Redmi: ರೆಡ್ಮಿಯ ಈ ಸ್ಮಾರ್ಟ್‌ಫೋನ್‌ಗೆ 38% ರಿಯಾಯಿತಿ, 50MP ಕ್ಯಾಮೆರಾ..
ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphones) ವಿಶೇಷ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ವಿವಿದ ಪ್ರಯೋಜನಗಳನ್ನು ನೀಡುತ್ತಿವೆ. ಅದರಲ್ಲೂ ರೆಡ್ಮಿ ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದ್ದು, ಭಿನ್ನ ಅನುಭವ ನೀಡುತ್ತಿವೆ.
ಹೌದು, ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ (Redmi Note 11 smartphone) ಇದೀಗ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 64 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ. ಜೊತೆಗೆ 50MP ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 17,999 ರೂ.ಗಳ ಸಾಮಾನ್ಯ ಬೆಲೆಯಲ್ಲಿ ಕಾಣಿಸಿಕೊಂಡಿತ್ತು. ಆದರೆ, ನೀವು ಇದನ್ನು ಈಗ 10,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಬಜೆಟ್ ಬೆಲೆಯ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ 38% ರಿಯಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ ಇನ್ನೂ ಕಡಿಮೆ ಬೆಲೆಗೆ ಬ್ಯಾಂಕ್ ಆಫರ್ ಮೂಲಕ ಖರೀದಿ ಮಾಡಬಹುದು.
ಬ್ಯಾಂಕ್ ಆಫರ್ ಬರೋಡಾ ಕಾರ್ಟ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 10% ರಿಯಾಯಿತಿ, ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸಿಗಲಿದೆ. ಈ ಮೂಲಕ ಈ ಫೋನ್ ಖರೀದಿಯಲ್ಲಿ ಇನ್ನೂ ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಬೆಲೆಗೆ ಈ ಫೋನ್ ಯೋಗ್ಯವೇ ಅನ್ನೋ ಮಾಹಿತಿಯನ್ನು ತಿಳಿಯಲು ಫೀಚರ್ಸ್ ಕಡೆ ಗಮನಹರಿಸಿ.

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೊಂದಿಗೆ 409 ppi ಸಾಂದ್ರತೆ, 84.5% ಸ್ಕ್ರೀನ್-ಟು-ಬಾಡಿ ಅನುಪಾತದ ಮೂಲಕ ಉತ್ತಮ ವೀಕ್ಷಣೆ ನೀಡಲಿದೆ. ಅಲ್ಲದೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿದೆ.
ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಓಎಸ್‌ನಲ್ಲಿ ರನ್ ಆಗಲಿದೆಯಾದರೂ ನೀವು ಇದನ್ನು ಆಂಡ್ರಾಯ್ಡ್ 13, ಎಂಐಯುಐ 14 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಜೊತೆಗೆ ಈ ಫೋನ್ ಕ್ವಾಲ್ಕಾಮ್ SM6225 ಸ್ನಾಪ್ಡ್ರಾಗನ್ 680 4G (6 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೊ 610 ಜಿಪಿಯು ಬಲದೊಂದಿಗೆ 64GB ಹಾಗೂ 4GB RAM ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ.
ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಅದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಆಯ್ಕೆ ಪಡೆದಿದ್ದು, ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಆಯ್ಕೆ ಕಾಣಬಹುದಾಗಿದೆ. ಜೊತೆಗೆ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 60 ನಿಮಿಷಗಳಲ್ಲಿ 33W ವೈರ್ಡ್ ಚಾರ್ಜರ್ ಮೂಲಕ 100% ಚಾರ್ಜ್ ಮಾಡಬಹುದಾಗಿದೆ. ಇದರೊಂದಿಗೆ 3.5 ಎಂಎಂ ಜ್ಯಾಕ್, 24 ಬಿಟ್/192kHz ಹೈ-ರೆಸ್ ಆಡಿಯೋ, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್, ಗ್ಲೋನಾಸ್, ಬಿಡಿಎಸ್, ಗೆಲಿಲಿಯೋ ಸ್ಥಾನೀಕರಣ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಅಕ್ಸೆಲೆರೊಮೀಟರ್, ಗೈರೊ, ದಿಕ್ಸೂಚಿ ಸೇರಿದಂತೆ ಅನೇಕ ಫೀಚರ್ಸ್ ಅನ್ನು ಈ ಫೋನ್‌ನಲ್ಲಿ ಕಾಣಬಹುದು.


Click it and Unblock the Notifications








