ಮೊಬೈಲ್‌ನ ಬೆಲೆ 20 ಸಾವಿರ ರೂ.ಗಳ ಒಳಗಿರುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ರಿಯಲ್‌ಮಿ P2 ಪ್ರೊ 5G ಫೋನ್ ಕ್ಯಾಮೆಲಿಯನ್ ಗ್ರೀನ್ ಮತ್ತು ಈಗಲ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಈ ಸುದ್ದಿ ಓದಿದ್ದೀರಾ?: Vivo T3 Ultra: ಬರ್ತಿದೆ ರಗಡ್ ಫೋನ್: 50MP ಕ್ಯಾಮೆರಾ, 5500mAh ಬ್ಯಾಟರಿ.. ಬೆಲೆ ಕೇವಲ ಇಷ್ಟು!

ರಿಯಲ್‌ಮಿ P1 ಪ್ರೊ 5G ಫೋನಿನ ವೈಶಿಷ್ಟ್ಯಗಳು

ರಿಯಲ್‌ಮಿ P1 ಪ್ರೊ 5G ಫೋನ್ 6.7 ಇಂಚಿನ ಪೂರ್ಣ HD+ ಡಿಸ್ಲ್ಪೇಯನ್ನು ಹೊಂದಿದೆ. ಇದು AMOLED ಕರ್ವ್ಡ್ ಪ್ಯಾನೆಲ್, 120Hz ರಿಫ್ರೆಶ್ ರೇಟ್, 2000 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್, ರೈನ್‌ವಾಟರ್ ಟಚ್ ಸಪೋರ್ಟ್ ವೈಶಿಷ್ಟ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ Qualcomm Snapdragon 6 Gen 1 ಚಿಪ್‌ಸೆಟ್ ಅನ್ನು ಹೊಂದಿದೆ. ಗ್ರಾಫಿಕ್ಸ್‌ಗಾಗಿ ಅಡ್ರಿನೊ ಜಿಪಿಯು ಅನ್ನು ಬಳಸಲಾಗುತ್ತದೆ.

ರಿಯಲ್‌ಮಿ P1 ಪ್ರೊ 5G ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ LYTIA 600 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ.ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ರಿಯಲ್‌ಮಿ P1 ಪ್ರೊ 5G ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ ರಿಯಲ್‌ಮಿ P1 ಪ್ರೊ 5G ಮೊಬೈಲ್ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, Wi-Fi ನಂತಹ ಆಯ್ಕೆಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಪಡೆದಿದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡಾಲ್ಬಿ ಅಟ್ಮಾಸ್, ಏರ್ ಗೆಸ್ಚರ್‌ಗಳನ್ನು ಹೊಂದಿದೆ.

Best Mobiles in India

English summary
Realme P2 Pro 5G India Launch Date Confirmed: check Price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+