ರೆಡ್ಮಿ ನೋಟ್ 8 ಪ್ರೊ ವಿಮರ್ಶೆ : ಬಜೆಟ್‌ ಬೆಲೆಯಲ್ಲಿ ಬೆಸ್ಟ್‌ ಕ್ಯಾಮೆರಾ ಫೋನ್!

|

ಚೀನಾ ಮೂಲದ ಶಿಯೋಮಿ ಕಂಪನಿಯ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನ ಭರ್ಜರಿ ಯಶಸ್ಸಿನ ಮುಂದುವರಿದ ಭಾಗವಾಗಿ ಇತ್ತೀಚಿಗಷ್ಟೆ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಸ್ಮಾರ್ಟ್‌ಫೋನ್ ಖಂಡಿತಾ 'ರೆಡ್ಮಿ ನೋಟ್ 7 ಪ್ರೊ' ಗಿಂತ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಪಡೆದಿದ್ದು, ಮುಖ್ಯವಾಗಿ ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ಫೀಚರ್‌ನಿಂದ ಹೆಚ್ಚು ಗಮನಸೆಳೆದಿದೆ.

ರೆಡ್ಮಿ ನೋಟ್ 8 ಪ್ರೊ

ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದ್ದು, ಉಳಿದ ಕ್ಯಾಮೆರಾಗಳು 8ಎಂಪಿ+2ಎಂಪಿ+2ಎಂಪಿ ಸೆನ್ಸಾರ್‌ನಲ್ಲಿವೆ. ಹಾಗೆಯೇ ಇದರ ಡಿಸೈನ್ ಆಕರ್ಷಕವಾಗಿದ್ದು, ಮೊದಲ ನೋಟದಲ್ಲಿ ಕಣ್ಮನಸೆಳೆಯುವಂತಿದೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 8GB RAM ಸಾಮರ್ಥ್ಯ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ವೇಗದ ಕಾರ್ಯದಕ್ಷತೆಗೆ 'ಮೀಡಿಯಾಟೆಕ್ ಹಿಲಿಯೊ G90T' ಪ್ರೊಸೆಸರ್‌ ಒಳಗೊಂಡಿದೆ. ಹಾಗಾದರೇ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್‌ ಖರೀದಿಗೆ ಯೋಗ್ಯವೇ?..ಈ ಫೋನಿನ ಇನ್ನಿತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಪ್ರಖರತೆ

ಡಿಸ್‌ಪ್ಲೇ ಪ್ರಖರತೆ

ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇಯು 1080×2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯ ಪ್ರಖರತೆ ಅತ್ಯುತ್ತಮವಾಗಿದ್ದು, ಬಿಸಿಲಿನಲ್ಲಿಯೂ ಡಿಸ್‌ಪ್ಲೇ ಉತ್ತಮವಾಗಿ ಕಾಣಿಸುತ್ತದೆ. ಹಾಗೆಯೇ ಡಿಸ್‌ಪ್ಲೇಯು HDR ಬೆಂಬಲವನ್ನು ಒಳಗೊಂಡಿದೆ. ಗೇಮಿಂಗ್‌ಗೆ ಉತ್ತಮ ಪ್ಲಾಟ್‌ಫಾರ್ಮ್‌ ಅನಿಸುವುದರಲ್ಲಿ ಎರಡು ಮಾತಿಲ್ಲ. ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಕ್ಯಾಮೆರಾ ಕ್ವಾಲಿಟಿ

ಕ್ಯಾಮೆರಾ ಕ್ವಾಲಿಟಿ

ಶಿಯೋಮಿಯ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನಿನ ಪ್ರಾಥಮಿಕ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದ್ದು(ಸ್ಯಾಮ್‌ಸಂಗ್ GW1), ಫೋಟೊಗಳ ಗುಣಮಟ್ಟಕ್ಕೆ ಪೂರಕವಾಗಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದ್ದು, ಈ ಅಲ್ಟ್ರಾ ವೈಲ್ಡ್‌ ಆಂಗಲ್‌ ಕ್ಯಾಮೆರಾ ಉತ್ತಮ ರೆಸಲ್ಯೂಶನ್‌ ಫೋಟೊಗಳನ್ನು ಸೆರೆಹಿಡಿಯುವಲ್ಲಿ ಪ್ರಯೋಜನಕಾರಿಯಾಗಿದೆ. ಹಾಗೆಯೇ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ನಲ್ಲಿದ್ದು, ಡೆಪ್ತ್‌ ಮೋಡ್ ಆಕ್ಟಿವ್ ಮಾಡಿ ಫೋಟೊ ಸೆರೆಹಿಡಿದಾಗ ಫೋಟೊಗಳು ಇನ್ನು ಚೆನ್ನಾಗಿ ಮೂಡಿಬರುತ್ತವೆ. ಇದರೊಂದಿಗೆ ಈ ಕ್ಯಾಮೆರಾಗಳು 30fps ಸಾಮರ್ಥ್ಯದಲ್ಲಿ 1080p ವಿಡಿಯೊ ಸೆರೆಹಿಡಿಯಲು ಬೆಂಬಲ ನೀಡುತ್ತವೆ. ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್‌ನಲ್ಲಿದೆ.

ಪ್ರೊಸೆಸರ್‌ ಕಾರ್ಯ

ಪ್ರೊಸೆಸರ್‌ ಕಾರ್ಯ

'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ 'ಮೀಡಿಯಾ ಟೆಕ್ ಹಿಲಿಯೊ G90T' ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ MIUI 10 ಆಧಾರಿತ ಆಂಡ್ರಾಯ್ಡ್‌ 9 ಪೈ ಓಎಸ್‌ ಪಡೆದುಕೊಂಡಿದೆ. ಹೆಚ್ಚು ಡೇಟಾ ಬೇಡುವ ಗೇಮ್ಸ್‌ಗಳಿಗೆ ಅತ್ಯುತ್ತಮ ಪ್ಲಾಟ್‌ಫಾರ್ಮ್‌ ಒದಗಿಸಲಿದ್ದು, ಮಲ್ಟಿಟಾಸ್ಕ್‌ ಕೆಲಸಗಳು ಸಹ ಕ್ವಿಕ್ ಆಗಿ ನಡೆಯುತ್ತವೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB / 8GB RAM ಮತ್ತು 64GB / 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ತುಂಬಿಕೊಂಡಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಸುಮಾರು 30 ನಿಮಿಷಗಳಲ್ಲಿ ಶೇ.40% ಪರ್ಸೆಂಟ್‌ನಷ್ಟು ಚಾರ್ಜ್ ಒದಗಿಸುವ ಸಾಮರ್ಥ್ಯ ಪಡೆದಿದ್ದು, ಸುಮಾರು 90 ನಿಮಿಷಗಳು ಚಾರ್ಜ್ ಮಾಡಿದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣಗೊಳ್ಳುತ್ತದೆ. ಸೋಶಿಯಲ್ ಆಪ್ಸ್, ಗೇಮಿಂಗ್, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಇತರೆ ಅಗತ್ಯ ಆಪ್ಸ್‌ಗಳ ಬಳಕೆ ನಂತರವು ಬ್ಯಾಟರಿ ಲೈಫ್‌ ಉತ್ತಮ ಅನಿಸಲಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ ಬಜೆಟ್‌ ದರದಲ್ಲಿ ಗುರುತಿಸಿಕೊಂಡಿದ್ದು, ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು 14,999ರೂ.ಗಳು ಆಗಿದೆ. ಇನ್ನು 8GB RAM ಮತ್ತು 128GB ಸ್ಟೋರೇಜ್‌ನ ಟಾಪ್‌ಎಂಡ್ ವೇರಿಯಂಟ್‌ 17,999ರೂ.ಗಳಿಗೆ ಸಿಗಲಿದೆ. ಗ್ರೀನ್, ಹಾಲೊ ವೈಟ್‌ ಮತ್ತು ಶಾಡೋ ಬ್ಲ್ಯಾಕ್ ಕಲರ್‌ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.

ಕೊನೆಯ ಮಾತು

ಕೊನೆಯ ಮಾತು

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ ಹಲವು ಉತ್ತಮ ಫೀಚರ್ಸ್‌ಗಳಿಂದ ಬೆಸ್ಟ್ ಅನಿಸುತ್ತದೆ. ಮುಖ್ಯವಾಗಿ ಈ ಸ್ಮಾರ್ಟ್‌ಫೋನ್ ನಾಲ್ಕು ಕ್ಯಾಮೆರಾ ಹೊಂದಿದ್ದು, ಮೊದಲನೆಯದು 64ಎಂಪಿ ಕ್ಯಾಮೆರಾ ಸೆನ್ಸಾರ್ ಹೊಂದಿದೆ, ಉಳಿದಂತೆ 20ಎಂಪಿ ಸೆಲ್ಫಿ ಕ್ಯಾಮೆರಾ ಆಕರ್ಷಿಸುತ್ತದೆ. ಬ್ಯಾಟರಿ, ಪ್ರೊಸೆಸರ್‌ ಸಹ ಬೆಸ್ಟ್‌ ಎನ್ನಬಹುದು. ಇನ್ನು ಈ ಫೋನ್ ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿರುವುದು ಗ್ರಾಹಕರನ್ನು ಸೆಳೆಯಲು ಮತ್ತೊಂದು ಪ್ಲಸ್‌ ಪಾಯಿಂಟ್‌.

Best Mobiles in India

English summary
The highlight of the Redmi Note 8 Pro is the 64-megapixel quad-camera setup at the back. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X