ಬಜೆಟ್‌ ಬೆಲೆಯಲ್ಲಿ 'ರಿಯಲ್ ಮಿ U1' ಫೋನಿನ ಅಪ್‌ಡೇಟ್ ವೇರಿಯಂಟ್ ಲಭ್ಯವಾಗಲಿದೆ.!

|

ಓಪ್ಪೊ ಕಂಪನಿಯ ಸಬ್‌ಬ್ರ್ಯಾಂಡ್‌ ಆಗಿರುವ 'ರಿಯಲ್ ಮಿ' ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಕಡಿಮೆ ಅವಧಿಯಲ್ಲಿಯೇ ಜನಪ್ರಯತೆ ಗಳಿಸಿದೆ. ಇದರೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗಿರುವ ಕಂಪನಿ ಇದೀಗ ತನ್ನ ರಿಯಲ್ ಮಿ U1 ಸ್ಮಾರ್ಟ್‌ಫೋನ್ ಅಪ್‌ಡೇಟ್‌ ವೇರಿಯಂಟ್‌ ಅನ್ನು ರಿಲೀಸ್‌ ಮಾಡಿದೆ.

ಬಜೆಟ್‌ ಬೆಲೆಯಲ್ಲಿ 'ರಿಯಲ್ ಮಿ U1' ಫೋನಿನ ಅಪ್‌ಡೇಟ್ ವೇರಿಯಂಟ್ ಲಭ್ಯವಾಗಲಿದೆ.!

ರಿಯಲ್‌ ಮಿ ಕಂಪನಿ ತನ್ನ 'ರಿಯಲ್‌ ಮಿ U1' ಸ್ಮಾರ್ಟ್‌ಫೋನ್‌ ಮಾದರಿಯನ್ನು ಅಪ್‌ಡೇಟ್‌ ಮಾಡಿದ್ದು, ಈ ಹೊಸ ಅಪ್‌ಡೇಟ್‌ ವೇರಿಯಂಟ್ 3GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯದಲ್ಲಿ ಲಭ್ಯವಾಗಲಿದೆ. ಇದೇ ಏಪ್ರಿಲ್ 10 ರಂದು ಇ ಕಾಮರ್ಸ್‌ ತಾಣ ಅಮೆಜಾನಲ್ಲಿ ಮತ್ತು ಕಂಪನಿ ಅಧಿಕೃತ ವೆಬ್‌ಸೈಟ್‌ ಮೂಲಕ ಮಾರಟ ಆರಂಭಿಸಲಿದ್ದು, 10,999ರೂ.ಗಳ ಬೆಲೆಯನ್ನು ಹೊಂದಿರಲಿದೆ.

ಡಿಸ್‌ಪ್ಲೇಯಲ್ಲಿ ವಾಟರ್‌ಡ್ರಾಪ್ ನಾಚ್‌ ಒದಗಿಸುವುದರೊಂದಿಗೆ ಕ್ಯಾಮೆರಾಗೆ ಹೆಚ್ಚಿನ ಒತ್ತು ನೀಡಿದ್ದು, ಸೆಲ್ಫಿಗಾಗಿ 25 ಮೆಗಾಪಿಕ್ಸಲ್ ಹೈ ರೆಸಲ್ಯೂಶನ್ ಇರುವ ಕ್ಯಾಮೆರಾ ಒದಗಿಸಲಾಗಿದೆ. ಇದರೊಂದಿಗೆ ಮೀಡಿಯಾ ಟೆಕ್ ಹಿಲಿಯೊ P70 ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದ್ದು, ಪಬ್‌ಜಿ ಅಂಥಹ ಗೇಮ್‌ಗಳನ್ನು ಬೆಂಬಲಿಸಲಿದೆ. ಹಾಗಾದರೇ ರಿಯಲ್ ಮಿ ಸ್ಮಾರ್ಟ್‌ಫೋನ್ ಹೊಂದಿರುವ ಇತರೆ ವಿಶೇಷ ಫೀಚರ್ಸ್‌ಗಳನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್

ಡಿಸೈನ್

ರಿಯಲ್‌ ಮಿ ಯು 1 ಸ್ಮಾರ್ಟ್‌ಫೋನ್ ಡ್ಯುಡ್ರಾಪ್ ನಾಚ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸುತ್ತಲೂ ಅತೀ ಕಡಿಮೆ ಅಂಚನ್ನು ಹೊಂದಿದೆ. ಫೋನಿನ ನಾಲ್ಕು ಮೂಲೆಗಳು ಹಾಫ್‌ಕರ್ವ್ ಆಕಾರದ ರಚನೆಯನ್ನು ಹೊಂದಿದ್ದು, ಡಿಸ್‌ಪ್ಲೇ ಮೇಲ್ಬಾಗದ ಮಧ್ಯದಲ್ಲಿ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನಿನ ಸ್ಕ್ರೀನ್‌ ಮತ್ತು ಬಾಹ್ಯಬಾಡಿಯ ನಡುವಿನ ಅನುಪಾತವು ಶೇ 90.8 ರಷ್ಟು ಆಗಿದೆ. ಡಿಸ್‌ಪ್ಲೇಯು ವಿಡಿಯೊ ಗೇಮ್‌ ಆಡಲು ಮತ್ತು ವಿಡಿಯೊ ವೀಕ್ಷಣೆಗೆ ರೋಚಕ ಅನುಭವ ನೀಡಲಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಮಿ ಯು1 ಸ್ಮಾರ್ಟ್‌ಫೋನ್ ಅಪ್‌ಡೇಟ್‌ ವೇರಿಯಂಟ್ 3GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. ಹಾಗೂ ಮೀಡಿಯಾ ಟೆಕ್‌ ಹಿಲಿಯೊ P70 SoC ಪ್ರೊಸೆಸರ್ ಈ ಸ್ಮಾರ್ಟ್‌ಫೋನಿನ ಕಾರ್ಯವೈಖರಿಯನ್ನು ಹೆಚ್ಚಿಸಲಿದೆ. ಹೈ ಎಂಡ್‌ ಗೇಮ್‌ ಬೇಡುವ ಪಬ್‌ಜಿ ಅಂಥಹ ಆಟಗಳನ್ನು ಸರಳವಾಗಿ ಆಡಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಒದಗಿಸಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸಲ್ (ಅಪರ್ಚರ್‌ f/2.2) ಸಾಮರ್ಥ್ಯದಲ್ಲಿದ್ದರೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸಲ್ (ಅಪರ್ಚರ್‌ f/2.2) ಸಾಮರ್ಥ್ಯವನ್ನು ಹೊಂದಿದೆ. ಕ್ಯಾಮೆರಾವು PDAF ಆಯ್ಕೆಯನ್ನು ಬೆಂಬಲಿಸಲಿದ್ದು, ಜೊತೆಗೆ LED ಫ್ಲ್ಯಾಶ್‌ ಲೈಟ್‌ ಅನ್ನು ಹೊಂದಿದೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ರಿಯಲ್ ಮಿ ಯು1 ಸ್ಮಾರ್ಟ್‌ಫೋನ್ ಅಪ್‌ಡೇಟ್‌ ವೇರಿಯಂಟ್ ಹೆಚ್ಚಿನ ಒಲವು ನೀಡಲಾಗಿದ್ದು, ಅದಕ್ಕಾಗಿ ಮುಂಬದಿಯಲ್ಲಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ. ಕೃತಕ ಬುದ್ದಿಮತ್ತೆ AI ಸಾಮರ್ಥ್ಯ ಸೆಲ್ಫಿ ಫೋಟೋಗಳು ಹೆಚ್ಚು ಶಾರ್ಪ್ ಆಗಿ ಬರಲು ಬೆಂಬಲಿಸಲಿದ್ದು, ಆಟೋ ಫೋಕಸ್‌ ಆಯ್ಕೆ ನೀಡಲಾಗಿದೆ.

ಬ್ಯಾಟರಿ

ಬ್ಯಾಟರಿ

3,500mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಈ ಬ್ಯಾಟರಿ ಸುಮಾರು ಒಂದು ದಿನ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ 10W ನ ಚಾರ್ಜರ್‌ ಸೌಲಭ್ಯವನ್ನು ಒದಗಿಸಲಾಗಿದ್ದು, ಅರ್ಧಗಂಟೆಯಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಶೇ.30% ಭರ್ತಿ ಆಗಲು ಸಹಕರಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇದೇ ಏಪ್ರಿಲ್ 10 ರಂದು ರಿಲೀಸ್‌ ಆಗಲಿರುವ 'ರಿಯಲ್ ಮಿ ಯು 1' ಸ್ಮಾರ್ಟ್‌ಫೋನ್ 3GB RAM ಅಪ್‌ಡೇಟ್‌ ವೇರಿಯಂಟ್‌ ಪ್ರಮುಖ ಇ ಕಾಮರ್ಸ್‌ ಜಾಲತಾಣ ಅಮೆಜಾನ್ ಮತ್ತು ರಿಯಲ್ ಮಿ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. 3GB RAM ವೇರಿಯಂಟ್ ಬೆಲೆಯು 10,999ರೂ.ಗಳ ಆಗಿದೆ.

Best Mobiles in India

English summary
Realme has launched a new variant of the Realme U1 that comes with 3GB of RAM and 64GB of internal storage. Priced at Rs 10,999, the new storage model neatly slots between the existing two variants.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X