ರೆಡ್ಮಿ 9 ಪವರ್‌ ಫಸ್ಟ್‌ ಲುಕ್‌: ಅಗ್ಗದ ದರದಲ್ಲಿ ಜಬರ್ದಸ್ತ್ ಸ್ಮಾರ್ಟ್‌ಫೋನ್!

|

ಶಿಯೋಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ನೂತನ ರೆಡ್ಮಿ 9 ಪವರ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿದೆ. ಇದರೊಂದಿಗೆ ಅಧಿಕ RAM ಹಾಗೂ ವೇಗದ ಪ್ರೊಸೆಸರ್‌ ಫೀಚರ್ಸ್‌ಗಳಿಂದಲೂ ಈ ಫೋನ್ ಮತ್ತಷ್ಟು ಟ್ರೆಂಡಿ ಅನಿಸಿಕೊಂಡಿದೆ.

ಸ್ಮಾರ್ಟ್‌ಫೋನ್‌

ಶಿಯೋಮಿ ರೆಡ್ಮಿ 9 ಪವರ್ ಸ್ಮಾರ್ಟ್‌ಫೋನ್‌ ಆಂತರಿಕ ಸ್ಟೋರೇಜ್‌ಗೂ ಪ್ರಾಮುಖ್ಯತೆ ನೀಡಿದ್ದು, 4GB + 64GB ಮತ್ತು 4GB RAM + 128GB ಸಾಮರ್ಥ್ಯದ ವೇರಿಯಂಟ್‌ ಆಯ್ಕೆ ಹೊಂದಿದೆ. ಕ್ಯಾಮೆರಾ ಪ್ರಿಯರನ್ನು ಸೆಳೆಯಲು 48ಎಂಪಿ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಸ್ಕ್ರೀನ್ ರೆಸಲ್ಯೂಶನ್ ಅಧಿಕವಾಗಿದೆ. ಹಾಗಾದರೇ ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಫಸ್ಟ್‌ ಲುಕ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳನ್ನು ಓದಿರಿ.

ಡಿಸ್‌ಪ್ಲೇ ವಿಶೇಷತೆ ಏನು

ಡಿಸ್‌ಪ್ಲೇ ವಿಶೇಷತೆ ಏನು

ರೆಡ್‌ಮಿ 9 ಪವರ್ ಸ್ಮಾರ್ಟ್‌ಫೋನ್‌ 1,080x2,340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಡಾಟ್‌ಡ್ರಾಪ್‌ ಡಿಸ್‌ಪ್ಲೇ ಆಗಿದೆ. ಇನ್ನು ಈ ಡಿಸ್‌ಪ್ಲೇ 19.5:9 ರಚನೆಯ ಅನುಪಾತ ಹೊಂದಿದ್ದು, 400 ನಿಟ್ಸ್ ಬ್ರೈಟ್‌ನೆಶ್‌ ಅನ್ನು ಒಳಗೊಂಡಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ. ಹೈ ಎಂಡ್‌ ಗೇಮ್‌ಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ.

ಪ್ರೊಸೆಸರ್‌ ಕಾರ್ಯ ಹೇಗಿದೆ

ಪ್ರೊಸೆಸರ್‌ ಕಾರ್ಯ ಹೇಗಿದೆ

ರೆಡ್ಮಿ 9 ಪವರ್ ಸ್ಮಾರ್ಟ್‌ಫೋನ್ ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ MIUI 12 ರೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೇಯೇ 4GB RAM ಮತ್ತು 64GB +128gb ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ವೇಗದ ಗೇಮಿಂಗ್‌ ಆಟಗಳಿಗೆ ಪೂರಕವಾಗಿದೆ.

ಕ್ಯಾಮೆರಾ ರಚನೆ ಮತ್ತು ಸೆನ್ಸಾರ್

ಕ್ಯಾಮೆರಾ ರಚನೆ ಮತ್ತು ಸೆನ್ಸಾರ್

ರೆಡ್ಮಿ 9 ಪವರ್ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ರೆಡ್ಮಿ 9 ಪವರ್ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ V 5.0, GPS, ಇನ್ಫ್ರಾರೆಡ್ (ಐಆರ್) ಬ್ಲಾಸ್ಟರ್, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ರೆಡ್‌ಮಿ 9 ಪವರ್‌ ಸ್ಮಾರ್ಟ್‌ಫೋನ್‌ 4GB RAM + 64GB ಸ್ಟೋರೇಜ್ ವೇರಿಯಂಟ್‌ ಬೆಲೆಯು 10,999ರೂ. ಆಗಿದೆ. ಅದೇ ರೀತಿ 4GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆಯು 11,999 ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬ್ಲೇಜಿಂಗ್ ಬ್ಲೂ, ಎಲೆಕ್ಟ್ರಿಕ್ ಗ್ರೀನ್, ಫೈರಿ ರೆಡ್ ಮತ್ತು ಮೈಟಿ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Redmi 9 Power First Look Best Smartphone In Budget Price Tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X