7000ರೂ. ಒಳಗೆ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್?
ಮೊಬೈಲ್ ಬ್ರ್ಯಾಂಡ್‌ಗಳು ಭಿನ್ನ ಶ್ರೇಣಿಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿವೆ. ಅವುಗಳಲ್ಲಿ ಕಡಿಮೆ ಬೆಲೆಯಿಂದ ಹೈ ಎಂಡ್ ದರದ ಫೋನ್‌ಗಳು ಸೇರಿವೆ. ಇತ್ತೀಚಿನ ಹಲವು ಎಂಟ್ರಿ ಲೆವೆಲ್ ಮೊಬೈಲ್‌ಗಳು ಸಹ ಆಕರ್ಷಕ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆದಿವೆ. ಅದಾಗ್ಯೂ, ಈ ವಿಭಾಗದಲ್ಲಿ ಕೆಲವು ಮೊಬೈಲ್ ಸಖತ್ ಜನಪ್ರಿಯತೆ ಗಳಿಸಿವೆ. ಮುಖ್ಯವಾಗಿ ರೆಡ್ಮಿ ಹಾಗೂ ಪೊಕೊದ ಫೋನ್‌ಗಳು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ.
ಹೌದು, ಎಂಟ್ರಿ ಲೆವೆಲ್ ವಿಭಾಗದಲ್ಲಿ ರೆಡ್ಮಿಯ ರೆಡ್ಮಿ 13C ಹಾಗೂ ಪೊಕೊ ಸಂಸ್ಥೆಯ ಪೊಕೊ C65 ಮೊಬೈಲ್‌ಗಳು ಟ್ರೆಂಡಿ ಎನಿಸಿವೆ. ಅಂದಹಾಗೆ ಈ ಎರಡು ಫೋನ್‌ಗಳ ಆರಂಭಿಕ ವೇರಿಯಂಟ್ ಜಸ್ಟ್ 7000ರೂ. ಗಳ ಒಳಗೆ ಖರೀದಿಗೆ ಸಿಗಲಿದೆ. ಇನ್ನು ಈ ಎರಡು ಫೋನ್‌ಗಳ ಪ್ರಾಥಮಿಕ ಕ್ಯಾಮೆರಾಗಳು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು, 8 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಪಡೆದಿವೆ.

ಹಾಗೆಯೇ ಈ ಎರಡು ಅಗ್ಗದ ಮೊಬೈಲ್‌ಗಳ ಪ್ರೊಸೆಸರ್ ಮೀಡಿಯಾ ಟೆಕ್ G85 ಚಿಪ್‌ಸೆಟ್ ಪ್ರೊಸೆಸರ್ ವೇಗವನ್ನು ಒಳಗೊಂಡಿವೆ. ಬಹುತೇಕ ಸಾಮ್ಯತೆಯ ಫೀಚರ್ಸ್ ಆಯ್ಕೆಗಳನ್ನು ಒಳಗೊಂಡಿದ್ದರೂ, ಅದಾಗ್ಯೂ ಕೆಲವು ಭಿನ್ನತೆಗಳನ್ನು ಕಾಣಬಹುದಾಗಿದೆ. ಹಾಗಾದರೇ ರೆಡ್ಮಿ 13C ಮತ್ತು ಪೊಕೊ C65 ಫೋನ್‌ಗಳಲ್ಲಿ ಖರೀದಿಗೆ ಯಾವುದು ಉತ್ತಮ? ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ 13C ಫೀಚರ್ಸ್
ರೆಡ್ಮಿ 13C (Redmi 13c) ಫೋನ್ 6.74 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಅನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಜೊತೆಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದ್ದು, ಜೊತೆಗೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ರೆಡ್ಮಿ 13C ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಜೊತೆಗೆ 18W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ಪೊಕೊ C65 ಫೀಚರ್ಸ್
ಪೊಕೊ C65 (POCO C65) ಮೊಬೈಲ್ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಸಪೋರ್ಟ್ ಜೊತೆಗೆ ಕೆಲಸ ಮಾಡಲಿದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದ್ದು, ಇದರ ಜೊತೆಗೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಪೊಕೊ C65 ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಜೊತೆಗೆ 18W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ಖರೀದಿಗೆ ಯಾವುದು ಬೆಸ್ಟ್?
ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ರೆಡ್ಮಿ 13C ಮತ್ತು ಪೊಕೊ C65 ಈ ಎರಡು ಫೋನ್‌ಗಳು ಬಹುತೇಕ ಸಾಮ್ಯತೆಯ ಫೀಚರ್ಸ್ ಪಡೆದಿವೆ. ಅದಾಗ್ಯೂ, ಖರೀದಿದಾರರು ಬೆಲೆ, ಆಫರ್ ಹಾಗೂ ಬ್ರ್ಯಾಂಡ್ ಮೌಲ್ಯ ಗಮನಿಸುತ್ತಾರೆ. ಪೊಕೊ C65 ಫೋನಿನ 4GB RAM + 128 GB ವೇರಿಯಂಟ್ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 6,999ರೂ. ಆಗಿದೆ. ಇನ್ನು ರೆಡ್ಮಿ 13C ಫೋನಿನ 4GB RAM + 128 GB ವೇರಿಯಂಟ್ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 7,199ರೂ. ಆಗಿದೆ.


Click it and Unblock the Notifications








