Subscribe to Gizbot

ನೆಕ್ಸಸ್‌ -5 ಸ್ಮಾರ್ಟ್‌ಫೋನನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?

Posted By:

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆಂಡ್ರಾಯ್ಡ್‌ ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಸ್ಟಾಕ್‌ ಖಾಲಿಯಾಗಿತ್ತು.ನಂತರ ಈಗ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಬಿಡುಗಡೆಯಾದ ತಕ್ಷಣ ಅಷ್ಟು ಬೇಗನೇ ಸ್ಟಾಕ್‌ ಖಾಲಿಯಾಗಿರುವುದಕ್ಕೆ ಅಂಥ ವಿಶೇಷತೆ ಸ್ಮಾರ್ಟ್‌ಫೋನಿನಲ್ಲಿ ಏನಿದೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಸಾಮಾನ್ಯವಾಗಿ ಗೂಗಲ್‌ ಬ್ರ್ಯಾಂಡೆಡ್‌ ಕಂಪೆನಿ ಆ ಕಾರಣಕ್ಕಾಗಿ ಸ್ಮಾರ್ಟ್‌ಫೋನ್‌ ಚೆನ್ನಾಗಿದೆ ಎಂದು ಹೇಳಿ ಗ್ರಾಹಕರು ಸ್ಮಾರ್ಟ್‌‌ಫೋನನ್ನು ಖರೀದಿಸುತ್ತಿದ್ದಾರೆ ಎಂದು ನೀವು ಊಹಿಸಿದರೆ ತಪ್ಪಾದಿತು. ಯಾಕೆಂದರೆ ಎಲ್ಲಾ ದೊಡ್ಡ ಕಂಪೆನಿ ಸ್ಮಾರ್ಟ್‌‌ಫೋನ್‌ ಗುಣ ವಿಶೇಷತೆಗಳು ಚೆನ್ನಾಗಿರುತ್ತದೆ ಹೇಳಲು ಬರುವುದಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ತಯಾರಿಸಿದ ಗೂಗಲ್‌ ಬ್ರ್ಯಾಂಡೆಡ್‌ ಕಂಪೆನಿ ಅದರ ಜೊತೆಗೆ ಇದರಲ್ಲಿನ ವಿಶೇಷತೆಗಳಿಂದಾಗಿ ಜನ ಈ ಸ್ಮಾರ್ಟ್‌‌ಫೋನ್‌ ಖರೀದಿಸುತ್ತಿದ್ದಾರೆ. ಹಾಗಾದ್ರೆ ಇದರಲ್ಲಿರುವ ಅಂಥ ವಿಶೇಷತೆ ಏನು ಎನ್ನುವುದಕ್ಕೆ ಇಲ್ಲಿ ಕೆಲವು ವಿವರವಿದೆ. ಓದಿಕೊಂಡು ಹೋಗಿ. ವಿವರಣೆ ಇಷ್ಟವಾದಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸಿ.

ನೆಕ್ಸಸ್‌ 5 ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌:

ನೆಕ್ಸಸ್‌ -5ನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?


ಕಿಟ್‌ಕ್ಯಾಟ್‌ ಓಎಸ್‌ನ ಮೊದಲ ಫೋನ್‌ ಇದಾಗಿದ್ದು ಇದರ ವಿಶೇಷತೆಗಳಾದ ಹೊಸ ಕಾಲರ್‌ ಐಡಿ,ಸುಧಾರಿತ ವಾಯ್ಸ್‌ ಸರ್ಚಿಂಗ್‌, ಸೆನ್ಸರ್‌ ಸೇರಿದಂತೆ ಹಲವಾರು ವಿಶೇಷತೆಗಳನ್ನು ಹೊಂದಿದೆ.ನೆಕ್ಸಸ್‌ ಸ್ಮಾರ್ಟ್‌ಫೋನ್‌ ಗೂಗಲ್‌ ತಯಾರಿಸುವುದರಿಂದ ಮುಂದೆ ಕಿಟ್‌ಕ್ಯಾಟ್‌ ಅಪ್‌ಡೇಟ್‌ ಆವೃತ್ತಿ ಬಿಡುಗಡೆಯಾದರೂ ಬೇಗನೆ ಅಪ್‌ಡೇಟ್‌ ಮಾಡುವ ಅವಕಾಶ ಈ ಸ್ಮಾರ್ಟ್‌ಫೋನ್‌ ಖರೀದಿಸಿದ ಬಳಕೆದಾರರಿಗೆ ಮಾತ್ರ ಇರುತ್ತದೆ.

ಇದನ್ನೂ ಓದಿ: ಆಂಡ್ರಾಯ್ಡ್‌ ಹೊಸ ಕಿಟ್‌ಕ್ಯಾಟ್‌ ಓಎಸ್‌ನಲ್ಲಿರುವ 11 ಹೊಸ ವಿಶೇಷತೆಗಳು

ಹಾರ್ಡ್‌ವೇರ್‌:

ನೆಕ್ಸಸ್‌ -5ನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?


ಎಲ್‌ಜಿ ಕಂಪೆನಿ ಈ ಸ್ಮಾರ್ಟ್‌ಫೋನ್‌ ತಯಾರಿಸಿದ್ದು ಫೋನ್‌ 2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‌, 2 GB ರ್‍ಯಾಮ್‌ ಹೊಂದಿದೆ.ಶಕ್ತಿಶಾಲಿ ಪ್ರೊಸೆಸರ್‍, ರ್‍ಯಾಮ್‌ ಹೊಂದಿರುವುದರಿಂದ ಮಲ್ಟಿಟಾಸ್ಕಿಂಗ್‌ ವೇಳೆ ಹ್ಯಾಂಗ್‌ ಆಗುವುದು,ಸ್ಲೋ ಆಗುವ ಸಮಸ್ಯೆ ಇಲ್ಲದೇ ಸುಲಭವಾಗಿ ಕೆಲಸ ಮಾಡಬಹುದು. ಜೊತೆಗೆ Adreno 330
ಗ್ರಾಫಿಕ್ಸ್‌ ಪ್ರೊಸೆಸರ್‌ ಇರುವುದರಿಂದ ಹೆ‌ಚ್‌ಡಿ ಗೇಮ್ಸ್‌ಗಳನ್ನು ಚೆನ್ನಾಗಿ ಆಡಬಹುದು.

 ಸ್ಕೀನ್‌:

ನೆಕ್ಸಸ್‌ -5ನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?


ಸ್ಕ್ರೀನ್ ವಿಚಾರಕ್ಕೆ ಬಂದರೆ ಗೂಗಲ್‌ ಫುಲ್‌ ಎಚ್‌ಡಿ ಸ್ಕ್ರೀನ್‌ ನೀಡಿದೆ. ಸ್ಮಾರ್ಟ್‌ಫೋನ್‌ 4.95 ಇಂಚಿನ, 1080 x 1920 ಪಿಕ್ಸೆಲ್‌ ರೆಸೂಲೂಶನ್‌, 445 ಪಿಪಿಐ ಹೊಂದಿರುವ ಸ್ಕ್ರೀನ್‌ ಹೊಂದಿದೆ, ಅಷ್ಟೇ ಅಲ್ಲದೇ ಸ್ಕ್ರೀನ್‌ ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌ ಹೊಂದಿರುವುದರಿಂದ ಗೀರುಗಳಾಗುವ ಸಾಧ್ಯತೆ ಕಡಿಮೆ ಇದೆ.

 ಕ್ಯಾಮೆರಾ/ಮೆಮೊರಿ:

ನೆಕ್ಸಸ್‌ -5ನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?


8 ಎಂಪಿ ಹಿಂದುಗಡೆ, ಮಂದುಗಡೆ 1.3 ಎಂಪಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ. ಜೊತೆಗೆ ಎರಡು(16/32 GB) ಆಂತರಿಕ ಮೆಮೊರಿಯಲ್ಲಿ
ಬಿಡುಗಡೆಯಾಗಿರುವುದರಿಂದ ಕ್ಯಾಮೆರಾ ಮತ್ತು ಮೆಮೊರಿಯಲ್ಲೂ ಉತ್ತಮ ಸ್ಮಾರ್ಟ್‌ಫೋನ್‌ ಇದಾಗಿದೆ.

 ಬೆಲೆ:

ನೆಕ್ಸಸ್‌ -5ನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?


ಹಿಂದಿನ ಪುಟದಲ್ಲಿ ನೀವು ಓದಿದಂತೆ ಪ್ರೊಸೆಸರ್‍,ಓಎಸ್‌,ಕ್ಯಾಮೆರಾ,ಮೆಮೊರಿ,ಸ್ಕ್ರೀನ್‌ ಹೊಲಿಸಿದಾಗ ಬೆಲೆ ತುಂಬಾ ದುಬಾರಿಯಾಗಿರದೆ ಕಡಿಮೆ ಬೆಲೆಯನ್ನು ಈ ಸ್ಮಾರ್ಟ್‌‌ಫೋನಿಗೆ ಗೂಗಲ್‌ ನಿಗದಿಪಡಿಸಿದೆ. ನೆಕ್ಸಸ್‌ 5 16GB ಸ್ಮಾರ್ಟ್‌ಫೋನಿಗೆ 28,999 ರೂಪಾಯಿ ,32GB ಸ್ಮಾರ್ಟ್‌ಫೋನಿಗೆ 32,999 ಬೆಲೆಯಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಹೀಗಾಗಿ ಹೊಸದಾಗಿ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌ ಖರೀದಿಸಿ ಮತ್ತೇ ಅದನ್ನು ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಮಾಡುವ ಬದಲು ಕಡಿಮೆ ಬೆಲೆಯಲ್ಲಿ ಸಿಗುವ ಈ ಸ್ಮಾರ್ಟ್‌ಫೋನನ್ನು ಖರೀದಿಸಿದರೆ ಈಗಲೇ ಕಿಟ್‌ಕ್ಯಾಟ್‌ ಓಎಸ್‌ನ ಅನುಭವವನ್ನು ಪಡೆಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot