ರೆಡ್ಮಿ 9 ಮತ್ತು ರೆಡ್ಮಿ 9 ಪ್ರೈಮ್: ಭಿನ್ನತೆಗಳೆನು?..ಖರೀದಿಗೆ ಯಾವುದು ಬೆಸ್ಟ್?
ದೇಶಿಯ ಮೊಬೈಲ್ ಮಾರುಕಟ್ಟೆಗೆ ಬಜೆಟ್ ದರದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಇವೆ. ಈ ಲಿಸ್ಟಿಗೆ ಇದೀಗ ರೆಡ್ಮಿಯ ಹೊಸ ರೆಡ್ಮಿ 9 ಮತ್ತು ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್‌ಗಳು ಸೇರಿಕೊಂಡಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಸಾಮ್ಯತೆ ಅನಿಸಿದರೂ, ಇವುಗಳಲ್ಲಿ ಭಿನ್ನತೆಗಳಿವೆ. ಈ ಎರಡು ಫೋನ್‌ಗಳ ಬೆಲೆಯು ಹತ್ತು ಸಾವಿರದೊಳಗೆ ಇದೆ. ಆದರೆ ಇವೆರಡರಲ್ಲಿ ಯಾವುದು ಉತ್ತಮ ಆಯ್ಕೆ?

ಹೌದು, ಶಿಯೋಮಿಯ ರೆಡ್ಮಿ 9 ಮತ್ತು ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್‌ಗಳು ಬಜೆಟ್ ಪ್ರೈಸ್‌ಟ್ಯಾಗ್ ನಲ್ಲಿ ಕಾಣಿಸಿಕೊಂಡಿವೆ. ಆದರೆ ಫೀಚರ್ಸ್‌ಗಳಲ್ಲಿ ಭಿನ್ನತೆ ಅಧಿಕವಾಗಿವೆ. ಮುಖ್ಯವಾಗಿ ಕ್ಯಾಮೆರಾ, ಪ್ರೊಸೆಸರ್‌ನಲ್ಲಿ ಭಿನ್ನತೆ ಕಾಣಬಹುದಾಗಿದೆ. ಹಾಗಾದರೇ 10,000ರೂ ಪ್ರೈಸ್‌ಟ್ಯಾಗ್‌ನಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನು ಖರೀದಿಸಬೇಕು. ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳ ಭಿನ್ನತೆಗಳೆನು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಭಿನ್ನತೆ
ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.53-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 19.5: 9 ರಚನೆಯ ಅನುಪಾತವನ್ನು ಹೊಂದಿದ್ದು, 394 pp ಪಿಕ್ಸೆಲ್ ಸಾಂದ್ರತೆಯನ್ನ ಒಳಗೊಂಡಿದೆ. ಇನ್ನು ರೆಡ್ಮಿ 9 ಸ್ಮಾರ್ಟ್‌ಫೋನ್ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ವಾಟರ್ ಡ್ರಾಪ್ ನಾಚ್ ಮಾದರಿಯಲ್ಲಿದ್ದು, ಸುತ್ತಲೂ ತೆಳುವಾದ ಅಂಚನ್ನು ಹೊಂದಿದೆ. ಆದರೆ ರೆಡ್ಮಿ 9 ಪ್ರೈಮ್ ರೆಸಲ್ಯೂಶನ್ ಉತ್ತಮ ಅನಿಸುತ್ತದೆ.

ಪ್ರೊಸೆಸರ್ ಭಿನ್ನತೆ
ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದನ್ನು ಮಾಲಿ-ಜಿ 52 ಜಿಪಿಯು ಬೆಂಬಲಿಸುತ್ತದೆ. ಹಾಗೆಯೇ 4GB RAM ಮತ್ತು 64GB ಮತ್ತು 128GB ಆಯ್ಕೆಗಳಿವೆ. ಇನ್ನು ರೆಡ್ಮಿ 9 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್‌ಅ ನ್ನು ಪಡೆದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 4GB ಮತ್ತು 3GB RAM ಹಾಗೂ 64GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.

ಕ್ಯಾಮೆರಾ ಭಿನ್ನತೆ
ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ f/ 2.2 ಲೆನ್ಸ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಅನ್ನು ಹೊಂದಿದೆ. ಅದೇ ರೀತಿ ರೆಡ್ಮಿ 9 ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 8ಎಂಪಿಯ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದೆ. ಇನ್ನು ತೃತೀಯ ಕ್ಯಾಮೆರಾವು 5ಎಂಪಿ ಹಾಗೂ ನಾಲ್ಕನೇ ಕ್ಯಾಮೆರಾ 2ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿಗಾಗಿ 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಲಭ್ಯತೆ
ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್ 5,020mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅದೇ ರೀತಿ ರೆಡ್ಮಿ 9 ಸ್ಮಾರ್ಟ್‌ಫೋನ್ 5020mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದ್ದು, ಇದರೊಂದಿಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ. ಬ್ಯಾಟರಿ ಸಾಮರ್ಥ್ಯದಲ್ಲಿ ಈ ಎರಡು ಫೋನ್‌ಗಳ ನಡುವೆ ಹೆಚ್ಚಿನ ಭಿನ್ನತೆ ಇಲ್ಲ.

ಬೆಲೆ ಎಷ್ಟು?
ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್ 4GB RAM ಮತ್ತು 64GB ವೇರಿಯಂಟ್ ಬೆಲೆಯು 9,999ರೂ.ಗಳಾಗಿದೆ. 128GB ವೇರಿಯಂಟ್ ದರವು 11,999ರೂ.ಗಳಾಗಿದೆ. ಇನ್ನು ರೆಡ್ಮಿ 9 ಫೋನಿನ 4GB ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆಯು 8,999ರೂ.ಗಳಾಗಿದೆ.

ಕೊನೆಯ ಮಾತು
ಶಿಯೋಮಿಯ ರೆಡ್ಮಿ 9 ಪ್ರೈಮ್ ಹಾಗೂ ರೆಡ್ಮಿ 9 ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಒಂದೇ ರೀತಿ ಕಂಡುಬಂದರೂ, ಫೀಚರ್ಸ್‌ಗಳಲ್ಲಿ ಬದಲಾವಣೆಗಳಿವೆ. ಪ್ರೊಸೆಸರ್, ಕ್ಯಾಮೆರಾ, ಡಿಸ್‌ಪ್ಲೇ ಫೀಚರ್ಸ್‌ಗಳಿಂದ ನೋಡುವುದಾದರೇ ರೆಡ್ಮಿ 9 ಪ್ರೈಮ್ ಸೂಕ್ತ ಅನಿಸುತ್ತದೆ. ರೆಡ್ಮಿ 9 ಫೋನ್ ಸಹ ಕ್ಯಾಮೆರಾ ಹಾಗೂ ಬ್ಯಾಟರಿ ಫೀಚರ್ಸ್‌ಗಳಿಂದ ಗಮನ ಸೆಳೆಯುವಂತಿದೆ.


Click it and Unblock the Notifications








