ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸುವ ಕಾಂಪ್ಯಾಕ್ ಪವರ್ ಹೌಸ್ ಸ್ಮಾರ್ಟ್‌ಫೋನ್ ಯಾವುದು..?
ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಚೀನಾ ಮೂಲದ ಶಿಯೋಮಿ, ಇದೇ ಮಾರ್ಚ್ 14 ರಂದು ರೆಡ್‌ಮಿ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಆದರೆ ಕಂಪನಿ ಈ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟು ಕೊಡೆದ, ಕೇವಲ ಕಾಂಪ್ಯಾಕ್ ಪವರ್ ಹೌಸ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವುದಾಗಿ ತಿಳಿಸಿದೆ.

ಟ್ವಿಟರ್ ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಶಿಯೋಮಿ, ಮಾರ್ಚ್ 12 ರಂದು ಕಾಂಪ್ಯಾಕ್ ಪವರ್ ಹೌಸ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡುವುದಾಗಿ ತಿಳಿಸಿದೆ. ಮೂಲಗಳ ಪ್ರಕಾರ ಅಂದು ಶಿಯೋಮಿ ರೆಡ್ 5 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ ಎಂಬುದು ಖಚಿತವಾಗಿದೆ. ಈಗಾಗಲೆ ಬಜೆಟ್ ಟಿವಿ ಬಿಡುಗಡೆ ಮಾಡಿರುವ ಶಿಯೋಮಿ, ಇದೇ ಮಾದರಿಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ತುದಿಗಾಲಿನಲ್ಲಿ ನಿಂತಿದೆ.

ಬೆಲೆಯಲ್ಲಿಯೇ ಆಟವಾಡಲಿದೆ:
ಈಗಾಗಲೇ ಮಾರುಕಟ್ಟೆಗೆ ನೋಟ್ 5 ಸ್ಮಾರ್ಟ್‌ಫೋನ್ ಅನ್ನು ಅತೀ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ್ದ ಶಿಯೋಮಿ, ರೆಡ್‌ಮಿ 5 ಸ್ಮಾರ್ಟ್‌ಫೋನ್ ಬೆಲೆಯನ್ನು ತೀರಾ ಕಡಿಮೆ ಮಾಡುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್ ರೂ.6,999ಕ್ಕೆ ಮಾರಾಟವಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆ ಎರ್ಪಟಿದೆ.

ದೊಡ್ಡ ಬ್ಯಾಟರಿ:
ತನ್ನ ಪ್ರೋಮೊಷನ್‌ನಲ್ಲೇ ಈ ವಿಷಯ ತಿಳಿಸುವ ಶಿಯೋಮಿ, ರೆಡ್‌ಮಿ 5 ಸ್ಮಾರ್ಟ್‌ಫೋನಿನಲ್ಲಿ 3300mAh ಬ್ಯಾಟರಿಯನ್ನು ಅವಳವಡಿಸಲಿದ್ದು, ಇದು ಎರಡು ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ ಎನ್ನಲಾಗಿದೆ. ಇದೇ ಸ್ಮಾರ್ಟ್‌ಫೋನ್ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ.

18:9 ಡಿಸ್‌ಪ್ಲೇ:
ಪ್ರಮೋಷನ್‌ನಲ್ಲಿ ತಿಳಿಸಿರುವ ಫೋನ್ ಫುಲ್ ಸ್ಕ್ರಿನ್ ವಿನ್ಯಾಸದ್ದಾಗಿದ್ದು, ರೆಡ್‌ಮಿ 5 ಸ್ಮಾರ್ಟ್‌ಫೋನಿನಲ್ಲಿ ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ, 18:9 ಅನುಪಾತದ 5.7 ಇಂಚಿನ HD ಪ್ಲಸ್ ಗುಣಮಟ್ಟದವನ್ನು ಹೊಂದಿದೆ. ಇದು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.

ಗ್ರಾಹಕರಿಗೆ ಆಯ್ಕೆ:
ರೆಡ್‌ಮಿ 5 ಸ್ಮಾರ್ಟ್‌ಫೋನ್ ನಲ್ಲಿ ಶಿಯೋಮಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. ಮೂರು ಆವೃತ್ತಿಯಲ್ಲಿ ಮಾರಾಟವಾಗುವ ಈ ಸ್ಮಾರ್ಟ್‌ಫೋನ್ 2GB/3GB/4G RAM ಮತ್ತು 16GB ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ಬೆಸ್ಟ್ ಕ್ಯಾಮೆರಾ:
ರೆಡ್‌ಮಿ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ ಜೊತೆಗೆ ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ.

ಓದಿರಿ: ಜನಸಾಮಾನ್ಯರ ಸ್ಮಾರ್ಟ್TV: ರೂ.13,999ಕ್ಕೆ ಲಭ್ಯವಿರುವ Mi TV 4A ಬೆಸ್ಟ್ ಯಾಕೆ..? ಖರೀದಿಸುವುದು ಹೇಗೆ..?


Click it and Unblock the Notifications