'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನಿಗಾಗಿ ಇನ್ಮುಂದೆ ಕಾಯುವ ಅಗತ್ಯವಿಲ್ಲ.!!

|

ಆತ್ಮೀಯ ಸ್ಮಾರ್ಟ್‌ಫೋನ್‌ ಗ್ರಾಹಕರೇ, ಶಿಯೋಮಿಯ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನಿಗಾಗಿ ನೀವು ಇನ್ಮುಂದೆ ಕಾಯುವ ಅಗತ್ಯವಿಲ್ಲ.! ಏಕೆಂದರೇ ಭಾರತೀಯ ಗ್ರಾಹಕರನ್ನು ಜಾತಕ ಪಕ್ಷಿಯಂತೆ ಕಾಯಿಸುತ್ತಿರುವ ಶಿಯೋಮಿ ಕಂಪನಿಯ ಬಹುನಿರೀಕ್ಷಿತ 'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್‌ ಇದೀಗ ರಿಲೀಸ್ ಆಗುವ ಸಮಯ ಹತ್ತಿರ ಬಂದಿದೆ. ಹೀಗಾಗಿ ಗ್ರಾಹಕರು ಇನ್ನೇನಿದ್ದರೂ ಖರೀದಿಗೆ ಮುಂದಾಗಬೇಕು ಅಷ್ಟೇ.!

'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನಿಗಾಗಿ ಇನ್ಮುಂದೆ ಕಾಯುವ ಅಗತ್ಯವಿಲ್ಲ.!!

ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸೆನ್ಸೇಷನಲ್ ಸುದ್ದಿ ಮಾಡಿರುವ ಶಿಯೋಮಿಯ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನ್‌, ಭಾರತಕ್ಕೆ ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ ಎಂದು ಶಿಯೋಮಿಯ ಕಂಪನಿಯ ಭಾರತದ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ 'ಮನು ಕುಮಾರ ಜೈನ್' ಟ್ವಿಟ್ ಮಾಡಿದ್ದಾರೆ. ಆದರೆ ಬಹುತೇಕ ಮಾಹಿತಿಗಳು ಇದೇ ಫೆಬ್ರುವರಿಯಲ್ಲಿ 'ರೆಡ್ಮಿ ನೋಟ್ 7 ಪ್ರೋ' ಎಂಟ್ರಿ ಕೊಡುವುದು ಖಚಿತ ಎನ್ನುತ್ತಿವೆ.

'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನಿಗಾಗಿ ಇನ್ಮುಂದೆ ಕಾಯುವ ಅಗತ್ಯವಿಲ್ಲ.!!

ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನಿನ ಬಿಡುಗಡೆಯ ಸುದ್ದಿ ಒಂದೆಡೆಯಾದರೇ ಇನ್ನೂ, 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿರಲಿರುವ ಈ ಸ್ಮಾರ್ಟ್‌ಫೋನ್‌ ಬೆಲೆಯ ಬಗ್ಗೆಯು ಗ್ರಾಹಕರಲ್ಲಿ ಸಾಕಷ್ಟು ಕನ್‌ಫ್ಯೂಶನ್ ಇದೆ. ಆದರೆ ರೆಡ್ಮಿ ನೋಟ್ 7 ಪ್ರೋ ಬೆಲೆ ಭಾರತದಲ್ಲಿ 10,000 ರೂ.ಗಳ ಒಳಗೆ ಇರಲಿದೆ ಎನ್ನಲಾಗುತ್ತಿದೆ. ಹಾಗಾದರೇ ಬಹುನಿರೀಕ್ಷಿತ 'ರೆಡ್ಮಿ ನೋಟ 7 ಪ್ರೋ' ಸ್ಮಾರ್ಟ್‌ಪೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲಿ ಮುಂದೆ ಓದಿರಿ.

ಬಿಗ್ ಡಿಸ್‌ಪ್ಲೇ!

ಬಿಗ್ ಡಿಸ್‌ಪ್ಲೇ!

ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.4 ಇಂಚಿನ ವಿಶಾಲ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇ ಮೇಲ್ಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ನೀಡಲಾಗಿದ್ದು, ಇದು ಸ್ಕ್ರೀನ್ ರಕ್ಷಣೆ ಒದಗಿಸುತ್ತದೆ. ಫೋನ್‌ ಬಾಹ್ಯವಾಗಿ ನೋಡಲು ಆಕರ್ಷಿತವಾಗಿದ್ದು, ನಾಲ್ಕೂ ಮೂಲೆಗಳಲ್ಲಿ ಕಡಿಮೆ ಅಂಚು ಹೊಂದಿದೆ ಇದು ಸ್ಮಾರ್ಟ್‌ಫೋನಿನ ಸೌಂದರ್ಯವನ್ನು ಹೆಚ್ಚಿಸಿದೆ.

ಪ್ರೊಸೆಸರ್

ಪ್ರೊಸೆಸರ್

ಕ್ವಾಲಂ ಎಸ್‌ಡಿಎಮ್675 ಮತ್ತು ಸ್ನಾಪ್‌ಡ್ರಾಗನ್ 675 ಪವರ್ ಫುಲ್ ಪ್ರೊಸೆಸರ್ ಹೊಂದಿರುವುದು ಇದರೊಂದಿಗೆ 6GB RAM ಮತ್ತು 128GB ಆಂತರಿಕ ಶೇಖರಣಾ ಸಾಮರ್ಥ್ಯ ನೀಡಲಿರುವುದು ಈ ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷ. ಉತ್ತಮ ಪ್ರೊಸೆಸರ್ ಜೊತೆಗೆ ಅತ್ಯುತ್ತಮ RAM ಸಾಮರ್ಥ್ಯ ಹೊಂದಿರುವುದರಿಂದ ಈ ಸ್ಮಾರ್ಟ್‌ಫೋನ್ ಕಾರ್ಯದಕ್ಷತೆ ವೇಗವಾಗಿರುವುದು.

ಸ್ಪೆಷಲ್ ಕ್ಯಾಮೆರಾ

ಸ್ಪೆಷಲ್ ಕ್ಯಾಮೆರಾ

ಶಿಯೋಮಿ ಇದೇ ಮೊದಲ ಭಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿರುವ ಕ್ಯಾಮೆರಾವನ್ನು ತನ್ನ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಪರಿಚಯಿಸುತ್ತಿದೆ. ಇನ್ನೂ ಈ ಕ್ಯಾಮೆರಾದಲ್ಲಿ ಸೋನಿಯ IMX586 ಸೆನ್ಸಾರ್ ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದರೊಂದಿಗೆ ಇನ್ನೊಂದು 5 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಸಹ ನೀಡಲಾಗಿದ್ದು, ಸೆಲ್ಫೀಗಾಗಿ 13 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುತ್ತಿದೆ.

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ಮೊದಲಿನಿಂದಲೂ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯವನ್ನು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸುತ್ತಾ ಬಂದಿದ್ದು, ಇದೀಗ ತನ್ನ ಬಹುನಿರೀಕ್ಷಿತ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಸಹ 4000mAh ಸಾಮರ್ಥ್ಯ ಹೊಂದಿದ ಪವರ್‌ಫುಲ್ ಬ್ಯಾಟರಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಫಾಸ್ಟ್ ಚಾರ್ಜರ್ ಸಹ ನೀಡಲಾಗುತ್ತಿದ್ದು, ಇದರಿಂದ ಸ್ಮಾರ್ಟ್‌ಫೋನ್‌ ಬೇಗನೆ ಚಾರ್ಜ್ ಆಗುತ್ತದೆ.

ರಿಲೀಸ್ ಯಾವಾಗ?

ರಿಲೀಸ್ ಯಾವಾಗ?

ಗ್ರಾಹಕರ ನಿರೀಕ್ಷೆಯನ್ನು ಹೆಚ್ಚಿಸಿರುವ ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ರಿಲೀಸ್ ಯಾವಾಗ ಎನ್ನುವುದು ಇನ್ನೂ ಕಂಪನಿಯಿಂದ ಅಧಿಕೃತ ದಿನಾಂಕ ಪ್ರಕಟವಾಗಿಲ್ಲ. ಆದರೆ ಇದೇ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದರ ಬೆಲೆಯು 10,000 ರೂ.ಗಳ ಒಳಗಡೆ ಇರಲಿದೆ ಎಂದು ಊಹಿಸಲಾಗುತ್ತಿದೆ.

Best Mobiles in India

English summary
Redmi Note 7 was launched in China in January, and has been teased to launch in India soon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X