ಬರ್ತಿದೆ ಹೊಸ Redmi ಫೋನ್.. ಡಿಸೈನ್, ಫೀಚರ್ಸ್ ಲೀಕ್! ಯಾವಾಗ ಲಾಂಚ್?
ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿಯ (Xiaomi) ಉಪ ಬ್ರಾಂಡ್ ರೆಡ್ಮಿ (Redmi) ಶೀಘ್ರದಲ್ಲೇ 'K' ಸರಣಿಯಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದರಲ್ಲಿ Redmi K80, Redmi K80 Pro ಮತ್ತು Redmi K80 Pro Plus ಫೋನ್‌ಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ. ಈ ಮಧ್ಯೆ, ರೆಡ್ಮಿ K80 ಪ್ರೊ (Redmi K80 Pro) ಫೋನಿನ ಫೀಚರ್ಸ್ ಮತ್ತು ವಿನ್ಯಾಸದ ವಿವರಗಳು ಸೋರಿಕೆಯಾಗಿವೆ. ಆ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಸೋರಿಕೆಯ ಪ್ರಕಾರ, ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ ಫ್ಲಾಟ್ OLED ಡಿಸ್ಪ್ಲೇ, ಪಂಚ್ ಹೋಲ್ ಕಟೌಟ್, ತೆಳುವಾದ ಬೆಜೆಲ್‌ಗಳು, 2K ರೆಸಲ್ಯೂಶನ್ ಮತ್ತು ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಬಿಡುಗಡೆಯಾಗಲಿದೆ. ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ರೆಡ್ಮಿ K80 ಪ್ರೊ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿಪ್‌ಸೆಟ್ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಕ್ಯಾಮೆರಾ ಸೆಟಪ್ ಬಗ್ಗೆ ನೋಡುವುದಾದರೆ, ರೆಡ್ಮಿ K80 ಪ್ರೊ ಮೊಬೈಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ರಚನೆಯನ್ನು ಹೊಂದಿರಬಹುದು. ಇದು 50MP ಮುಖ್ಯ ಕ್ಯಾಮೆರಾ, 50MP ಟೆಲಿಫೋಟೋ ಲೆನ್ಸ್ ಮತ್ತು ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ಮುಂಬರುವ ರೆಡ್ಮಿ K80 ಪ್ರೊ ಫೋನಿನ ಬ್ಯಾಟರಿಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಹಿಂದಿನ ಸೋರಿಕೆಯ ಪ್ರಕಾರ, ರೆಡ್ಮಿ K80 ಪ್ರೊ ಮೊಬೈಲ್ 5500mAh ಅಥವಾ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಮತ್ತು 120 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ರೆಡ್ಮಿ K80 ಪ್ರೊ ಡಿಸೈನ್ ಲೀಕ್
ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಪ್ರಕಾರ, ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ರೌಂಡ್ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರುತ್ತದೆ. ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಅಲಂಕಾರಿಕ ಸ್ಟಡ್‌ಗಳು ಇರುವುದಿಲ್ಲ. ಆದರೆ, ಗಾಜಿನ ಹಿಂಭಾಗ ಮತ್ತು ಲೋಹದ ಮಧ್ಯದ ಚೌಕಟ್ಟು ಇದೆ.
ಈ ಸುದ್ದಿ ಓದಿದ್ದೀರಾ?: ಕೇವಲ 7,500 ರೂ.! ಕಮ್ಮಿ ಬೆಲೆಗೆ Oppo A3 ಮತ್ತು A3x ಬಿಡುಗಡೆ; ವಿಶೇಷತೆಗಳೇನು?
ರೆಡ್ಮಿ K70 ಪ್ರೊ ವೈಶಿಷ್ಟ್ಯಗಳು
ರೆಡ್ಮಿ K70 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ TCL C8 OLED ಡಿಸ್ಲ್ಪೇಯನ್ನು ಹೊಂದಿದೆ. 2K ರೆಸಲ್ಯೂಶನ್, 4000 nits ಗರಿಷ್ಠ ಬ್ರೈಟ್‌ನೆಸ್ ಮತ್ತು120 Hz ರಿಫ್ರೆಶ್ ದರವನ್ನು ಹೊಂದಿದೆ. ಈ ರೆಡ್ಮಿ K70 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ Qualcomm Snapdragon 8 Gen 3 ಚಿಪ್‌ಸೆಟ್ ಅನ್ನು ಬಳಸಲಾಗಿದೆ. Redmi K70 Pro ಮೊಬೈಲ್ 24GB LPDDR5 RAM ಮತ್ತು 1TB UFS 4.0 ಸ್ಟೋರೇಜ್ ಅನ್ನು ಹೊಂದಿದೆ.
ಟ್ರಿಪಲ್ ಕ್ಯಾಮೆರಾ ಸೆಟಪ್
ರೆಡ್ಮಿ K70 ಪ್ರೊ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50MP OIS ಪ್ರಾಥಮಿಕ ಕ್ಯಾಮೆರಾ, 50MP ಟೆಲಿಫೋಟೋ 2x ಜೂಮ್ ಲೆನ್ಸ್ ಮತ್ತು 12MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಇನ್ನೂ ರೆಡ್ಮಿ K70 ಪ್ರೊ ಮೊಬೈಲ್‌ನಲ್ಲಿ ಕಂಪನಿಯು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಇದು 120 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ವೈ-ಫೈ ನಂತಹ ಸೌಲಭ್ಯಗಳನ್ನು ಹೊಂದಿದೆ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವಿಡಿಯೋಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








