'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಗ್ರಾಹಕರ ನಿದ್ದೆಗೆಡುಸುತ್ತಿದೆ.!!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾದ ಶಿಯೋಮಿ ತನ್ನ ವಿಶೇಷ ಫೀಚರ್ಸ್‌ಹೊಂದಿದ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ಪರಿಚಯಿಸುವುದರ ಮೂಲಕ ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಇದೀಗ ಕಂಪನಿಯು 'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ ಸ್ಮಾರ್ಟ್‌ಫೋನ್ ಪ್ರಿಯರ ನಿದ್ದೆಗೆಡಸಿದೆ.!

'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಗ್ರಾಹಕರ ನಿದ್ದೆಗೆಡುಸುತ್ತಿದೆ.!!

ಹೌದು, ಶಿಯೋಮಿಯ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನ್ ತನ್ನ ಅತೀ ವಿಶೇಷ ಫೀಚರ್ಸ್‌ಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಶಿಯೋಮಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಫೀಚರ್ಸ್‌ಗಳನ್ನು ನೀಡುವುದರ ಜೊತೆಗೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾ ಸಾಗಿ ಬಂದಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ನೆಚ್ಚಿನ ಕಂಪನಿಯಾದೆ.

'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಗ್ರಾಹಕರ ನಿದ್ದೆಗೆಡುಸುತ್ತಿದೆ.!!

ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಹೊಂದಿದೆ ಇದರೊಂದಿಗೆ 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವುದು ಈ ಫೋನಿನ್ ಸ್ಪೆಷಲ್ ಸಂಗತಿ ಎನ್ನಬಹುದು. ಹಾಗಾದರೇ ಗ್ರಾಹಕರ ಗಮನವನ್ನು ತನ್ನತ್ತ ಕೇಂದ್ರಿಕರಿಸಿದ ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಸ್ಕ್ರೋಲ್ ಮಾಡಿ ಓದಿರಿ.

ಬಿಗ್ ಡಿಸ್‌ಪ್ಲೇ!

ಬಿಗ್ ಡಿಸ್‌ಪ್ಲೇ!

ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.4 ಇಂಚಿನ ವಿಶಾಲ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇ ಮೇಲ್ಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ನೀಡಲಾಗಿದ್ದು, ಇದು ಸ್ಕ್ರೀನ್ ರಕ್ಷಣೆ ಒದಗಿಸುತ್ತದೆ. ಫೋನ್‌ ಬಾಹ್ಯವಾಗಿ ನೋಡಲು ಆಕರ್ಷಿತವಾಗಿದ್ದು, ನಾಲ್ಕೂ ಮೂಲೆಗಳಲ್ಲಿ ಕಡಿಮೆ ಅಂಚು ಹೊಂದಿದೆ ಇದು ಸ್ಮಾರ್ಟ್‌ಫೋನಿನ ಸೌಂದರ್ಯವನ್ನು ಹೆಚ್ಚಿಸಿದೆ.

ಪ್ರೊಸೆಸರ್

ಪ್ರೊಸೆಸರ್

ಕ್ವಾಲಂ ಎಸ್‌ಡಿಎಮ್675 ಮತ್ತು ಸ್ನಾಪ್‌ಡ್ರಾಗನ್ 675 ಪವರ್ ಫುಲ್ ಪ್ರೊಸೆಸರ್ ಹೊಂದಿರುವುದು ಇದರೊಂದಿಗೆ 6GB RAM ಮತ್ತು 128GB ಆಂತರಿಕ ಶೇಖರಣಾ ಸಾಮರ್ಥ್ಯ ನೀಡಲಿರುವುದು ಈ ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷ. ಉತ್ತಮ ಪ್ರೊಸೆಸರ್ ಜೊತೆಗೆ ಅತ್ಯುತ್ತಮ RAM ಸಾಮರ್ಥ್ಯ ಹೊಂದಿರುವುದರಿಂದ ಈ ಸ್ಮಾರ್ಟ್‌ಫೋನ್ ಕಾರ್ಯದಕ್ಷತೆ ವೇಗವಾಗಿರುವುದು.

ಸ್ಪೆಷಲ್ ಕ್ಯಾಮೆರಾ

ಸ್ಪೆಷಲ್ ಕ್ಯಾಮೆರಾ

ಶಿಯೋಮಿ ಇದೇ ಮೊದಲ ಭಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿರುವ ಕ್ಯಾಮೆರಾವನ್ನು ತನ್ನ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಪರಿಚಯಿಸುತ್ತಿದೆ. ಇನ್ನೂ ಈ ಕ್ಯಾಮೆರಾದಲ್ಲಿ ಸೋನಿಯ IMX586 ಸೆನ್ಸಾರ್ ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದರೊಂದಿಗೆ ಇನ್ನೊಂದು 5 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಸಹ ನೀಡಲಾಗಿದ್ದು, ಸೆಲ್ಫೀಗಾಗಿ 13 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುತ್ತಿದೆ.

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ಮೊದಲಿನಿಂದಲೂ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯವನ್ನು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸುತ್ತಾ ಬಂದಿದ್ದು, ಇದೀಗ ತನ್ನ ಬಹುನಿರೀಕ್ಷಿತ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಸಹ 4000mAh ಸಾಮರ್ಥ್ಯ ಹೊಂದಿದ ಪವರ್‌ಫುಲ್ ಬ್ಯಾಟರಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಫಾಸ್ಟ್ ಚಾರ್ಜರ್ ಸಹ ನೀಡಲಾಗುತ್ತಿದ್ದು, ಇದರಿಂದ ಸ್ಮಾರ್ಟ್‌ಫೋನ್‌ ಬೇಗನೆ ಚಾರ್ಜ್ ಆಗುತ್ತದೆ.

ರಿಲೀಸ್ ಯಾವಾಗ?

ರಿಲೀಸ್ ಯಾವಾಗ?

ಗ್ರಾಹಕರ ಗಮನ ಸೆಳೆದಿರುವ ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ರಿಲೀಸ್ ಯಾವಾಗ ಎನ್ನುವುದು ಇನ್ನೂ ಕಂಪನಿಯಿಂದ ಅಧಿಕೃತ ದಿನಾಂಕ ಪ್ರಕಟವಾಗಿಲ್ಲ. ಆದರೆ ಇದೇ ಪೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

Best Mobiles in India

English summary
We are now waiting for Weibing to announce a Redmi Note 7 Pro launch date.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X