'ರಿಯಲ್ ಮಿ XT' ಸ್ಮಾರ್ಟ್‌ಫೋನ್ ಖರೀದಿಗೆ ಯೋಗ್ಯವೇ?..ಇಲ್ಲಿದೆ ವಿಮರ್ಶೆ!
ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ರಿಯಲ್ ಮಿ ಕಂಪನಿಯ 'ರಿಯಲ್ ಮಿ XT' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ಹೈ ಮೆಗಾಪಿಕ್ಸಲ್ ಕ್ಯಾಮೆರಾ ಫೀಚರ್ ಒಳಗೊಂಡಂತೆ, ಬ್ಯಾಟರಿ, ಪ್ರೊಸೆಸರ್ ಮತ್ತು ಅತ್ಯುತ್ತಮ ಡಿಸೈನ್ ಲುಕ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಫೋನ್ ಹಿಂಬದಿಯಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಆಯ್ಕೆಯನ್ನು ಪಡೆದಿರುವುದು ವಿಶೇಷವಾಗಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್ ಹೊಂದಿದೆ.

ರಿಯಲ್ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನ್ ಶಿಯೋಮಿಯ ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನಿಗೆ ನೇರ ಪೈಪೋಟಿ ನೀಡುವ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 AIE SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದುಮ ಮಲ್ಟಿಟಾಸ್ಕ್ ಕೆಲಸಗಳಿಗೆ ಹೆಚ್ಚು ಸಪೋರ್ಟ್ ನೀಡಲಿದೆ. ಹಾಗೆಯೇ Adreno 616 GPU ಸಹ ಹೊಂದಿದ್ದು ಗೇಮಿಂಗ್‌ಗೂ ಬೆಸ್ಟ್ ಎನಿಸಲಿದೆ. ರಿಯಲ್ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಮುಂದೆ ತಿಳಿಯೋಣ.

ಡಿಸ್‌ಪ್ಲೇ ಡಿಸೈನ್
ರಿಯಲ್ ಮಿ XT ಸ್ಮಾರ್ಟ್‌ಫೋನ್ 2340x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ಹೆಚ್ಚು ಆಕರ್ಷಕ ನೋಟವನ್ನು ಒಳಗೊಂಡಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯನ್ನು ಪಡೆದುಕೊಂಡಿದೆ. ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ಕವಚ್ ಹಾಗೂ ಫೋನ್ ಸುತ್ತಲೂ ಕರ್ವ್ ರಚನೆ ಒದಗಿಸಲಾಗಿದೆ. ಹಾಗೆಯೇ ಹಿಂಬದಿ ಗ್ಲಾಸಿ ಲುಕ್‌ನ ಫೋನಿನ ಅಂದ ಹೆಚ್ಚಿಸಲಿದೆ.

ಪ್ರೊಸೆಸರ್ ಸಾಮರ್ಥ್ಯ
ರಿಯಲ್ ಮಿ XT ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 AIE SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ನೀಡಲಾಗಿದೆ. ಒಟ್ಟು ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 4GB RAM ಮತ್ತು 64GB ಸ್ಟೋರೇಜ್, 6GB RAM ಮತ್ತು 64GB ಸ್ಟೋರೇಜ್ ಹಾಗೂ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದಲ್ಲಿವೆ. ಉತ್ತಮ ಕಾರ್ಯವೈಖರಿ ಇದೆ.

ಕ್ವಾಡ್ ಕ್ಯಾಮೆರಾ ವಿಶೇಷ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಅಲ್ಟ್ರಾ-ವೈಲ್ಡ್ ಸೆನ್ಸಾರ್‌ನಲ್ಲಿದ್ದು, ಮೂರನೇಯ ಮತ್ತು ನಾಲ್ಕನೇ ಕ್ಯಾಮೆರಾಗಳೆರಡು 2ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಇದ್ದು, ಸೋನಿಯ IMX 471 ಸೆನ್ಸಾರ್ ಒದಗಿಸಲಾಗಿದೆ. ಈ ಪ್ರೈಸ್‌ಟ್ಯಾಗ್‌ನಲ್ಲಿ ನಾಲ್ಕು ಉತ್ತಮ ಕ್ಯಾಮೆರಾ ನೀಡಿರುವುದು ಹೈಲೈಟ್ ಆಗಿದೆ.

ಬ್ಯಾಟರಿ ಹೇಗಿದೆ
ರಿಯಲ್ ಮಿ XT ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಒಂದು ದಿನ ಆರಾಮವಾಗಿ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ. ಇದರೊಂದಿಗೆ ColorOS 6 ಬೆಂಬಲಿತ ಆಂಡ್ರಾಯ್ಡ್ 9 ಪೈ ಓಎಸ್, ಡಾರ್ಕ್ ಮೋಡ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಆಕ್ಸಿಡೆಂಟಲ್ ಡ್ರಾಪ್ಸ್‌ನಿಂದ ರಕ್ಷಣೆ ಸೌಲಭ್ಯಗಳೊಂದಿಗೆ ವೈಫೈ, ಬ್ಲೂಟೂತ್, ಆಯ್ಕೆಗಳನ್ನು ಹೊಂದಿದೆ.

ಕೊನೆಯ ಮಾತು
ರಿಯಲ್ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನ್ 20000ರೂ ಪ್ರೈಸ್‌ಟ್ಯಾಗ್‌ನಲ್ಲಿ ಒಂದು ಅತ್ಯುತ್ತಮ ಕ್ವಾಡ್ ಕ್ಯಾಮೆರಾ ಫೋನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ರಿಯಲ್ ಮಿ XT ಸ್ಮಾರ್ಟ್‌ಫೋನ್ 4GB RAM ಮತ್ತು 64GB ವೆರಿಯಂಟ್ ಬೆಲೆಯು 15,999ರೂ, 6GB RAM ಮತ್ತು 64GB ವೆರಿಯಂಟ್ ಬೆಲೆಯು 16,999ರೂ.ಗಳು ಮತ್ತು ಹೈ ಎಂಡ್ ವೇರಿಯಂಟ್ 8GB RAM ಮತ್ತು 128GB ಬೆಲೆಯು 18,999ರೂ.ಗಳಾಗಿದೆ.


Click it and Unblock the Notifications








