Realme: ಕಡಿಮೆ ಬೆಲೆಗೆ 2 ಹೊಸ 5G ಫೋನ್ ಲಾಂಚ್; 50MP ಕ್ಯಾಮೆರಾ, 5000mAh ಬ್ಯಾಟರಿ.. ಬೆಲೆ ನೋಡಿ
ರಿಯಲ್‌ಮಿ ಸದ್ದಿಲ್ಲದೆ ಎರಡು ಹೊಸ 5G ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳು ಕಡಿಮೆ ಬಜೆಟ್ ವಿಭಾಗದಲ್ಲಿ ಬರುತ್ತವೆ. ಹೌದು, ಕಂಪನಿಯು ರಿಯಲ್‌ಮಿ V70 (realme V70) ಮತ್ತು ರಿಯಲ್‌ಮಿ V70 (realme V70s) ಫೋನ್‌ಗಳನ್ನು ಅಧಿಕೃತವಾಗಿ ರಿಲೀಸ್ ಮಾಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಡೈನಾಮಿಕ್ RAM ವಿಸ್ತರಣಾ ತಂತ್ರಜ್ಞಾನವನ್ನು ಹೊಂದಿವೆ. ಬನ್ನಿ, ಈ ಹೊಸ ರಿಯಲ್‌ಮಿ ಫೋನ್‌ಗಳ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಎರಡೂ ಸ್ಮಾರ್ಟ್‌ಫೋನ್‌ಗಳು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿವೆ. ಇವುಗಳ ವಿಶೇಷತೆಗಳನ್ನು ನೋಡುವುದಾದರೆ, ರಿಯಲ್‌ಮಿ V70 ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಇತ್ತ, ರಿಯಲ್‌ಮಿ V70 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಒಳಗೊಂಡಿದೆ. ಈ ಫೋನ್‌ಗಳಲ್ಲಿ 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಮೊಬೈಲ್ 6.72 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 16GB RAM, 256GB ಸ್ಟೋರೇಜ್ ಮತ್ತು 5,000mAh ಬ್ಯಾಟರಿ ಒಳಗಳೊಂಡಿದೆ.

ರಿಯಲ್‌ಮಿ V70 ಮತ್ತು ರಿಯಲ್‌ಮಿ V70s ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ V70 ಮತ್ತು ರಿಯಲ್‌ಮಿ V70s ಸ್ಮಾರ್ಟ್‌ಫೋನ್‌ಗಳು 6.72 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿವೆ. ಇದು 1604 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ, ಫ್ಲಿಕರ್ ಫ್ರೀ ಡಿಸಿ ಡಿಮ್ಮಿಂಗ್, ಐ ಕೇರ್ ಮೋಡ್ ಮತ್ತು ವೆಟ್ ಹ್ಯಾಂಡ್ ಟಚ್ ತಂತ್ರಜ್ಞಾನವನ್ನು ಸಹ ಹೊಂದಿದೆ
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ V70 ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ರಿಯಲ್‌ಮಿ V70 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಒಳಗೊಂಡಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಎರಡೂ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ 6.0 ಜೊತೆಗೆ ಕೆಲಸ ಮಾಡುತ್ತವೆ. ಈ ಫೋನ್‌ಗಳು ಡೈನಾಮಿಕ್ RAM ವಿಸ್ತರಣಾ ತಂತ್ರಜ್ಞಾನವನ್ನು ಹೊಂದಿವೆ. ಇದರೊಂದಿಗೆ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ V70 ಮತ್ತು ರಿಯಲ್‌ಮಿ V70s ಫೋನ್‌ಗಳು ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿವೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ ದ್ವಿತೀಯ ಎಐ ಲೆನ್ಸ್ ಒಳಗೊಂಡಿದೆ. ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಎರಡೂ ಮೊಬೈಲ್‌ಗಳು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಈ ಹೊಸ 5G ಫೋನ್‌ಗಳು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿವೆ. ಹಾಗೆಯೇ ಮಿಲಿಟರಿ ದರ್ಜೆಯ ಬಾಡಿಯೊಂದಿಗೆ ಬರುತ್ತವೆ. ಇವು ನೆಲದ ಮೇಲೆ ಬಿದ್ದರೂ ಸಹ ಹೆಚ್ಚಿನ ಸುರಕ್ಷಿತವಾಗಿರುತ್ತವೆ.
ರಿಯಲ್‌ಮಿ V70 ಮತ್ತು ರಿಯಲ್‌ಮಿ V70s ಬೆಲೆ
ರಿಯಲ್‌ಮಿ V70 5G ಫೋನಿನ 6GB RAM + 128GB ಸ್ಟೋರೇಜ್ ಬೆಲೆ 14,200 ರೂ. ಆಗಿದೆ. 8GB RAM + 256GB ಸ್ಟೋರೇಜ್ ವೇರಿಯಂಟ್ 17,760 ರೂ.ಗೆ ಬಿಡುಗಡೆಯಾಗಿದೆ. ರಿಯಲ್‌ಮಿ V70S 5G ಮೊಬೈಲ್‌ನ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 17,760 ರೂ. ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಯನ್ನು 22,500 ರೂ.ಗೆ ಪರಿಚಯಿಸಲಾಗಿದೆ. ಇವು ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ. ಪ್ರಸ್ತುತ, ಈ ಫೋನ್‌ಗಳು ಚೀನಾ ಮಾರುಟಕಟ್ಟೆಯಲ್ಲಿ ಮಾರಾಟವಾಗಲಿವೆ. ಈ ಮೊಬೈಲ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುವ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ನೀಡಿಲ್ಲ.


Click it and Unblock the Notifications








