'ರೆಡ್ಮಿ ನೋಟ್ 8' V/S 'ರಿಯಲ್ ಮಿ 5S' : ಖರೀದಿಗೆ ಯಾವುದು ಬೆಸ್ಟ್.?
ದೇಶಿಯ ಮೊಬೈಲ್ ಮಾರುಕಟ್ಟೆಗೆ ದಿನೇ ದಿನೇ ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಇವೆ. ಅವುಗಳಲ್ಲಿ ದುಬಾರಿ ಬೆಲೆಯ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳು ಅಚ್ಚರಿ ಮೂಡಿಸಿದರೇ, ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಆರ್ಕಷಿಸುತ್ತವೆ. ಸ್ಮಾರ್ಟ್‌ಫೋನ್ ಖರೀದಿಸುವಾಗ ಗ್ರಾಹಕರು ಮುಖ್ಯವಾಗಿ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ, ಫೀಚರ್ಸ್‌ಗಳ ಜೊತೆಗೆ ಡಿಸೈನ್ ಹಾಗೂ ಬೆಲೆಯನ್ನು ಸಹ ಗಮನಿಸುತ್ತಾರೆ.

ಹೌದು, ಬಹುತೇಕ ಗ್ರಾಹಕರು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಕೊಳ್ಳಲು ಮುಂದಾಗುತ್ತಾರೆ ಈ ನಿಟ್ಟಿನಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆನೇ ಹೆಚ್ಚಿನ ಬೇಡಿಕೆ ಎನ್ನಬಹುದು. ಸದ್ಯ ಹತ್ತು ಸಾವಿರದೊಳಗೆ ಹಲವು ಸ್ಮಾರ್ಟ್‌ಫೋನ್‌ಗಳು ಇದ್ದರು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿರುವುದು 'ರೆಡ್ಮಿ ನೋಟ್ 8' ಮತ್ತು 'ರಿಯಲ್ ಮಿ 5s' ಸ್ಮಾರ್ಟ್‌ಫೋನ್‌ಗಳು. ಹಾಗಾದರೇ ಈ ಸ್ಮಾರ್ಟ್‌ಫೋನಗಳ ಫೀಚರ್ಸ್‌ಗಳೆನು ಯಾವುದು ಬೆಸ್ಟ್ ಎನ್ನುವುದನ್ನು ಮುಂದೆ ನೋಡೋಣ ಬನ್ನಿ.

ಡಿಸ್‌ಪ್ಲೇ ಮತ್ತು ಡಿಸೈನ್ ಹೇಗಿದೆ
'ರಿಯಲ್ ಮಿ 5S' ಸ್ಮಾರ್ಟ್‌ಫೋನ್ 720 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಯನ್ನು ಹೊಂದಿದೆ. ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 3+ ರಕ್ಷಣೆಯನ್ನು ಪಡೆದಿದೆ. ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅನುಪಾತವು 89% ಪರ್ಸೆಂಟ್ ಆಗಿದ್ದು, ಡಿಸ್‌ಪ್ಲೇಯ ಪ್ರಖರತೆಯು ಉತ್ತಮವಾಗಿದೆ. ಶಿಯೋಮಿ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ 6.39-ಇಂಚಿನ ಪೂರ್ಣ-ಎಚ್‌ಡಿ + 1080x2340 ಪಿಕ್ಸೆಲ್‌ಗಳು ಪರದೆ ಹೊಂದಿದೆ, 90 ಪ್ರತಿಶತದಷ್ಟು ಸ್ಕ್ರೀನ್-ಟು -ಬಾಡಿ ಅನುಪಾತ ಮತ್ತು 19.5: 9 ಆಕಾರ ಅನುಪಾತ. ಫೋನಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ ಮತ್ತು ವಾಟರ್ ಡ್ರಾಪ್ ಶೈಲಿಯ ನಾಚ್ ಅಪ್ ಫ್ರಂಟ್ ಅನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ
'ರಿಯಲ್ ಮಿ 5S' ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್ ಸಪೋರ್ಟ್ ನೀಡಲಾಗಿದೆ. ಹಾಗೂ ColorOS 6.1 ಬೆಂಬಲ ಸಹ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4GB RAM + 64GB ಮತ್ತು 4GB RAM + 128GB ವೇರಿಯಂಟ್ ಸಾಮರ್ಥ್ಯದ ಎರಡು ಆಯ್ಕೆಗಳನ್ನು ಹೊಂದಿದೆ. ಇನ್ನು 'ರೆಡ್ಮಿ ನೋಟ್ 8' ಫೋನ್ ಸ್ನಾಪ್‌ಡ್ರಾಗನ್ 665 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 6 ಜಿಬಿ RAM ಮತ್ತು 128 ಜಿಬಿ ಆನ್‌ಬೋರ್ಡ್ ಸಂಗ್ರಹ ಪಡೆದಿದೆ. ಹಾಗೂ 4GB ಆಯ್ಕೆಯು ಸಿಗಲಿದೆ. ಪ್ರೊಸೆಸರ್ ವೇಗಕ್ಕೆ ಹೆಚ್ಚಿನ ಬೆಂಬಲ ನೀಡಲು ಆಂಡ್ರಾಯ್ಡ್ 9 ಪೈ ಒದಗಿಸಲಾಗಿದೆ. ಈ ಎರಡು ಫೋನ್‌ಗಳು ಅಧಿಕ ಡೇಟಾ ಬೇಡುವ ಗೇಮ್ಸ್‌ಗೆ ಸಪೋರ್ಟ್ ನೀಡುತ್ತವೆ.

ಕ್ಯಾಮೆರಾ ಸ್ಪೆಷಲ್
'ರಿಯಲ್ ಮಿ 5S' ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.5 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿಯ ಸೆನ್ಸಾರ್ ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 13ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ 'ರೆಡ್ಮಿ ನೋಟ್ 8' ಫೋನಿನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ನೀಡಲಾಗಿದೆ. ಪ್ರಥಮ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಎರಡನೇಯದು 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆನ್ಸಾರ್ ಹೊಂದಿದೆ. ಮತ್ತು ಉಳಿದೆರಡು ಕ್ಯಾಮೆರಾಗಳು 2 ಮೆಗಾಪಿಕ್ಸೆಲ್ ನಲ್ಲಿವೆ. ಇನ್ನು ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಎರಡು ಸಹ 48ಎಂಪಿ ರಿಯರ್ ಕ್ಯಾಮೆರಾ ಹೊಂದಿವೆ.

ಬ್ಯಾಟರಿ ಪವರ್ ಹೇಗಿವೆ
'ರಿಯಲ್ ಮಿ 5S' ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಸಾಮರ್ಥ್ಯ ಪಡೆದಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಈ ಪೋನ್ 12ಗಂಟೆಗಳ ವಿಡಿಯೊ ಪ್ಲೇಬ್ಯಾಕ್ ಮತ್ತು 718 ಗಂಟೆಗಳ ಬ್ಯಾಟರಿ ಸ್ಟ್ಯಾಂಡ್‌ಬೈ ಸಾಮರ್ಥ್ಯವನ್ನು ಪಡೆದಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಇನ್ನು ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿ ಲೈಫ್ ನೀಡಲಾಗಿದೆ. ಮತ್ತು 18W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಒದಗಿಸಿದ್ದು, ಬೇಗನೆ ಚಾರ್ಜ್ ಪಡೆದುಕೊಳ್ಳಲು ನೆರವಾಗಲಿದೆ. ರೆಡ್ಮಿ ನೋಟ್ 8 ಫೋನಿಗಿಂತ ರಿಯಲ್ ಮಿ 5s ಫೋನ್ ಬ್ಯಾಟರಿ ಬಲ ಹೆಚ್ಚಿದೆ.

ಬೆಲೆ ಎಷ್ಟು
'ರಿಯಲ್ ಮಿ 5S' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. ಆರಂಭಿಕ 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 9,999ರೂ.ಗಳಾಗಿದ್ದು, ಹಾಗೂ 4GB RAM + 256GB ವೇರಿಯಂಟ್ ಬೆಲೆಯು 10,999.ಗಳಾಗಿದೆ. ಇನ್ನು 'ರೆಡ್ಮಿ ನೋಟ್ 8' ಸ್ಮಾರ್ಟ್‌ಫೋನ್ ಆರಂಭಿಕ 4 ಜಿಬಿ RAM + 64 ಜಿಬಿ ವೇರಿಯಂಟ್ ಬೆಲೆ 9,999 ರೂ.ಗಳಾದರೆ, 6 ಜಿಬಿRAM + 128 ಜಿಬಿ ಮಾದರಿಯ ರೆಡ್ಮಿ ನೋಟ್ 8 ಬೆಲೆ ಕೇವಲ 12,999 ರೂ.ಗಳಾಗಿವೆ.

ಕೊನೆಯ ಮಾತು
ಹತ್ತು ಸಾವಿರದೊಳಗೆ 'ರಿಯಲ್ ಮಿ 5S' ಮತ್ತು 'ರೆಡ್‌ಮಿ ನೋಟ್ 8' ಈ ಎರಡು ಸ್ಮಾರ್ಟ್‌ಫೋನ್ ಅತ್ಯುತ್ತಮ ಆಯ್ಕೆ ಅನಿಸಲಿವೆ. ಪ್ರಸ್ತುತ ಟ್ರೆಂಡ್‌ನಲ್ಲಿರುವ 48ಎಂಪಿ ಕ್ಯಾಮೆರಾ ಆಯ್ಕೆಯನ್ನು ಈ ಎರಡು ಫೋನ್‌ಗಳು ಹೊಂದಿವೆ. ಜೊತೆಗೆ ಡಿಸ್‌ಪ್ಲೇ ಹಾಗೂ ಪ್ರೊಸೆಸರ್ ಫೀಚರ್ಸ್‌ಗಳಲ್ಲಿಯೂ ಸಾಮ್ಯತೆ ಹೊಂದಿವೆ. ಆದರೆ ಬ್ಯಾಟರಿ ವಿಷಯದಲ್ಲಿ ರಿಯಲ್ ಮಿ ಹೆಚ್ಚಿನ ಸಾಮರ್ಥ್ಯ ಪಡೆದಿದೆ. ಬ್ಯಾಟರಿ ಹೊರತುಪಡಿಸಿದರೇ ಎರಡು ಬಹುತೇಕ ಸಾಮ್ಯತೆ ಪಡೆದಿವೆ.


Click it and Unblock the Notifications








