Subscribe to Gizbot

ರೆಡ್‌ಮಿ ನೋಟ್ 4, ರೆಡ್‌ಮಿ 4 ಮತ್ತು ರೆಡ್‌ಮಿ 4A ಒಟ್ಟಿಗೆ ಬುಕ್ ಮಾಡಬಹುದು..!!!!

Written By:

ಶಿಯೋಮಿ ಇದೇ ಮೊದಲ ಬಾರಿಗೆ ತನ್ನ ಮೂರು ಬಹು ಬೇಡಿಕೆಯ ಸ್ಮಾರ್ಟ್‌ ಫೋನ್ ಗಳನ್ನು ಒಟ್ಟಾಗಿ ಕೊಂಡು ಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದ್ದು, ಗ್ರಾಹಕರು ಇಂದು ರೆಡ್‌ಮಿ ನೋಟ್ 4, ರೆಡ್‌ಮಿ 4 ಮತ್ತು ರೆಡ್‌ಮಿ 4A ಸ್ಮಾರ್ಟ್‌ಫೋನ್‌ಗಳನ್ನು ಒಟ್ಟಾಗಿ ಪ್ರೀ ಆರ್ಡರ್ ಮಾಡುವ ಅವಕಾಶವನ್ನು ನೀಡಿದೆ.

ರೆಡ್‌ಮಿ ನೋಟ್ 4, ರೆಡ್‌ಮಿ 4 ಮತ್ತು ರೆಡ್‌ಮಿ 4A ಒಟ್ಟಿಗೆ ಬುಕ್ ಮಾಡಬಹುದು..!!!!

ಓದಿರಿ: ಶಿಯೋಮಿಯಿಂದ ಗ್ರಾಹಕರಿಗೆ ಆಚ್ಚರಿಯ ಕೊಡುಗೆ..!! 'ರಿವಾರ್ಡ್ ಮಿ'

ಜೂನ್ 16ರಂದು 12ಗಂಟೆಗೆ ಪ್ರೀ ಆರ್ಡರ್ ಓಪನ್ ಆಗಲಿದೆ. ಈ ಹಿಂದೆ ಶಿಯೊಮಿಯ ಫೋನ್‌ಗಳು ವಿವಿಧ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಈ ಮೂರು ಫೋನ್‌ಗಳು ಮಾರಾಟವಾಗುತ್ತಿದ್ದವೂ ಆದರೆ ಇದೇ ಮೊದಲ ಬಾರಿಗೆ Mi.comನಲ್ಲಿ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕೊಂಡುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನೀದು ಪ್ರೀ ಆರ್ಡರ್:

ಏನೀದು ಪ್ರೀ ಆರ್ಡರ್:

ಶಿಯೊಮಿ ತನ್ನ ಮಿ.ಕಾಮ್ ಮೂಲಕ ಗ್ರಾಹಕರಿಗೆ ತನ್ನ ಮೊಬೈಲ್ ಗಳನ್ನು ಮುಂಗಡವಾಗಿ ಹಣವನ್ನು ಪಾವತಿ ಮಾಡಿ ಮೊಬೈಲ್ ಖರೀದಿಸಲು ಮಾಡಿಕೊಟ್ಟಿರುವ ಅವಕಾಶ ಇದಾಗಿದೆ. ನೀವು ಫೋನ್ ಬುಕ್ ಮಾಡಿದ ಮೇಲೆ ನಿಮ್ಮ ಲೋಕೆಷ್ ಅನುಗುಣವಾಗಿ 15 ದಿನದ ಒಳಗೆ ನಿಮ್ಮ ಫೋನ್ ಕೈಸೇರಲಿದೆ. ಇದರಲ್ಲಿ ಕ್ಯಾಷ್ ಆನ್ ಡಿಲಿವರಿ ಸೌಲಭ್ಯವಿಲ್ಲ.

ರೆಡ್‌ಮಿ ನೋಟ್ 4 ವಿಶೇಷತೆಗಳು:

ರೆಡ್‌ಮಿ ನೋಟ್ 4 ವಿಶೇಷತೆಗಳು:

ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನು ಮೂರು ವಿಧದಲ್ಲಿ ಲಭ್ಯವಿದ್ದು, 2GB RAM/32 GB, 3GB RAM/32GB ಮತ್ತು 4GB RAM/64GB ಮಾದರಿಗಳಲ್ಲಿ ಮಾರಾಟವಾಗುತ್ತಿದೆ. ರೆಡ್‌ಮಿ ನೋಟ್ 4 ಪೋನ್‌ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆರ್ ಅಳವಡಿಸಲಾಗಿದ್ದು, 13MP ಹಿಂಬದಿಯ ಕ್ಯಾಮೆರಾ ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ. 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ.

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

5 ಇಂಚಿನ HD (720x1280 p) ಡಿಸ್‌ಪ್ಲೇ 2.5D ಕರ್ವಡ್ ಗ್ಲಾಸ್ ವಿನ್ಯಾಸ, ಆಕ್ಟಾ ಕೋರ್ ಸಾಪ್ ಡ್ರಾಗನ್ 420 ಪ್ರೋಸೆಸರ್, ಅಲ್ಲದೇ 2GB/3GB/4GB RAM ಅನ್ನು ನೀಡಲಾಗಿದೆ. ಅಲ್ಲದೇ 16GB/32GB/64GB ಇಂಟರ್ನಲ್ ಮೆಮೊರಿಯೂ ಸಹ ಇದೆ. ಇದರೊಂದಿಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗದೆ. ಹಿಂಭಾಗದಲ್ಲಿ 13 MP ಕ್ಯಾಮೆರಾ, ಡ್ಯುಯಲ್ LED ಫ್ಲಾಷ್ ಮುಂಭಾಗದಲ್ಲಿ 5MP ಕ್ಯಾಮೆರಾ ಹಾಗೂ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಶಿಯೋಮಿ ರೆಡ್‌ಮಿ 4A ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4A ವಿಶೇಷತೆಗಳು:

ಈ ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಇದ್ದು, 720x1280p ರೆಸಲ್ಯೂಷನ್ ಹೊಂದಿದೆ. ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ 1.4Ghz ವೇಗವನ್ನು ಹೊಂದಿದೆ. 2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಇದರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. LED ಫ್ಲಾಷ್ ಸಮೇತ 13 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾ 3120 mAh ಬ್ಯಾಟರಿಯನ್ನು ಈ ಪೋನಿನಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
If you had been waiting to buy a Xiaomi Redmi Note 4, Redmi 4 or a Redmi 4A, head over to Mi.com/in at 12PM today to pre-order. to konw more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot