ಜನಸಾಮಾನ್ಯರ ಸ್ಮಾರ್ಟ್‌TV: ರೂ.13,999ಕ್ಕೆ ಲಭ್ಯವಿರುವ Mi TV 4A ಬೆಸ್ಟ್ ಯಾಕೆ..? ಖರೀದಿಸುವುದು ಹೇಗೆ..?

|

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಶಕೆಯನ್ನು ಆರಂಭಿಸಿದ ಚೀನಾ ಮೂಲದ ಶಿಯೋಮಿ, ಭಾರತೀಯರ ನಂಬಿಕೆಯನ್ನು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಇಷ್ಟು ದಿನ ಚೀನಾದಲ್ಲಿ ಮಾತ್ರವೇ ಮಾರಾಟ ಮಾಡುತ್ತಿದ್ದ Mi TVಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ. ಅದರಲ್ಲೂ ಭಾರತೀಯ ಆರ್ಥಿಕ ಸ್ಥಿತಿಗತಿಯನ್ನು ನೋಡಿಕೊಂಡು ಬೆಜೆಟ್ ಬೆಲೆಯಲ್ಲಿ ಟಿವಿಯನ್ನು ಮಾರಾಟ ಮಾಡುತ್ತಿದೆ.

ಜನಸಾಮಾನ್ಯರ ಸ್ಮಾರ್ಟ್‌TV: ರೂ.13,999ಕ್ಕೆ ಲಭ್ಯವಿರುವ Mi TV 4A ಬೆಸ್ಟ್ ಯಾಕೆ.?

ನಮ್ಮ ಮನೆಗೂ ಹೊಸ ಟಿವಿ ಬೇಕು, ಸ್ಲಿಮ್ ಆಗಿರಬೇಕು, ಸ್ಮಾರ್ಟ್‌ ಆಗಿರಬೇಕು ಮತ್ತು ಬೆಲೆಯೂ ನಮ್ಮ ಬಜೆಟ್ ನಲ್ಲಿಯೇ ಇರಬೇಕು ಎನ್ನುವವರಿಗೆ ಶಿಯೋಮಿ ಬಿಡುಗಡೆ ಮಾಡಿರುವ Mi TV 4A ಸ್ಮಾರ್ಟ್‌ ಟಿವಿ ಹೇಳಿ ಮಾಡಿಸಿದ ಹಾಗಿದೆ. ನೀವು ಕೊಡುವ ಬೆಲೆಗೆ ಎಂದಿಗೂ ಶಿಯೋಮಿ ಮೋಸ ಮಾಡುವುದಿಲ್ಲ. ಈ ಸ್ಮಾರ್ಟ್ ಟಿವಿ ಸಹ ಅತೀ ಹೆಚ್ಚು ವಿಶೇಷತೆಗಳೊಂದಿಗೆ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಬೆಲೆಗೆ ಇನ್ಯಾವುದೇ ಟಿವಿ ದೊರೆಯುವುದಿಲ್ಲ ಎನ್ನಬಹುದಾಗಿದೆ.

32 ಇಂಚಿನ ಮತ್ತು 43 ಇಂಚಿನ Mi TV 4A:

32 ಇಂಚಿನ ಮತ್ತು 43 ಇಂಚಿನ Mi TV 4A:

ಶಿಯೋಮಿ ಮಾರುಕಟ್ಟೆಗೆ ಎರಡು ಬಜೆಟ್ ಟಿವಿಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವನ್ನು ನೀಡಿದೆ. 32 ಇಂಚಿನ Mi TV 4A ಟಿವಿಯಲ್ಲಿ ಬಳಕೆದಾರರಿಗೆ HD ರೆಡಿ ಡಿಸ್‌ಪ್ಲೇ ದೊರೆತರೆ. 43 ಇಂಚಿನ Mi TV 4 ಟಿವಿಯಲ್ಲಿ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ನೀವು ಬಜೆಟ್ ಅನುಗುಣವಾಗಿ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ.

Mi TV 4A ಸ್ಮಾರ್ಟ್‌ ಟಿವಿಯ ಸ್ಮಾರ್ಟ್‌ ಫೀಚರ್ಸ್:

Mi TV 4A ಸ್ಮಾರ್ಟ್‌ ಟಿವಿಯ ಸ್ಮಾರ್ಟ್‌ ಫೀಚರ್ಸ್:

ನಿಮ್ಮ ಮನೆಯಲ್ಲಿರುವ ಸಾಮಾನ್ಯ ಟಿವಿಯನ್ನು Mi TV 4A ಟಿವಿಗೆ ಹೋಲಿಕೆ ಮಾಡುವುದು ಸಲ್ಲದು. ಈ ಸ್ಮಾರ್ಟ್ ಟಿಟಿಯಲ್ಲಿ ನೀವು 1.5GHz ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ ಮಾಲಿ T450 GPU ಸಹ ಅಳವಡಿಸಲಾಗಿದೆ. ಇದಲ್ಲದೇ ಟಿವಿಯಲ್ಲಿ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಬಳಕೆಗೆ ನೀಡಲಾಗಿದೆ.

ಪ್ರೋರ್ಟ್ ಗಳು:

ಪ್ರೋರ್ಟ್ ಗಳು:

ಸ್ಮಾರ್ಟ್ ಟಿವಿಯಲ್ಲಿ ಎಷ್ಟು ಪೋರ್ಟ್ ಗಳು ಇರಲಿದೆ ಎಂಬುದು ಪ್ರಮುಖ ವಿಷಯವಾಗಿದಲಿದ್ದು, ಈ ವಿಷಯದಲ್ಲಿ Mi TV 4A ಸಾಕಷ್ಟು ಅವಕಾಶವನ್ನು ಮಾಡಿಕೊಟ್ಟಿದೆ. ಮೂರು HDMI ಪೋರ್ಟ್ ಗಳು ಜೊತೆಗೆ ಎರಡು USB ಪೋರ್ಟ್ ಗಳನ್ನು ನೀಡಿದ್ದು, ಈ ಮೂಲಕ ನೀವು ಹೆಚ್ಚಿನ ಸಾಧನಗಳನ್ನು TVಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಬ್ಲೂಟೂತ್ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ:

ಬ್ಲೂಟೂತ್ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ:

ಇದಲ್ಲದೇ Mi TV 4A ಯಲ್ಲಿ ಬಳಕೆದಾರರು ಬ್ಲೂಟೂತ್ ಮೂಲಕ ಕನೆಕ್ಟ್ ಆಗಬಹುದಾಗಿದೆ. ಅಲ್ಲದೇ Wi-Fi ಸೌಲಭ್ಯ ಸಹ Mi TV 4A ಟಿವಿಯಲ್ಲಿ ಕಾಣಬಹುದಾಗಿದ್ದು, ಇದು ಟಿವಿಯಲ್ಲಿ ಬ್ರೌಸ್ ಮಾಡಲು ಸಹಾಯಕಾರಿಯಾಗಲಿದೆ.

ಹೊಸ ಮಾದರಿಯ ರಿಮೋಟ್ ಕಂಟ್ರೋಲ್:

ಹೊಸ ಮಾದರಿಯ ರಿಮೋಟ್ ಕಂಟ್ರೋಲ್:

ಇದಲ್ಲದೇ Mi TV 4Aಯಲ್ಲಿ ನೀವು ಹೊಸ ಮಾದರಿಯ ರಿಮೋಟ್ ಕಂಟ್ರೋಲ್ ಅನ್ನು ಪಡೆಯಬಹುದಾಗಿದೆ. ಇದುವರೆಗೂ ನೀವು ಬಳಕೆ ಮಾಡಿರುವ ಎಲ್ಲಾ ಮಾದರಿಯ ರಿಮೋಟ್ ಗಿಂತಲೂ ಇದು ವಿಭಿನ್ನವಾಗಿದೆ. ಮತ್ತು ಇದರ ಬಳಕೆಯ ಅನುಭವ ಸಹ ವಿಶಿಷ್ಟವಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಬೆಲೆಗಳು:

ಬೆಲೆಗಳು:

32 ಇಂಚಿನ Mi TV 4A ಟಿವಿ ರೂ.13,999ಕ್ಕೆ ದೊರೆಯಲಿದ್ದು, ಇದೆ ಮಾದರಿಯಲ್ಲಿ 43 ಇಂಚಿನ Mi TV 4A ಟಿವಿ ರೂ.22,999ಕ್ಕೆ ಲಭ್ಯವಿದೆ. ಈ ಎರಡು ಟಿವಿಗಳು ಮಾರ್ಚ್ 13 ರಂದು ಮೊದಲ ಬಾರಿಗೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ. ಮಿ.ಕಾಮ್ ಮತ್ತು ಫಿಪ್‌ಕಾರ್ಟ್‌ನಲ್ಲಿ ನೀವು ಈ ಟಿವಿಗಳನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Xiaomi Mi TV 4A A smart LED TV. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X