Home
ಮೊಬೈಲ್

'ರಿಯಲ್ ಮಿ ಎಕ್ಸ್' ಲಾಂಚ್!..ಐದು ಟ್ರೆಂಡಿಂಗ್ ಫೀಚರ್ಸ್‌ಗಳ ಆಕರ್ಷಣೆ!

ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್‌ ಮಿ ಕಂಪನಿಯು ಇತ್ತೀಚಿಗೆ 'ರಿಯಲ್ ಮಿ 3 ಪ್ರೊ' ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಿ ಭಾರಿ ಸದ್ದು ಮಾಡಿದ್ದು, ಇದೀಗ ಗ್ರಾಹಕರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಕಂಪನಿಯ ತನ್ನ ಬಹುನಿರೀಕ್ಷಿತ ಫ್ಲ್ಯಾಗ್‌ಶಿಪ್ ಮಾದರಿಯ 'ರಿಯಲ್ ಮಿ ಎಕ್ಸ್‌' ಸ್ಮಾರ್ಟ್‌ಫೋನ್‌ ಅನ್ನು ರಿಲೀಸ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ವಿಶೇಷ ಫೀಚರ್ಸ್‌ಗಳಿಂದ ಮೊಬೈಲ್‌ ಮಾರುಕಟ್ಟೆಯಲ್ಲಿ ಭಾರಿ ಅಚ್ಚರಿ ಮೂಡಿಸಿದೆ.

'ರಿಯಲ್ ಮಿ ಎಕ್ಸ್' ಲಾಂಚ್!..ಐದು ಟ್ರೆಂಡಿಂಗ್ ಫೀಚರ್ಸ್‌ಗಳ ಆಕರ್ಷಣೆ!

ಹೌದು, ರಿಯಲ್‌ ಮಿ ಕಂಪನಿಯು 'ರಿಯಲ್‌ ಮಿ ಎಕ್ಸ್‌' ಸ್ಮಾರ್ಟ್‌ಫೋನ್‌ ಅನ್ನು ಸದ್ಯ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದ್ದು, ಹಾಗೆಯೇ ಶೀಘ್ರದಲ್ಲೇ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಎಂಟ್ರಿ ಕೊಡಲಿದೆ. ಆದರೆ ಈಗಾಗಲೇ ಗ್ರಾಹಕರಲ್ಲಿ ಫೋನ್‌ ಬಗ್ಗೆ ಕ್ರೇಜ್‌ ಹುಟ್ಟುಹಾಕಿದೆ. ಈ ಫೋನಿನಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ, ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ, ಫಾಸ್ಟ್‌ ಚಾರ್ಜರ್‌ ಮತ್ತು ಅಂಚು ರಹಿತ ಡಿಸ್‌ಪ್ಲೇ ಆಯ್ಕೆಗಳು ಆಕರ್ಷಣಿಯ ಕೇಂದ್ರಗಳಾಗಿವೆ.

'ರಿಯಲ್ ಮಿ ಎಕ್ಸ್' ಲಾಂಚ್!..ಐದು ಟ್ರೆಂಡಿಂಗ್ ಫೀಚರ್ಸ್‌ಗಳ ಆಕರ್ಷಣೆ!

ರಿಯಲ್ ಮಿ ಎಕ್ಸ್‌ ಫ್ಲ್ಯಾಗ್‌ಶಿಪ್ ಮಾದರಿ ಸ್ಮಾರ್ಟ್‌ಫೋನ್‌ ಗ್ರಾಡಿಯಂಡ್ ಡಿಸೈನ್, ಕ್ಯಾಮೆರಾ ಸೇರಿದಂತೆ ಗ್ರಾಹಕರ ನಿರೀಕ್ಷಿಸುವ ಕೇಲವು ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಅವುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ಹಾಗಾದರೇ 'ರಿಯಲ್ ಮಿ ಎಕ್ಸ್‌' ಸ್ಮಾರ್ಟ್‌ಫೋನಿನ ವಿಶೇಷ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕೆದಾದ ಪ್ರಮುಖ ಅಂಶಗಳನ್ನು ಮುಂದೆ ನೋಡೋಣ ಬನ್ನಿರಿ.

ನಾಚ್‌ಲೆಸ್‌ ಡಿಸ್‌ಪ್ಲೇ

ನಾಚ್‌ಲೆಸ್‌ ಡಿಸ್‌ಪ್ಲೇ

6.5 ಇಂಚಿನ ವಿಶಾಲ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ ರೆಶಲ್ಯೂಶನ್‌ ಒಳಗೊಂಡಿದೆ. ಡಿಸ್‌ಪ್ಲೇಯ ಸುತ್ತಲೂ ಅತಿ ಕಡಿಮೆ ಅಂಚನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಗೇಮ್ಸ್‌ ಆಡಲು ಮತ್ತು ವಿಡಿಯೊ ವೀಕ್ಷಿಸಲು ಡಿಸ್‌ಪ್ಲೇಯು ಅತ್ಯುತ್ತಮ ಎನಿಸಲಿದೆ.

ಸ್ನ್ಯಾಪ್‌ಡ್ರಾಗನ್ 710

ಸ್ನ್ಯಾಪ್‌ಡ್ರಾಗನ್ 710

ರಿಯಲ್ ಮಿ 3 ಪ್ರೊ ದಲ್ಲಿಯೂ ಸಹ ಕಂಪನಿಯು ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿತ್ತು. ಈಗ ರಿಯಲ್ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿದೆ. ಮಲ್ಟಿಟಾಸ್ಕ್‌ ಕೆಲಸಗಳು ಸುಲಭವಾಗಿ ಮಾಡಬಹುದಾಗಿದ್ದು, ಗೇಮ್‌ ಆಡಲು ಸಹ ಪೂರಕವಾಗಿರಲಿದೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ಸದ್ಯ ಟ್ರೆಂಡಿಂಗ್‌ನಲ್ಲಿರುವ ಫೀಚರ್ಸ್‌ಗಳಲ್ಲಿ 48ಎಂಪಿ ಕ್ಯಾಮೆರಾ ಆಯ್ಕೆಯು ಸಹ ಒಂದಾಗಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನ್ ಸಹ ಹಿಂಬದಿಯಲ್ಲಿ 48ಎಂಪಿ ಕ್ಯಾಮೆರಾ ಫೀಚರ್‌ ಅನ್ನು ಹೊಂದಿದ್ದು, ಸೋನಿಯ IMX586 ಸೆನ್ಸಾರ್‌ ಈ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಅದರ ಅಪರ್ಚರ್ f/1.7 ಸಾಮರ್ಥ್ಯದಲ್ಲಿದೆ.

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಈಗಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳಲ್ಲಿ ಸೆಲ್ಫಿಗಾಗಿ ಪಾಪ್‌ಅಪ್‌ ಕ್ಯಾಮೆರಾ ಆಯ್ಕೆಯನ್ನು ಒದಗಿಸಲಾಗುತ್ತಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನ 16ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾವುನ್ನು ಒದಗಿಸಿದ್ದು, ಅದು 0.7 ಸೆಕೆಂಡ್ಸ್‌ನ ಒಳಗೆ ತೆರೆದುಕೊಳ್ಳುತ್ತದೆ.

VOOC 3.0

VOOC 3.0

ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್ಫೋನ್‌ನಲ್ಲಿ 3,765mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಬ್ಯಾಟರಿಯು ದೀರ್ಘಕಾಲದವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ VOOC 3.0 ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್‌ ಪಡೆದುಕೊಳ್ಳುತ್ತದೆ.

Best Mobiles in India

English summary
Realme X launched: Top 5 features you should know about the phone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+