'ರೆಡ್ಮಿ ನೋಟ್ 8 ಪ್ರೊ' ಮತ್ತು 'ರಿಯಲ್ ಮಿ XT' : ಖರೀದಿಗೆ ಯಾವುದು ಯೋಗ್ಯ!
ಇತ್ತೀಚಿನ ಬಹುತೇಕ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಮತ್ತು ಕ್ವಾಡ್ ಕ್ಯಾಮೆರಾ ಫೀಚರ್ ಹೊಂದಿರುತ್ತವೆ. ಅವುಗಳಲ್ಲಿ ಮುಖ್ಯ ಕ್ಯಾಮೆರಾವು 48ಎಂಪಿ ಇಲ್ಲವೇ 64ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿರುತ್ತದೆ. ಇತ್ತೀಚಿಗೆ ಬಿಡುಗಡೆ ಆದ 'ರೆಡ್ಮಿ ನೋಟ್ 8 ಪ್ರೊ' ಮತ್ತು 'ರಿಯಲ್ ಮಿ XT' ಈ ಬಜೆಟ್ ಸ್ಮಾರ್ಟ್‌ಫೋನ್‌ಗಳು 64ಎಂಪಿ ಕ್ಯಾಮೆರಾ ಸೆನ್ಸಾರ್ ಫೀಚರ್‌ನಿಂದಲೇ ಈಗ ಗ್ರಾಹಕರನ್ನು ಸೆಳೆದಿವೆ. ಆದ್ರೆ ಇವೆರಡರಲ್ಲಿ ಯಾವುದು ಸೂಕ್ತ ಎನ್ನುವ ಪ್ರಶ್ನೆ ಗ್ರಾಹಕರಲ್ಲಿ ಮೂಡಿರದೇ ಇರದು.

ಹೌದು, ಸದ್ಯ ಬಜೆಟ್ ಸ್ಮಾರ್ಟ್‌ಫೋನ್‌ಗಳು ಸಹ ಹೈ ಎಂಡ್ ಕ್ಯಾಮೆರಾ ಫೀಚರ್‌ನೊಂದಿಗೆ ಲಾಂಚ್ ಆಗುತ್ತಿರುವುದು ವಿಶೇಷ. ಆ ಪೈಕಿ ಇತ್ತೀಚಿಗಷ್ಟೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ 'ರೆಡ್ಮಿ ನೋಟ್ 8 ಪ್ರೊ' ಮತ್ತು 'ರಿಯಲ್ ಮಿ XT' ಸ್ಮಾರ್ಟ್‌ಫೋನ್‌ಗಳ ಕೆಲವು ಫೀಚರ್‌ಗಳಲ್ಲಿ ಸಾಮ್ಯತೆ ಹೊಂದಿವೆ. ಬಜೆಟ್ ಬೆಲೆಯಲ್ಲಿ 64ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಖರೀದಿ ಮಾಡ ಬಯಸುವ ಗ್ರಾಹಕರಿಗೆ ಇವೆರಡರಲ್ಲಿ ಯಾವುದು ಉತ್ತಮ ಎನ್ನುವ ಪ್ರಶ್ನೆಗೆ ಉತ್ತರವಾಗಿ ಇಂದಿನ ಈ ಲೇಖನದಲ್ಲಿ ಈ ಎರಡು ಫೋನ್‌ಗಳಲ್ಲಿ ಸಾಮ್ಯತೆ ಇರುವ ಫೀಚರ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಕುರಿತು ತಿಳಿಯಲು ಮುಂದೆ ಓದಿರಿ.

ಡಿಸೈನ್ ಹೇಗಿದೆ
ರೆಡ್ಮಿ ನೋಟ್ 8 ಪ್ರೊ ಮತ್ತು ರಿಯಲ್ ಮಿ XT ಸ್ಮಾರ್ಟ್‌ಫೋನ್‌ಗಳು ಬಾಹ್ಯವಾಗಿ ನೋಡಲು ಬಹುತೇಕ ಒಂದೇ ಡಿಸೈನ್ ಲುಕ್‌ನಲ್ಲಿ ಕಾಣಿಸುತ್ತವೆ. ಹಿಂಬದಿಯ ರಚನೆಯಲ್ಲಿ ಎರಡು ಫೋನ್‌ಗಳಿ ಕ್ವಾಡ್ ಕ್ಯಾಮೆರಾ ರಚನೆ ಪಡೆದಿವೆ. ಆದರೆ ರೆಡ್ಮಿ ನೋಟ್ 8 ಪ್ರೊ ಫೋನ್ ಹಿಂಬದಿಯ ಮಧ್ಯಭಾಗದಲ್ಲಿ ಕ್ಯಾಮೆರಾ ಸೆಟ್‌ಅಪ್ ರಚನೆ ಇದೆ. ಹಾಗೆಯೇ ರಿಯಲ್ ಮಿ XT ಎಡಬದಿಯಲ್ಲಿ ಕ್ಯಾಮೆರಾ ರಚನೆ ಹೊಂದಿದೆ. ಎರಡು ಫೋನ್‌ಗಳು ವಾಟರ್‌ನಾಚ್ ಮಾದರಿಯನ್ನು ಹೊಂದಿವೆ.

ಡಿಸ್‌ಪ್ಲೇ ರಚನೆ
ಡಿಸ್‌ಪ್ಲೇ ಹೋಲಿಕೆಯಲ್ಲಿ 'ರಿಯಲ್ ಮಿ XT' ಫೋನ್‌ಗಿಂತ 'ರೆಡ್ಮಿ ನೋಟ್ 8 ಪ್ರೊ' ಸ್ಕ್ರೀನ್ ಗಾತ್ರ ದೊಡ್ಡದಾಗಿದೆ. 'ರಿಯಲ್ ಮಿ XT' ಫೋನ್ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಹಾಗೆಯೇ 'ರೆಡ್ಮಿ ನೋಟ್ 8 ಪ್ರೊ' 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯು 2340 x 1080 ಪಿಕ್ಸಲ್ ರೆಸಲ್ಯೂಶನ್‌ನಲ್ಲಿದೆ. ಡಿಸ್‌ಪ್ಲೇ ಗಾತ್ರ ದೊಡ್ಡದಿರಲಿ ಎನ್ನುವ ಗ್ರಾಹಕರಿಗೆ ರೆಡ್ಮಿ ನೋಟ್ 8 ಪ್ರೊ ಸೂಕ್ತ ಎನಿಸಲಿದೆ.

ಕ್ಯಾಮೆರಾ ಸೆನ್ಸಾರ್
ರೆಡ್ಮಿ ನೋಟ್ 8 ಪ್ರೊ ಮತ್ತು ರಿಯಲ್ ಮಿ XT ಸ್ಮಾರ್ಟ್‌ಫೋನ್‌ಗಳೆರಡು ಹಿಂಬದಿಯಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿವೆ. ಹಾಗೆಯೇ ಎರಡು ಫೋನ್‌ಗಳ ನಾಲ್ಕು ಕ್ಯಾಮೆರಾ ಸೆನ್ಸಾರ್ ಸಾಮ್ಯತೆ ಪಡೆದಿವೆ. ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿವೆ. ಇನ್ನು ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಪಡೆದಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ನೋಡುವುದಾದರೇ 'ರೆಡ್ಮಿ ನೋಟ್ 8 ಪ್ರೊ' ಫೋನ್ 20ಎಂಪಿ ಸೆನ್ಸಾರ್‌ನಲ್ಲಿದೆ. ಆದರೆ 'ರಿಯಲ್ ಮಿ XT' ಫೋನ್ 16ಎಂಪಿ ಸೆನ್ಸಾರ್‌ನಲ್ಲಿದೆ.

ಪ್ರೊಸೆಸರ್ ಕೆಲಸ
ರೆಡ್ಮಿ ನೋಟ್ 8 ಪ್ರೊ ಫೋನ್ ಇತ್ತೀಚಿನ ಮೀಡಿಯಾ ಟೆಕ್ ಹಿಲಿಯೊ G90T ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಗೇಮಿಂಗ್‌ಗೆ ಬೆಸ್ಟ್ ಪ್ಲಾಟ್‌ಫಾರ್ಮ್ ಎನ್ನಬಹುದು. ಇನ್ನು 'ರಿಯಲ್ ಮಿ XT' ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇದು ಸಹ ಫೋನಿಗೆ ಅತ್ಯುತ್ತಮ ವೇಗ ಒದಗಿಸಲಿದೆ. ರೆಡ್ಮಿ ನೋಟ್ 8 ಪ್ರೊ ಫೋನ್ 6GB RAM + 64GB, 6GB RAM + 128GB ಮತ್ತು 8GB RAM + 128GB ವೇರಿಯಂಟ್‌ನಲ್ಲಿ ಸಿಗಲಿದೆ. ಹಾಗೆಯೇ ರಿಯಲ್ ಮಿ XT' ಫೋನ್ ಸಹ 6GB RAM + 64GB, 6GB RAM + 128GB ಮತ್ತು 8GB RAM + 128GB ಮೂರು ವೇರಿಯಂಟ್‌ಗಳಲ್ಲಿ ಲಭ್ಯ.

ಬ್ಯಾಟರಿ ಲೈಫ್ ಹೇಗಿದೆ
ರೆಡ್ಮಿ ನೋಟ್ 8 ಪ್ರೊ ಫೋನ್ 4500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಅದೇ ರೀತಿ 'ರಿಯಲ್ ಮಿ XT' ಫೋನ್ 4೦00mAh ಸಾಮರ್ಥ್ಯದ ಬ್ಯಾಟರಿ ಲೈಫ್ ಅನ್ನು ಪಡೆದಿದ್ದು, VOOC 3.0 ತಂತ್ರಜ್ಞಾನದ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಹೊಂದಿವೆ.

ಬೆಲೆ ಎಷ್ಟು
ರೆಡ್ಮಿ ನೋಟ್ 8 ಪ್ರೊ ಫೋನ್ ಮೂರು ವೇರಿಯಂಟ್ ಮಾದರಿಗಳನ್ನು ಹೊಂದಿದ್ದು, ಅವುಗಳು 6GB RAM + 64GB(14,999ರೂ), 6GB RAM + 128GB(15,999ರೂ) ಮತ್ತು 8GB RAM + 128GB(17,999ರೂ) ಬೆಲೆಯನ್ನು ಹೊಂದಿವೆ. ಹಾಗೆಯೇ 'ರಿಯಲ್ ಮಿ XT' ಫೋನ್ ಸಹ ಮೂರು ವೇರಿಯಂಟ್‌ಗಳಲ್ಲಿದ್ದು, ಅವುಗಳು 6GB RAM + 64GB(15,999ರೂ), 6GB RAM + 128GB(16,999ರೂ) ಮತ್ತು 8GB RAM + 128GB(18,999ರೂ) ಬೆಲೆಯನ್ನು ಹೊಂದಿವೆ.

ಕೊನೆಯ ಮಾತು
'ರೆಡ್ಮಿ ನೋಟ್ 8 ಪ್ರೊ' ಮತ್ತು 'ರಿಯಲ್ ಮಿ XT' ಸ್ಮಾರ್ಟ್‌ಫೋನ್‌ಗಳೆರಡು ಅತ್ಯುತ್ತಮ ಕಾರ್ಯವೈಖರಿ, ಕ್ಯಾಮೆರಾ, ಬ್ಯಾಟರಿ ಫೀಚರ್ ಹೊಂದಿವೆ. ಹಾಗೆಯೇ ಬೆಲೆಯಲ್ಲಿಯೂ ಹೆಚ್ಚಿನ ವ್ಯತ್ಯಾಸಗಳೆನು ಇಲ್ಲ. ರೆಡ್ಮಿ ನೋಟ್ 8 ಪ್ರೊ ಫೋನ್ ಕ್ಯಾಮೆರಾ, ಬ್ಯಾಟರಿ ಲೈಫ್ ಮತ್ತು ಪ್ರೊಸೆಸರ್‌ಗಳಿಂದ ವಿಶೇಷ ಎನಿಸಲಿದೆ. ಅದೇ ರೀತಿ ರಿಯಲ್ ಮಿ ಎಕ್ಸ್‌ಟಿ ಫೋನ್ ಸಹ ಕ್ಯಾಮೆರಾ, ಆಕರ್ಷಕ ಲುಕ್, ವೇಗದ ಪ್ರೊಸೆಸರ್‌ಗಳಿಂದ ಗುರುತಿಸಿಕೊಂಡಿದೆ.


Click it and Unblock the Notifications








