ಭಾರತದಲ್ಲಿ Realme P3 Ultra 5G ಲಾಂಚ್; 4000 ರಿಯಾಯಿತಿ.. ಬೆಲೆಯೂ ಕಡಿಮೆ.. ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು
ರಿಯಲ್‌ಮಿ ಅಭಿಮಾನಿಗಳ ಕಾಯುವಿಕೆ ಮುಗಿಯಿತು. ಅಂತೂ ಇಂತೂ ಹೊಚ್ಚ ಹೊಸ ರಿಯಲ್‌ಮಿ 5G ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಹೌದು, ಬಹುನಿರೀಕ್ಷಿತ ರಿಯಲ್‌ಮಿ P3 ಅಲ್ಟ್ರಾ 5G (Realme P3 Ultra 5G) ಸ್ಮಾರ್ಟ್‌ಫೋನ್ ಅಧಿಕೃತವಾಗಿ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದರೊಂದಿಗೆ ರಿಯಲ್‌ಮಿ P3 5G (Realme P3 P3 5G) ಫೋನನ್ನು ಸಹ ಅನಾವರಣಗೊಳಿಸಲಾಗಿದೆ. ಈ ಪೈಕಿ ರಿಯಲ್‌ಮಿ P3 ಅಲ್ಟ್ರಾ ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ರಿಯಲ್‌ಮಿ P3 ಅಲ್ಟ್ರಾ 5G ಮೊಬೈಲ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50MP ಮುಖ್ಯ ಮತ್ತು 16MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 12GBRAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಎಐ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳು
ರಿಯಲ್‌ಮಿ P3 ಅಲ್ಟ್ರಾ 5G ಸ್ಮಾರ್ಟ್‌ಫೋನ್ ಎಐ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಗೂಗಲ್ ಜೆಮಿನಿ ಎಐ ಅನ್ನು ಸಂಯೋಜಿಸಿದೆ. ಇದರೊಂದಿಗೆ ಪಠ್ಯವನ್ನು ಸುಲಭವಾಗಿ ರಚಿಸಲು ಮತ್ತು ಸ್ಮಾರ್ಟ್ ಹುಡುಕಾಟಗಳನ್ನು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರಲ್ಲಿ ಎಐ (AI) ಸ್ಮಾರ್ಟ್ ಲೂಪ್ ಮತ್ತು ಎಐ ರೆಕಾರ್ಡಿಂಗ್ ಸಾರಾಂಶದಂತಹ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಈ ರಿಯಲ್‌ಮಿ ಫೋನಿನ ಬೆಲೆ ಮತ್ತು ಮಾರಾಟ ವಿವರಗಳನ್ನು ತಿಳಿಯಲು ಮುಂದೆ ಓದಿ.
ರಿಯಲ್‌ಮಿ P3 ಅಲ್ಟ್ರಾ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ P3 ಅಲ್ಟ್ರಾ 5G ಸ್ಮಾರ್ಟ್‌ಫೋನ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K ಬಾಗಿದ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2800 x 1272 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದರೊಂದಿಗೆ 3840Hz PWM ಡಿಮ್ಮಿಂಗ್ ಮತ್ತು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ P3 ಅಲ್ಟ್ರಾ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6.0 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಈ ಸ್ಮಾರ್ಟ್‌ಫೋನ್, ಮಾಲಿ G615 MC6 ಜಿಪಿಯು ಸಹ ಹೊಂದಿದೆ.
ಸ್ಟೋರೇಜ್ ಆಯ್ಕೆ
ರಿಯಲ್‌ಮಿ P3 ಅಲ್ಟ್ರಾ 5G ಫೋನ್ 8GB RAM ಮತ್ತು 12GB RAM ಹೊಂದಿದೆ. ಈ ಫೋನ್ ವಿಸ್ತೃತ RAM ತಂತ್ರಜ್ಞಾನ ಹೊಂದಿದೆ. ಇದು 24GB RAM (12GB+12GB) ಶಕ್ತಿಯನ್ನು ನೀಡುತ್ತದೆ. ಈ ಫೋನಿನಲ್ಲಿ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಲಭ್ಯವಿದೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ P3 ಅಲ್ಟ್ರಾ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಶ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಇದೆ. ಎಐ (AI) ವೈಶಿಷ್ಟ್ಯಗಳಲ್ಲಿ ಎಐ ಎರೇಸರ್, ಎಐ ಬೆಸ್ಟ್ ಫೇಸ್ ಮತ್ತು ಎಐ ಮೋಷನ್ ಡೆಬ್ಲರ್ ಒಳಗೊಂಡಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ P3 ಅಲ್ಟ್ರಾ 5G ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W SuperVOOC ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು 17 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್ ಮತ್ತು 10 ಗಂಟೆಗಳವರೆಗೆ ಗೇಮಿಂಗ್ ಆಡಬಹುದು.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ P3 ಅಲ್ಟ್ರಾ 5G ಫೋನ್ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು, ಹೈ ರೆಸ್ ಆಡಿಯೋ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP66 + IP68 + IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4 (ಬ್ಲೂಟೂತ್ 6.0) ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ P3 ಅಲ್ಟ್ರಾ ಬೆಲೆ ಮತ್ತು ಲಭ್ಯತೆ
8GB RAM + 128GB ಸ್ಟೋರೇಜ್ ಬೆಲೆ = 26,999 ರೂ.
8GB RAM + 256GB ಸ್ಟೋರೇಜ್ ಬೆಲೆ = 27,999 ರೂ.
12GB RAM + 256GB ಸ್ಟೋರೇಜ್ ಬೆಲೆ = 29,999 ರೂ.
ರಿಯಲ್‌ಮಿ P3 ಅಲ್ಟ್ರಾ 5G ಫೋನಿನ ಆರಂಭಿ ಬೆಲೆ 26,999 ರೂ. ಆಗಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಎಲ್ಲಾ ಮೂರು ರೂಪಾಂತರಗಳ ಮೇಲೆ 4,000 ರೂ. ವರೆಗೆ ರಿಯಾಯಿತಿ ಘೋಷಿಸಿದೆ. ಇದನ್ನು ಸೀಮಿತ ಅವಧಿಗೆ ಮಾತ್ರ ಇರುತ್ತದೆ. ಈ ಆಫರ್ ಬಳಿಕ, ಮೂಲ ರೂಪಾಂತರದ ಬೆಲೆ 22,999 ರೂ., 8GB RAM + 256GB ಸ್ಟೋರೇಜ್ ಬೆಲೆ 23,999 ರೂ. ಮತ್ತು 12GB RAM ಬೆಲೆ 25,999 ರೂ.ಗೆ ಲಭ್ಯವಿರುತ್ತದೆ. ಈ ಫೋನ್ ಇದೇ ಮಾರ್ಚ್ 25 ರಂದು ಮಧ್ಯಾಹ್ನ 12 ಗಂಟೆಯಿಂದ ಕಂಪನಿಯ ಅಧಿಕೃತ ವೆಬ್‌ಸೈಟ್ (realme.com), ರಿಯಲ್‌ಮಿ ಸ್ಟೋರ್ ಆಪ್, ಫ್ಲಿಪ್‌ಕಾರ್ಟ್ (Flipkart) ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.


Click it and Unblock the Notifications








